ಟೆಕ್ಕಿಗೆ ಒಲಿದ ಗ್ರಾಪಂ ಅಧ್ಯಕ್ಷ ಸ್ಥಾನ..!

ಈ ಸುದ್ದಿಯನ್ನು ಶೇರ್ ಮಾಡಿ

ದಾವಣಗೆರೆ, ಫೆ.14- ಗ್ರಾಮ ಪಂಚಾಯ್ತಿ ಚುನಾವಣೆಗಳು ನಡೆದು ಒಂದಲ್ಲ ಒಂದು ವಿಶೇಷಗಳು ಸುದ್ದಿಯಾದವು. ಅದರಲ್ಲಿ ಅಪ್ಪ -ಮಗನ ಸ್ಪರ್ಧೆ, ಗಂಡ-ಹೆಂಡತಿ, ಅತ್ತೆ -ಸೊಸೆ ಸ್ಪರ್ಧೆಗಳು ಗಮನ ಸೆಳೆದಿತ್ತು. ಈಗ ಫಲಿತಾಂಶ ಬಂದು ಅಧ್ಯಕ್ಷಗಿರಿ ಆಯ್ಕೆಯೂ ಪೂರ್ಣಗೊಂಡಿದೆ. ಲಕ್ಷ ಲಕ್ಷ ಸಂಬಳ ಎಣಿಸುತ್ತಿದ್ದ ಸಾಫ್ಟ್‍ವೇರ್ ಎಂಜಿನಿಯರ್ ಒಬ್ಬರು ಗ್ರಾಮ ಪಂಚಾಯ್ತಿಯ ಅಧ್ಯಕ್ಷ ಗಾದಿ ಏರಿರುವುದು ಕುತೂಹಲ ಮೂಡಿಸಿದೆ.

ಜಗಳೂರು ತಾಲ್ಲೂಕಿನ ಸೊಕ್ಕಿ ಗ್ರಾಮ ಪಂಚಾಯಿತಿಗೆ ಇಂಜಿನಿಯರಿಂಗ್ ಮುಗಿಸಿ ಲಕ್ಷ ಲಕ್ಷ ಸಂಬಳ ಪಡೆಯುತ್ತಿರುವ ಉದ್ಯೋಗಿ ಈಗ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಗೆಲುವು ಸಾಸಿ ಅಧ್ಯಕ್ಷರಾಗಿದ್ದಾರೆ. ಮಾಹಿತಿ ತಂತ್ರಜ್ಞಾನದಲ್ಲಿ ಬಿಇ ಪದವೀಧರೆಯಾದ ಬೆಂಗಳೂರು ನಗರದ ನಿವಾಸಿ ಸ್ವಾತಿ ತಿಪ್ಪೇಸ್ವಾಮಿ, ಅಮೆರಿಕದಲ್ಲಿ ಐದು ವರ್ಷ ಪ್ರತಿಷ್ಠಿತ ಕಂಪನಿಯಲ್ಲಿ ಸಾಫ್ಟ್‍ವೇರ್ ಎಂಜಿನಿಯರ್ ಆಗಿ ಕೆಲಸ ಮಾಡಿದ್ದಾರೆ.

ಗ್ರಾಮೀಣ ಭಾಗದಲ್ಲಿ ಸಮಾಜಸೇವೆ ಮಾಡುವ ತುಡಿತದೊಂದಿಗೆ ವಿದೇಶದಲ್ಲಿನ ಹುದ್ದೆ ತೊರೆದು ತಮ್ಮ ಸ್ವಗ್ರಾಮ ಸೊಕ್ಕೆ ಗ್ರಾಮಕ್ಕೆ ಹಿಂದಿರುಗಿ ಗ್ರಾಮದ ಅಭಿವೃದ್ಧಿ ಗೆ ಶ್ರಮಿಸುತ್ತಿದ್ದಾರೆ. ರಜೆ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಬಂದಿದ್ದ ಸ್ವಾತಿ ತಿಪ್ಪೇಸ್ವಾಮಿ ಸರಿಯಾಗಿ ಮಳೆ ಬೆಳೆ ಇಲ್ಲದೆ ಇಲ್ಲಿನ ಬಡ ಜನರಿಗೆ ಸರಿಯಾಗಿ ಉದ್ಯೋಗ ಸಿಗದೆ ಕಷ್ಟದ ಜೀವನ ಅನುಭವಿಸುತ್ತಿದ್ದಾರೆ. ಹಳ್ಳಿಗಾಡಿನಲ್ಲಿ ಮೂಲ ಸೌಲಭ್ಯಗಳ ಕೊರತೆಯನ್ನು ಕಣ್ಣಾರೆ ಕಂಡಿದ್ದರು.

ಹಳ್ಳಿಗಳಲ್ಲೂ ಕನಿಷ್ಠ ಪ್ರಾಥಮಿಕ ಸೌಕರ್ಯಗಳನ್ನು ಕಲ್ಪಿಸುವ, ಹಳ್ಳಿಗಾಡಿನ ಜನರ ಜೀವನಮಟ್ಟವನ್ನು ಎತ್ತರಿಸುವ ಕನಸನ್ನು ಸ್ವಾತಿ ತಿಪ್ಪೇಸ್ವಾಮಿ ಕಂಡಿದ್ದರು. ಗ್ರಾಮಪಂಚಾಯತಿಯಲ್ಲಿ ಸೌಲಭ್ಯಗಳನ್ನು ಬಡವರಿಗೆ ದೊರಕುವಂತೆ ಮಾಡಿದರೆ ಸಾಕು ಅಭಿವೃದ್ಧಿ ಸಾಧ್ಯ ಎನ್ನುವ ಧ್ಯೇಯ ಇಟ್ಟುಕೊಂಡಿದ್ದ ಸ್ವಾತಿಯವರು ಪಂಚಾಯಿತಿ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಚುನಾವಣೆಗೂ ಸ್ರ್ಪಸಿದರು.

ಉನ್ನತ ಶಿಕ್ಷಣ ಪಡೆದ ಸ್ವಾತಿ ಅತಿ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಸಿದ್ದಾರೆ. ಅಲ್ಲದೆ ಸೊಕ್ಕೆ ಪಂಚಾಯಿತಿ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಯಿತು. ಇಲ್ಲಿ ವಿದ್ಯಾವಂತೆ ಸ್ವಾತಿ ತಿಪ್ಪೇಸ್ವಾಮಿ ಅವರು ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ.

# ತಲೆಮಾರಿನ ರಾಜಕೀಯ ಹಿನ್ನೆಲೆ:
ಇವರಿಗೆ ರಾಜಕೀಯವೇನು ಹೊಸದಲ್ಲ. ಬದಲಿಗೆ ತಲೆಮಾರಿನ ರಾಜಕೀಯ ಹಿನ್ನೆಲೆ ಉಳ್ಳವರಾಗಿದ್ದಾರೆ. ಸ್ವಾತಿ ತಂದೆ ತಿಪ್ಪೆಸ್ವಾಮಿ ತಮ್ಮ ಕುಟುಂಬದ ರಾಜಕೀಯ ಹಿನ್ನೆಲೆಯನ್ನು ಹಂಚಿಕೊಂಡಿದ್ದಾರೆ.

ಬ್ರಿಟೀಷರ ಆಡಳಿತಾವಯಲ್ಲಿ ನಮ್ಮ ತಾತ ತಿಪ್ಪಯ್ಯ ಸೊಕ್ಕೆ ಗ್ರಾಮದಲ್ಲಿ 1920-1931ರ ಅವಯಲ್ಲಿ ಕಂದಾಯ ಇನ್‍ಸ್ಪೆಕ್ಟರ್ ಆಗಿ ಸೇವೆ ಸಲ್ಲಿಸಿz್ದÁರೆ. ನನ್ನ ಅಪ್ಪ ಜಿ. ಮದ್ದಾನಯ್ಯ 1965-1970 ರ ಅವಯವರೆಗೆ ಸೊಕ್ಕೆ ಪಂಚಾಯ್ತಿ ಚೇರಮನ್ ಆಗಿದ್ದರು. ಕಳೆದ ಅವಯಲ್ಲಿ ನಮ್ಮ ಸಂಬಂಕ ಎಚï.ಎಂ. ಕೊಟ್ರಯ್ಯ ಎರಡು ವರ್ಷ ಗ್ರಾಪಂ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ ಎಂದರು.

ಸೊಕ್ಕೆಯನ್ನು ತಾಲೂಕಿನಲ್ಲಿ ಮಾದರಿ ಪಂಚಾಯ್ತಿಯಾಗಿ ರೂಪಿಸುವ ಉದ್ದೇಶ ಹೊಂದಿದ್ದು, ಇಲ್ಲಿನ ವ್ಯವಸ್ಥೆ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಅಧ್ಯಯನ ಮಾಡಿ ಪೂರಕ ಕಾರ್ಯವಿಧಾನ ರೂಪಿಸಿಕೊಳ್ಳಬೇಕು. ಬಹಳಷ್ಟು ಕೆಲಸ ಆಗುವುದಕ್ಕಿದೆ. ಸದ್ಯಕ್ಕೆ ನನ್ನ ಸಾಫ್ಟ್‍ವೇರ್ ಕೆಲಸದಿಂದ ಸಂಪೂರ್ಣ ಆಚೆ ಬಂದಿದ್ದು, ಮಕ್ಕಳು ಮತ್ತು ಗ್ರಾಪಂ ಅಧ್ಯಕ್ಷಗಿರಿ ಎರಡೇ ನನ್ನ ಎದುರಿನ ಪ್ರಯಾರಿಟಿ ಎನ್ನುತ್ತಾರೆ.

ಸ್ವಾತಿ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಕೇವಲ ಓದು ಬರಹ ಬಾರದಿರುವರು ಮಾತ್ರ ಚುನಾವಣೆ ನಿಂತು ಸರ್ಕಾರದ ಸೌಲಭ್ಯಗಳನ್ನು ಜನರಿಗೆ ಒದಗಿಸುವಲ್ಲಿ ವಿಫಲವಾಗುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ವಿದ್ಯಾವಂತ ಜನರು ಗ್ರಾಮ ಪಂಚಾಯತಿ ಗಳಲ್ಲಿ ಸ್ರ್ಪಸುತ್ತಿರುವುದು ಒಂದೊಳ್ಳೆ ಬದಲಾವಣೆ. ಅದರಲ್ಲೂ ಸ್ವಾತಿಯವರಂತಹ ವಿದ್ಯಾವಂತರ ಕೈಗೆ ಗ್ರಾಮ ಪಂಚಾಯತಿ ಅಕಾರ ಸಿಕ್ಕರೆ ಗ್ರಾಮಗಳ ಅಭಿವೃದ್ಧಿ ಮತ್ತಷ್ಟು ಹೆಚ್ಚಾಗಲಿದೆ ಎಂಬ ಅಭಿಪ್ರಾಯವೂ ಎಲ್ಲೆಡೆ ಕೇಳಿ ಬಂದಿದೆ.

Facebook Comments

Sri Raghav

Admin