ಗ್ರಹಣ ಮೌಢ್ಯಾಚರಣೆ : ಮಕ್ಕಳನ್ನು ಮಣ್ಣಲ್ಲಿ ಹೂತ ಪೋಷಕರು..!

ಈ ಸುದ್ದಿಯನ್ನು ಶೇರ್ ಮಾಡಿ

ಕಲಬುರಗಿ, ಡಿ.26- ಪ್ರಕೃತಿಯ ವಿಸ್ಮಯಗಳಲ್ಲಿ ಒಂದಾಗಿರುವ ಸೂರ್ಯ ಗ್ರಹಣದ ಹಿಂದೆ ವೈಜ್ಞಾನಿಕ ಹಿನ್ನೆಲೆ ಇದೆ. ಆದರೆ ಉತ್ತರ ಕರ್ನಾಟಕದ ಜನರು ಸೂರ್ಯಗ್ರಹಣದಂದು ಮೂಢನಂಬಿಕೆಗೆ ಒಳಗಾಗಿ ವಿಶೇಷಚೇತನ ಮಕ್ಕಳನ್ನು ಮಣ್ಣಿನಲ್ಲಿ ಹೂತಿಡುವ ಮೂಲಕ ಅಮಾನವೀಯ ಆಚರಣೆ ನಡೆಸಿದ್ದಾರೆ.

ವಿಜಯಪುರ ಜಿಲ್ಲೆ ಇಂಡಿ ತಾಲ್ಲೂಕಿನ ಅರ್ಜುಣಗಿಯಲ್ಲಿ ವಿಶೇಷಚೇತನ ಹುಡುಗನಿಗೆ ಅವನ ಕಾಲು ಸರಿ ಹೋಗಲು ಈ ರೀತಿ ಭೂಮಿಯಲ್ಲಿ ಗ್ರಹಣ ದಿವಸ ನಿಲ್ಲಿಸಿದ್ದಾರೆ. ಪಪ್ಪು ಕುತುಬುದ್ಧೀನ್ ಮುಲ್ಲಾ (22) ಹೂತಿಟ್ಟ ವಿಶೇಷಚೇತನ ಯುವಕ. ಸೂರ್ಯಗ್ರಹಣದಂದು ವಿಶೇಷಚೇತನರನನ್ನು ಕತ್ತಿನವರೆಗೆ ಹೂತಿಟ್ಟರೆ ಅಂಗವಿಕಲತೆ ಮಾಯವಾಗುತ್ತದೆ ಎಂಬ ನಂಬಿಕೆಯಿಂದ ಹೀಗೆ ಮಾಡಿದ್ದಾರೆ.

ಕಲಬುರ್ಗಿ ಜಿಲ್ಲೆಯಲ್ಲಿ ಕೂಡ ಇದೇ ರೀತಿಯ ಅಮಾನವೀಯ ಆಚರಣೆ ನಡೆದಿದೆ. ಜಿಲ್ಲೆಯ ತಾಜ್ ಸುಲ್ತಾನ್‍ಪುರ ಗ್ರಾಮದಲ್ಲಿ ಪೋಷಕರು ತಮ್ಮ ವಿಶೇಷಚೇತನ ಮಕ್ಕಳನ್ನು ಕುತ್ತಿಗೆಯವರೆಗೆ ತಿಪ್ಪೆಗುಂಡಿಯಲ್ಲಿ ಹೂತಿಟ್ಟಿದ್ದಾರೆ. ಹೀಗೆ ಹೂತಿಟ್ಟರೆ ಗುಣಮುಖರಾಗುತ್ತಾರೆ, ಅಂಗವೈಕಲ್ಯ ಹೋಗುತ್ತದೆ ಎಂಬ ನಂಬಿಕೆ ಇದೆಯಂತೆ. ಗ್ರಹಣ ಆರಂಭದಿಂದ ಗ್ರಹಣ ಮುಗಿಯುವರೆಗೆ ಹೀಗೆ ಮಕ್ಕಳನ್ನು ಹೂತಿಟ್ಟಿದ್ದಾರೆ.

Facebook Comments