ಅಮೆರಿಕಾದಲ್ಲಿ ಭಾರತೀಯರ ಮೇಲಿನ ತಾರತಮ್ಯ ಹೆಚ್ಚಳ..!

ಈ ಸುದ್ದಿಯನ್ನು ಶೇರ್ ಮಾಡಿ

ವಾಷಿಂಗ್ಟನ್,ಜೂ.9-ಅಮೆರಿಕಾದಲ್ಲಿ ನೆಲೆಸಿರುವ ಭಾರತೀಯ ಮೂಲದವರೆ ಅತಿ ಹೆಚ್ಚು ತಾರತಮ್ಯಕ್ಕೆ ಒಳಗಾಗುತ್ತಿರುವ ಜನರಾಗಿದ್ದಾರೆ ಎಂದು ಹೊಸ ಸಮೀಕ್ಷೆಯೊಂದು ಬಹಿರಂಗಪಡಿಸಿದೆ.ಸೋಷಿಯಲ್ ರಿಯಾಲಿಟಿಸ್ ಆಫ್ ಇಂಡಿಯನ್ ಅಮೆರಿಕನ್ಸ್ ಕುರಿತಂತೆ ಕೆಲವು ಸಂಸ್ಥೆಗಳು ನಡೆಸಿರುವ ಜಂಟಿ ಸಮೀಕ್ಷೆಯಲ್ಲಿ ಈ ಅಂಶ ಬೆಳಕಿಗೆ ಬಂದಿದೆ.

ಅಮೆರಿಕದಲ್ಲಿ ನೆಲೆಸಿರುವ 1200ಕ್ಕೂ ಹೆಚ್ಚು ಅನಿವಾಸಿ ಭಾರತೀಯರನ್ನು ಆನ್‍ಲೈನ್ ಮೂಲಕ ಸಂದರ್ಶನ ಮಾಡಿ ಐಎಎಎಸ್ ಸಂಘಟನೆ ಈ ವರದಿ ತಯಾರಿಸಿದೆ.

ಕಳೆದ ಒಂದು ವರ್ಷದಲ್ಲಿ ಭಾರತೀಯರ ಮೇಲಿನ ತಾರತಮ್ಯ ಧೋರಣೆ ಹೆಚ್ಚಾಗಿದೆ. ಇದಕ್ಕೆ ಭಾರತೀಯರ ಮೈ ಬಣ್ಣವೇ ಕಾರಣ. ಹೀಗಾಗಿ ಅಮೆರಿಕದಲ್ಲಿ ನೆಲೆಸಿರುವ ಇಬ್ಬರು ಭಾರತೀಯರಲ್ಲಿ ಒಬ್ಬ ತಾರತಮ್ಯ ಧೋರಣೆಯಿಂದ ನಲುಗಿ ಹೋಗಿದ್ದಾನೆ ಎಂದು ತಿಳಿದುಬಂದಿದೆ.

ಅದರಲ್ಲೂ ಮುಖ್ಯವಾಗಿ ಅಮೆರಿಕದಲ್ಲಿ ಜನಿಸಿರುವಂತಹ ಭಾರತೀಯ ಮೂಲದವರೇ ಅತಿ ಹೆಚ್ಚು ತಾರತಮ್ಯಕ್ಕೆ ಒಳಗಾಗುತ್ತಿದ್ದಾರೆ ಎನ್ನಲಾಗಿದೆ.
ಅಮೆರಿಕದಲ್ಲಿ ನೆಲೆಸಿರುವ ಭಾರತೀಯರು ತಮ್ಮ ಸಮುದಾಯದಲ್ಲೇ ಅತಿ ಹೆಚ್ಚು ವಿವಾಹವಾಗುತ್ತಿರುವುದರಿಂದ ಅವರ ಮೈ ಬಣ್ಣ ಭಾರತೀಯರಂತೆ ಕಾಣುತ್ತಿರುವುದರಿಂದ ಅವರ ಮೇಲೆ ದಬ್ಬಾಳಿಕೆ ಹೆಚ್ಚಾಗುತ್ತಿದೆ ಎಂದು ವರದಿಯಲ್ಲಿ ಉಲ್ಲೇಖವಾಗಿದೆ.

Facebook Comments

Sri Raghav

Admin