ಡೆತ್ ನೋಟ್ ಬರೆದಿಟ್ಟು ಹರಿಯಾಣಾದಲ್ಲಿ ಹಾಸನದ ಯೋಧ ಆತ್ಮಹತ್ಯೆ..!

ಈ ಸುದ್ದಿಯನ್ನು ಶೇರ್ ಮಾಡಿ

ಹಾಸನ/ನವದೆಹಲಿ, ಜೂ.9- ಡೆತ್ ನೋಟ್ ಬರೆದಿಟ್ಟು ಶೌಚ ಗೃಹದಲ್ಲಿ ಹಾಸನ ತಾಲ್ಲೂಕಿನ ಭಾರತೀಯ ವಾಯುಪಡೆ ಯೋಧ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹರಿಯಾಣದ ಶಿರಸಾದಲ್ಲಿ ನಡೆದಿದೆ. ಹಾಸನದ ಆಲೂರು ತಾಲ್ಲೂಕಿನ ಕಾದಾಳು ಗ್ರಾಮದ ಮೋಹನ್‍ಕುಮಾರ್ (28) ಆತ್ಮಹತ್ಯೆ ಮಾಡಿಕೊಂಡ ಸಿಬ್ಬಂದಿ.

ಕಳೆದ ಎಂಟು ವರ್ಷಗಳಿಂದ ಶಿರಸಾದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಡೆತ್ ನೋಟ್ ಬರೆದಿಟ್ಟು ಶುಕ್ರವಾರ ಕಚೇರಿಯ ಶೌಚ ಗೃಹದಲ್ಲಿ ರೈಫಲ್‍ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಮೂರು ತಿಂಗಳ ಹಿಂದೆಯಷ್ಟೇ ವಿವಾಹವಾಗಿದ್ದು , ಆತ್ಮಹತ್ಯೆಗೆ ಕಾರಣವೇನೆಂಬುದು ತಿಳಿದು ಬಂದಿಲ್ಲ. ಇಂದು ಸ್ವಗ್ರಾಮಕ್ಕೆ ಪಾರ್ಥೀವ ಶರೀರ ಆಗಮಿಸಲಿದ್ದು , ಸಂಜೆ ಅಂತ್ಯಕ್ರಿಯೆ ನಡೆಯಲಿದೆ. ಶನಿವಾರ ಮಧ್ಯಾಹ್ನ ಮರಣೋತ್ತರ ಪರೀಕ್ಷೆ ನಂತರ ಮೃತ ದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ.  ಶಿರಸದಿಂದ ದೆಹಲಿಗೆ ಮಿಲಿಟರಿ ವ್ಯಾನ್‌ನಲ್ಲಿ ಕೊಂಡೊಂಯ್ದು, ದೆಹಲಿಯಿಂದ ಬೆಂಗಳೂರಿಗೆ ವಿಮಾನದಲ್ಲಿ ಮೋಹನ್‌ ಕಳೇಬರವನ್ನು ತರಲಾಗುವುದು. ಬೆಂಗಳೂರಿನಿಂದ ಆಲೂರಿಗೆ ಮಿಲಿಟರಿ ವಾಹನದಲ್ಲಿ ಕರೆತರಲಾಗುವುದು ಎಂದು ಮೂಲಗಳು ತಿಳಿಸಿವೆ.

ರಜೆ ಮೇಲೆ ಮನೆಗೆ ಬಂದಿದ್ದ ಮೋಹನ್‌ ತಂದೆ ವಸಂತ ಅವರು ಮಧ್ಯಪ್ರದೇಶಕ್ಕೆ ಮರಳುತ್ತಿದ್ದ ಸಂದರ್ಭದಲ್ಲಿ ಪುತ್ರನ ನಿಧನ ವಾರ್ತೆ ಸಿಕ್ಕಿದ್ದು, ಮನೆಗೆ ಹಿಂತಿರುಗಿದ್ದಾರೆ. ಮೃತರಿಗೆ ಪತ್ನಿ, ತಂದೆ, ತಾಯಿ, ಸಹೋದರ ಇದ್ದಾರೆ.

# ಡೆತ್ ನೋಟ್ ನಲ್ಲೇನಿದೆ..? :
ಪ್ರೀತಿಯ ಅಮ್ಮ ಮತ್ತು ಅಪ್ಪನಿಗೆ ನನ್ನ ನಮಸ್ಕಾರಗಳು. ಹುಟ್ಟಿನಿಂದ ಇಲ್ಲಿಯವರೆಗೆ ನಾನು ನಿಮಗೋಸ್ಕರ ಏನು ಮಾಡುವುದಕ್ಕೆ ಆಗಿಲ್ಲ. ಅಪ್ಪ-ಅಮ್ಮನಿಗೆ ಒಳ್ಳೆಯ ಮಗನಾಗದೇ ನಿಮಗೆ ಮೋಸಮಾಡಿದ್ದೇನೆ. ಅಣ್ಣನಿಗೆ ಒಳ್ಳೆಯ ತಮ್ಮನಾಗದೇ, ಕೊನೆಗೆ ಹೆಂಡತಿಗೆ ಒಳ್ಳೆಯ ಗಂಡನಾಗಿಲ್ಲ ಅನಿಸುತ್ತಿದೆ. ದಯವಿಟ್ಟು ನನ್ನನ್ನು ಕ್ಷಮಿಸಿ, ಇಷ್ಟುದಿನ ಒಂದು ದಿನವೂ ಕೂಡ ನನ್ನನ್ನು ನೋಯಿಸದೆ ನೋಡಿಕೊಂಡಿದ್ದಕ್ಕೆ ನಿಮಗೆ ಚಿರಋಣಿಯಾಗಿರುತ್ತೇನೆ.

ನಿಮ್ಮ ಮನ ಮನಸ್ಸನ್ನು ನೋಯಿಸಿದ್ದಕ್ಕೆ ನಾನು ಕ್ಷಮೆ ಕೋರುತ್ತೇನೆ. ಮುಂದಿನ ಜನ್ಮ ಇದ್ದರೆ ನನಗೆ ನಿಮ್ಮ ಪ್ರೀತಿಯೇ ಸಿಗಲಿ. ಇನ್ನೂ ಮುಂದೆ ನಿಮಗೆ ಯಾವುದೇ ರೀತಿಯ ತೊಂದರೆ ಬರುವುದಿಲ್ಲ. ಅಮ್ಮ, ಅಣ್ಣ, ಅಪ್ಪ, ಯಾವಾಗಲೂ ನಾನು ನಿಮ್ಮ ಮನಸ್ಸಿನಲ್ಲಿಯೇ ಇರುತ್ತೇನೆ. ಮರೆಯದೇ ಕ್ಷಮಿಸಿ ನೆನಪಾದರೆ. Love you amma, love u chinnu take care. I will be soon ನನ್ನಿಂದ ಯಾರಿಗೂ ತೊಂದರೆಯಾಗಬಾರದು ಎಂದು ನೋವಿನಲ್ಲಿ ಬರೆದಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ