ಸಾಮಾಜಿಕ ಜಾಲತಾಣದಲ್ಲಿ ತೇಜೋವಧೆ, ಕಿಡಿಗೇಡಿಗಳು ವಿರುದ್ಧ ಕ್ರಮಕ್ಕೆ ಒತ್ತಾಯ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಸೆ.15-ಇತ್ತೀಚಿನ ದಿನಗಳಲ್ಲಿ ಕೆಲವು ಕಿಡಿಗೇಡಿಗಳು ಸಾಮಾಜಿಕ ಜಾಲತಾಣದ ಮೂಲಕ ತೇಜೋವಧೆ ನಡೆಸುತ್ತಿದ್ದು, ತಕ್ಷಣವೇ ಇಂಥವರ ಮೇಲೆ ಕಾನೂನು ಕ್ರಮ ಜರುಗಿಸಿ ಅವರಿಗೆ ಸೇರಿದ ಅಕೌಂಟ್‍ಗಳನ್ನು ನಿಷೇಧ ಮಾಡಬೇಕೆಂದು ಬಿಜೆಪಿ ಬೆಂಗಳೂರು ಮಹಾನಗರ ಒತ್ತಾಯಿಸಿದೆ.

ಈ ಸಂಬಂಧ ಬೆಂಗಳೂರು ಕೇಂದ್ರ ಜಿಲ್ಲೆಯ ಅಧ್ಯಕ್ಷ ಮಂಜುನಾಥ್ ಪಕ್ಷದ ವಕ್ತಾರ ಎ.ಎಚ್.ಆನಂದ್ ಸೇರಿದಂತೆ ಮತ್ತಿತರರು ನಗರ ಪೊಲೀಸ್ ಆಯುಕ್ತ ಕಮಲ್‍ಪಂಥ್ ಅವರನ್ನು ಭೇಟಿಯಾಗಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕೆಂದು ಮನವಿ ಪತ್ರ ಸಲ್ಲಿಸಿದ್ದರು.

ಕಳೆದ ಹಲವು ತಿಂಗಳಿನಿಂದ ಸಾಮಾಜಿಕ ಜಾಲತಾಣಗಳಾದ ಇನ್‍ಸ್ಟ್ರಾಗ್ರಾಂ, ಫೇಸ್‍ಬುಕ್, ವಾಟ್ಸಪ್, ಚಾಟ್ಸ್ ಸೇರಿದಂತೆ ಮತ್ತಿತರಗಳಲ್ಲಿ ಕೆಲವು ಅಶ್ಲೀಲ ಭಾಷೆಯ ಶೀರ್ಷಿಕೆಗಳು ಮತ್ತು ವಾಯ್ಸ್ ಓವರ್‍ಗಳನ್ನು ನೀಡಿ ಲೈಂಗಿಕವಾಗಿ ಹಾಗೂ ಅಸಭ್ಯ ರೀತಿಯಲ್ಲಿ ಪೋಸ್ಟ್ ಮಾಡುತ್ತಿದ್ದಾರೆ ಎಂದು ದೂರು ನೀಡಿದ್ದಾರೆ.

ಇನ್ನು ಕೆಲವರು ಫೇಸ್‍ಬುಕ್ ಖಾತೆಗಳನ್ನು ಹ್ಯಾಕ್ ಮಾಡಿ ಅವರ ಪ್ರೊಫೈಲ್ ಮೂಲಕ ಹಣವನ್ನು ಸುಲಿಗೆ ಮಾಡಿರುವ ಪ್ರಕರಣಗಳು ಕೂಡ ಬೆಳಕಿಗೆ ಬಂದಿದೆ.

ನಕಲಿ ಲಾಟರಿ ಹಗರಣದ ಎಸ್‍ಎಂಎಸ್‍ಗಳು ಹೆಚ್ಚಾಗಿ ಚಲಾವಣೆಯಾಗುತ್ತಿದ್ದು, ಬ್ಯಾಂಕ್ ಮತ್ತು ಸೇವಾ ಪೂರೈಕೆದಾರರ ಹೆಸರಿನಲ್ಲಿ ಸಂದೇಶಗಳು ರವಾನೆಯಾಗುತ್ತಿದೆ ಎಂಬುದನ್ನು ಮಂಜುನಾಥ್ ಮತ್ತು ಆನಂದ್ ಅವರು ಆಯುಕ್ತರ ಗಮನಕ್ಕೆ ತಂದಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ತೇಜೋವಧೆ ಮಾಡಿ ಮಾನಹಾನಿ ಉಂಟು ಮಾಡುತ್ತಿದ್ದಾರೆ. ಇತ್ತೀಚೆಗೆ ಡಿಜೆಹಳ್ಳಿ, ಕೆಜಿಹಳ್ಳಿ ಹಾಗೂ ಪ್ರಸ್ತುತ ಡ್ರಗ್ಸ್ ಜಾಲ ಪ್ರಕರಣದಲ್ಲೂ ಫೋಟೋಶಾಪ್ ಮೂಲಕ ಬೇರೆ ಬೇರೆಯವರ ಹೆಸರುಗಳನ್ನು ಸೇರ್ಪಡೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಕೂಡಲೇ ಇಂತಹ ಸಮಾಜಘಾತುಕ ಶಕ್ತಿಗಳನ್ನು ಪತ್ತೆಹಚ್ಚಿ ಕಾನೂನು ಕ್ರಮ ಜರುಗಿಸಬೇಕೆಂದು ಮನವಿ ಮಾಡಿದರು.

ಮುಖ್ಯವಾಗಿ ಇನ್‍ಸ್ಟಾಗ್ರಾಂಗಳಾದ ಕೃಷ್ಣ ಯಶ್ 2, ಟ್ರೋಲ್ಸ್ ಬೆಂಕಿ, ಹುಬ್ಬಳ್ಳಿ ಕಿಂಗ್ ಟ್ರೋಲ್, ಕಿಂಗ್ ಗರುಡಾ ಅಫಿಶಿಯಲ್ 289, ಎನ್‍ಕೆ 75 ಕಿಂಗ್, ಕರಿಯ ಟ್ರೋಲ್ ಕಿಂಗ್, ಆರ್‍ಸಿ ಟ್ರೋಲ್, ಕೆಎ43, ಡೋಲಿ 143, ಲವ್ ಯು ಫ್ರೆಂಡ್ಸ್, ಅಪ್ಪಿ ಟ್ರೋಲ್ 47, ಬೆಂಕಿ ಟ್ರೋಲ್ ಅಫೀಶಿಯಲ್, ಹೇಮ ಹೇಮಂತ 754, ಅಮ್ಮು ಟ್ರೋಲ್ಸ್, ಕೂಲಿ ಪ್ರಜು 143, ಸಮೀರ್ ಸಾಮ್ 892, ಅಕ್ಕು ಮಾಫಿಯಾ ಟ್ರೋಲ್, ಮಂಡ್ಯ ಯಶ್9, ಟ್ರೋಲ್ಸ್ ಬೆಂಕಿ, ಟ್ರೋಲ್ ಕಿಂಗ್ 7, ಹೇಮಂತ್ ಟ್ರೋಲ್ ಸಿಆರ್‍ಪಿ, ತಗೊ ಟ್ರೋಲ್ 46, ಗೌರವ್ ಗೌಡ 0007, ಎನ್‍ಕೆಎನ್ 2257, ರಾಜೇಶ್‍ಕುಮಾರಿ 810, ಕಾಲ್ಪನಿಕ್ 5005 ಟ್ರೋಲ್, ಕನಕಪುರ ಟ್ರೋಲ್ 56210, ಜೆ.ಕೆ.ಬೆಂಗಳೂರು ತುಂಟ 1018, ಕಿಲಾಡಿ ಗೌಡ್ರು, ಅನಿ 143519, ಆ್ಯಟಿಟ್ಯೂಡ್ ಟ್ರೋಲ್‍ಗರ್ಲ್ 143, ಕೆಎ04 ಡೋಲಿ, ನರಾಕಸುರ ಲಕ್ಕಿ.

ಫೇಸ್‍ಬುಕ್ ಖಾತೆಗಳಾದ ಮಂಗಳೂರು ಮುಸ್ಲಿಂ, ಕರಾವಳಿ ಕರ್ನಾಟಕ ಮುಸ್ಲಿಂ, ಶಿವಮೊಗ್ಗ ಮುಸ್ಲಿಮ್ಸ್, ಬೆಂಗಳೂರು ಮುಸ್ಲಿಮ್ಸ್, ಪಿಎಫ್‍ಐ ಕರ್ನಾಟಕ. ಇವುಗಳ ಬಗ್ಗೆ ಪರಿಶೀಲಿಸಿ ತಪ್ಪಿತಸ್ಥರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಭರವಸೆಯನ್ನು ನಗರ ಪೊಲೀಸ್ ಆಯುಕ್ತ ಕಮಲ್‍ಪಂಥ್ ನೀಡಿದ್ದಾರೆ.

Facebook Comments

Sri Raghav

Admin