ರಸ್ತೆಬದಿ ಬಾಂಬ್ ಸ್ಪೋಟ, ಮೂವರು ಸೇನಾಧಿಕಾರಿ ಸೇರಿ 19 ಮಂದಿ ಬಲಿ

ಈ ಸುದ್ದಿಯನ್ನು ಶೇರ್ ಮಾಡಿ

ಇಸ್ಲಾಮಾಬಾದ್, ಜೂ.8 (ಪಿಟಿಐ)- ಸೇನಾ ವಾಹನವನ್ನು ಗುರಿಯಾಗಿಟ್ಟುಕೊಂಡು ಉಗ್ರಗಾಮಿಗಳು ನಡೆಸಿದ ರಸ್ತೆಬದಿ ಬಾಂಬ್ ದಾಳಿಯಲ್ಲಿ ಪಾಕಿಸ್ತಾನಿ ಸೇನೆಯ ಮೂವರು ಅಧಿಕಾರಿಗಳು ಮತ್ತು ಓರ್ವ ಯೋಧ ಸೇರಿ ಒಟ್ಟು 19 ಮಂದಿ ಸಾವನ್ನಪ್ಪಿರುವ  ಘಟನೆ ಇಂದು ಬೆಳಗ್ಗೆ ಹಿಂಸಾಚಾರ ಪೀಡಿತ ವಜೀರಿಸ್ತಾನದಲ್ಲಿ ನಡೆದಿದೆ.

ಪಾಕಿಸ್ತಾನ-ಆಫ್ಘಾನಿಸ್ತಾನ ಗಡಿಯಲ್ಲಿರುವ ಬುಡಕಟ್ಟು ಜಿಲ್ಲೆ ವಜೀರಿಸ್ತಾನ್ ಉತ್ತರ ಭಾಗದಲ್ಲಿ ಉಗ್ರರು ರಸ್ತೆಬದಿಯಲ್ಲಿ ಬಾಂದ್ ಹುದುಗಿರಿಸಿದ್ದರು. ಇದೇ ಸಂದರ್ಭದಲ್ಲಿ ಮಿಲಿಟರಿ ವಾಹನ ಹಾದು ಹೋದಾಗ ಸುಧಾರಿತ ಸ್ಫೋಟಕ (ಐಇಡಿ) ಆಸ್ಫೋಟಗೊಂಡಿತು. ಈ ಘಟನೆಯಲ್ಲಿ ಮೂವರು ಪಾಕ್ ಸೇನಾಧಿಕಾರಿಗಳು ಮತ್ತು ಓರ್ವ ಯೋಧ ಸೇರಿ ಒಟ್ಟು 19 ಮಂದಿ ಹತರಾದರು, ಇನ್ನೂ ನಾಲ್ವರು ಸೈನಿಕರಿಗೆ ಗಾಯಗಳಾಗಿವೆ ಎಂಧು ಸೇನೆ ಹೇಳಿಕೆಯೊಂದರಲ್ಲಿ ತಿಲಿಸಿದೆ.

ಲೆಫ್ಟಿನೆಂಟ್ ಕರ್ನಲ್ ರಶೀದ್ ಕರೀಂ ಬೇಗ್, ಮೇಜರ್ ಮೋಯಿಜ್ ಮಖ್ಸೂದ್ ಬೇಗ್, ಕ್ಯಾಪ್ಟರ್ ಆರೀಫ್ ಉಲ್ಲಾ ಮತ್ತು ಲಾನ್ಸ್ ಹವಲ್ದಾರ್ ಜಹೀರ್ ಮೃತಪಟ್ಟಿದ್ದಾರೆ ಎಂದು ಸೇನೆಯ ಮಾಧ್ಯಮ ಘಟಕ ಅಂತರ್‍ಸೇವೆಗಲ ಸಾರ್ವಜನಿಕ ಸಂಬಂಧಗಳ(ಐಎಸ್‍ಪಿಆರ್) ತಿಳಿಸಿದೆ.

ಈ ಪ್ರದೇಶದಲ್ಲಿ ಸೇನೆ ಮತ್ತು ಯೋಧರನ್ನು ಗುರಿಯಾಗಿಟ್ಟುಕೊಂಡು ಉಗ್ರರು ದಾಳಿಯನ್ನು ತೀವ್ರಗೊಳಿಸಿದ್ದಾರೆ. ಇತ್ತೀಚೆಗೆ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ 10 ಭದ್ರತಾ ಸಿಬ್ಬಂದಿ ಹತರಾಗಿ, 35ಕ್ಕೂ ಹೆಚ್ಚು ಯೋದರು ಗಾಯಗೊಂಡಿದ್ದರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ