ಮನವಿಗೆ ಸ್ಪಂದಿಸಿದ ಸಿಎಂಗೆ ಸೊಗಡು ಶಿವಣ್ಣ ಅಭಿನಂದನೆ

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು, ಏ.10- ಕೊವಿಡ್ -19 ತಡೆಗಟ್ಟಲು ಜಿಲ್ಲಾಡಳಿತ, ಆರೋಗ್ಯ ಇಲಾಖೆ, ಮಹಾನಗರ ಪಾಲಿಕೆ, ಪೊಲಿಸ್ ಇಲಾಖೆಯ ಅಕಾರಿಗಳು ಸಿಬ್ಬಂದಿ ಹಗಲು ಇರುಳು ಶ್ರಮಿಸುತ್ತಿದ್ದಾರೆ. ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಮ್ಮ ಕುಟುಂಬದವರನ್ನು ಬಿಟ್ಟು ಹೊರಗಡೆ ಕರ್ತವ್ಯದಲ್ಲಿ ನಿರತರಾಗಿದ್ದಾರೆ ಜನರಿಗೋಸ್ಕರ ಮನೆ ಮಠ ಬಿಟ್ಟು ಕೆಲಸ ನಿರ್ವಹಿಸುತ್ತಿದ್ದು ಇದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆಶಾ ಕಾರ್ಯಕರ್ತರು ಮೇಲೆ ಮತ್ತೂಮ್ಮೆ ಹಲ್ಲಾಯಂತಹ ಪ್ರಕರಣಗಳು ನೆಡೆಯ ಬಾರದು ಎಂದು ಅವರು ಇದೇ ಸಂದರ್ಭದಲ್ಲಿ ಎಚ್ಚರಿಕೆ ನೀಡಿದರು. ಬೇರೆ ದೇಶಗಳಲ್ಲಿ ಜನರು ತರಗೆಲೆಯಂತೆ ಸಾಯುತ್ತಿದ್ದಾರೆ. ಅದರ ಅರಿವು ಇಲ್ಲಿನ ಮುಸ್ಲಿಮರಿಗೆ ಇಲ್ಲದೆ ವರ್ತಿಸುತ್ತಿದ್ದಾರೆ. ತುಮಕೂರು ನಗರದ ಬಹುತೇಕ ಕಡೆಗಳಲ್ಲಿ ಕಾನೂನುನ್ನು ಉಲ್ಲಂಘನೆ ಮಾಡುತ್ತಿದ್ದಾರೆ .ಅಂತಹವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಿ ಎಂದು ಪೊಲಿಸರಿಗೆ ಮನವಿ ಮಾಡಿದರು.

ದ್ಯಾನ ಪ್ಯಾಲೇಸ್ ಬಳಿ ದನವನ್ನ ಕತ್ತರಿಸಿ ನೇತು ಹಾಕುತ್ತಾರೆ ಅದರೆ ಕತ್ತರಿಸಿದ ದನದ ರಕ್ತ ಚರಂಡಿಯಲ್ಲಿ ಹರಿದು ಹೋಗುತ್ತದೆ. ಆದರೆ ಅದನ್ನು ಮುಂದಿನ ಮನೆಯವರು ಸ್ವಚ್ಚತೆ ಮಾಡಬೇಕು. ಯಾಕೆ ಅಂತಹವರ ಮೇಲೆ ಕ್ರಮ ಕೈಗೊಂಡಿಲ್ಲ ಎಂದು ಅವರು ಹೇಳಿದರು.  ಕಡು ಬಡವರಿಗೆ ನೀಡುತ್ತಿರುವ ಹಾಲನ್ನು ಕೆಲವು ಕಾಪೆರ್ಟರ್‍ಗಳು ಸೇರಿದಂತೆ ಪುರಸಭೆ,ಪಟ್ಟಣ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಅಧಿಕಾರಿಗಳಿಗೆ ಧಮುಕಿ ಹಾಕಿದ್ದಾರೆ. ಇದು ಸರಿಯಲ್ಲ. ಅದಕ್ಕೆ ಜಿಲ್ಲಾಕಾರಿಗಳು ತತ್ ಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ಅವರು ತಿಳಿಸಿದರು.

ಭತ್ಯೆ ಸಿಎಂ ನಿಧಿಗೆ : ನನಗೆ ಬರುತ್ತೀರುವ ಮಾಸಾಶನ 54 ಸಾವಿರ ಹಣವನ್ನು ಕೊವಿಡ್ ಹಿನ್ನೆಲೆಯಲ್ಲಿ ವೇತನವನ್ನು ನೀಡಿದ್ದೇನೆ ಅದಕ್ಕೆ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದ್ದೇನೆ. ಅದರ ವಿಚಾರವಾಗಿ ಮುಖ್ಯ ಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದೇನೆ ಎಂದರು
ಸುದ್ದಿ ಗೋಷ್ಠಿಯಲ್ಲಿ ಎಂ ಬಿ ನಂದೀಶ್, ಕೆ.ಪಿ.ಮಹೇಶ್, ಜಯಸಿಂಹ ಸೇರಿದಂತೆ ಇತರರು ಉಪಸ್ಥಿತರಿದ್ದರು.

Facebook Comments