ಸಹಕಾರ ಕ್ಷೇತ್ರದ ಬದ್ಧತೆಗೆ ಎಲ್ಲರ ಸಹಕಾರ ಅಗತ್ಯ : ಸಚಿವ ಸೋಮಶೇಖರ್

ಈ ಸುದ್ದಿಯನ್ನು ಶೇರ್ ಮಾಡಿ

ಮಂಗಳೂರು, ಜು.4- ಸಹಕಾರ ಕ್ಷೇತ್ರದಲ್ಲಿ ಬದ್ಧತೆ ಇದ್ದು, ಕೆಲಸ ಮಾಡಿದರೆ ಮಾತ್ರ ಸುದೀರ್ಘವಾಗಿ ಬೆಳೆಯುತ್ತದೆ. ಆ ಕೆಲಸವನ್ನು ದಕ್ಷಿಣ ಕನ್ನಡ ಡಿಸಿಸಿ ಬ್ಯಾಂಕ್ ಮಾಡುತ್ತಿದೆ. ಅಲ್ಲದೆ, ಎಲ್ಲ ರೀತಿಯ ಸಾಲಗಳನ್ನು ನೂರಕ್ಕೆ ನೂರರಷ್ಟು ವಸೂಲಾತಿಯನ್ನು ಮಾಡುತ್ತಿದೆ. ಇದು ಉತ್ತಮ ಬೆಳವಣಿಗೆ ಎಂದು ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ತಿಳಿಸಿದರು.

ಸಹಕಾರ ಇಲಾಖೆ ಮೂಲಕ ಕೊರೋನಾ ವಾರಿಯರ್ಸ್ ಗಳಾದ ಆಶಾ ಕಾರ್ಯಕರ್ತೆಯರಿಗೆ ತಲಾ 3 ಸಾವಿರ ರೂ. ಪ್ರೋತ್ಸಾಹಧನ ವಿತರಣೆ ಕಾರ್ಯಕ್ರಮಕ್ಕೆ ಚೆಕ್ ನೀಡುವ ಮೂಲಕ ಚಾಕನೆ ನೀಡಿ ಮಾತನಾಡಿದರು. 21 ಡಿಸಿಸಿ ಬ್ಯಾಂಕ್ ಗಳಿದ್ದು,

ಈ ಎಲ್ಲ ಬ್ಯಾಂಕ್ ಗಳಿಗಿಂತ ಉತ್ತಮವಾಗಿ ದಕ್ಷಿಣ ಕನ್ನಡ ಡಿಸಿಸಿ ಬ್ಯಾಂಕ್ ಕಾರ್ಯನಿರ್ವಹಿಸುತ್ತಿದೆ. ಇನ್ನು ಎಲ್ಲರನ್ನೂ ಒಟ್ಟಾಗಿ ಕೊಂಡೊಯ್ಯುವ ಕೆಲಸವನ್ನು ಎಸ್ ಸಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ರಾಜೇಂದ್ರಕುಮಾರ್ ಅವರು ಮಾಡುತ್ತಿದ್ದಾರೆ. ಸಹಕಾರ ಕ್ಷೇತ್ರದಲ್ಲಿ ಅಸಹಕಾರ ಇರಕೂಡದು. ಎಲ್ಲಿ ಸಹಕಾರ ಇರುತ್ತದೋ ಅಲ್ಲಿ ಅಭಿವೃದ್ಧಿಯಾಗುತ್ತದೆ ಎಂದು ಅವರು ಹೇಳಿದರು.

ರಾಜ್ಯದಲ್ಲಿರುವ 42680 ಆಶಾ ಕಾರ್ಯಕರ್ತೆಯರಿದ್ದು, ಅವರೆಲ್ಲರಿಗೂ ಗೌರವಧನ ಕೊಡುವ ಬಗ್ಗೆ ಮುಖ್ಯಮಂತ್ರಿಗಳು ಸೂಚನೆ ಕೊಟ್ಟ ಬಳಿಕ ಅದಕ್ಕೆ ತಗುಲುವ ವೆಚ್ಚವಾದ 12.7 ಕೋಟಿಯನ್ನು ಸಹಕಾರ ಬ್ಯಾಂಕ್ ಗಳಿಂದ ಸಂಗ್ರಹಿಸಿ ಕೊಡಲಾಗುತ್ತಿದೆ. ಈಗಾಗಲೇ 25 ಜಿ¯್ಲÉಗಳಲ್ಲಿ ಪ್ರವಾಸ ಮಾಡಿ ಖುದ್ದು ನಾನೇ ಪ್ರೋತ್ಸಾಹಧನ ವಿತರಣೆ ಮಾಡುತ್ತಿದ್ದೇನೆ ಎಂದು ಸಚಿವರು ತಿಳಿಸಿದರು.

ಕಳೆದ ಬಾರಿ 13,500 ಕೋಟಿ ರೂ. ಬೆಳೆ ಸಾಲ ನೀಡಲಾಗಿತ್ತು. ಈ ಬಾರಿ 14500 ಕೋಟಿ ರೂ. ನೀಡಲು ಚಾಲನೆ ನೀಡಲಾಗಿದೆ. ಏ. 1 ರಿಂದ ಈವರೆಗೆ 6.27 ಸಾವಿರ ರೈತರಿಗೆ ಸಾಲ ವಿತರಣೆ ಮಾಡಲಾಗಿದೆ. 4424 ಕೋಟಿ ರೂ.ಗಳನ್ನು ಇದುವರೆಗೆ ಸಾಲ ವಿತರಣೆ ಮಾಡಲಾಗಿದೆ. ಹೊಸ ರೈತರಿಗೆ ಸಾಲ ನೀಡುವ ಗುರಿ ಹಾಕಿಕೊಂಡಿದ್ದು, ಆ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಡಿಸಿಸಿ ಬ್ಯಾಂಕ್ ಕೂಡಾ ಮಾಡುತ್ತಿದೆ ಎಂದು ಸಚಿವರು ತಿಳಿಸಿದರು.

ನಾನು ಪ್ರತಿ ಡಿಸಿಸಿ ಬ್ಯಾಂಕ್ ನಲ್ಲಿ ಪ್ರಗತಿ ಪರಿಶೀಲನೆ ಮಾಡುತ್ತಿದ್ದೇನೆ. ಅಲ್ಲಿ ರೈತರಿಗೆ ಎಷ್ಟು ಸಾಲ ಕೊಡಲಾಗಿದೆ? ಹೊಸ ರೈತರಿಗೆ ಸಾಲ ಸಿಕ್ಕಿದೆಯೇ? ಬಡವರ ಬಂಧು, ಕಾಯಕ ಯೋಜನೆಗಳಡಿ ಸಾಲ ನೀಡಿಕೆ ಯಾವ ಹಂತದಲ್ಲಿದೆ ಎಂಬಿತ್ಯಾದಿ ಪ್ರಕ್ರಿಯೆಗಳ ಬಗ್ಗೆ ಮಾಹಿತಿ ಪಡೆಯುತ್ತಿದ್ದೇನೆ ಎಂದು ಸಚಿವ ಸೋಮಶೇಖರ್ ತಿಳಿಸಿದರು.

ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಅಭಿನಬಂದನೆ: ನಾವು 15 ವರ್ಷಗಳಿಂದ ಒಂದು ಪಕ್ಷದಲ್ಲಿದ್ದರೂ ಸಹ ಅಲ್ಲಿ ಅನಿಶ್ಚಿತತೆಯಿಂದ ರಾಜೀನಾಮೆ ಕೊಟ್ಟು ಹೊರಬಂದ ಸಂದರ್ಭದಲ್ಲಿ ನಮಗೆ ಮುಂದಿನ ರಾಜಕೀಯ ಭವಿಷ್ಯದ ಬಗ್ಗೆ ಚಿಂತೆಯಾಗಿತ್ತು. ಆಗ ನಾವು 15 ಮಂದಿ ಬಿಜೆಪಿ ಅಧ್ಯಕ್ಷರಾದ ನಳಿನ್ ಕುರ್ಮಾ ಕಟೀಲ್ ಅವರನ್ನು ಭೇಟಿ ಮಾಡಿದಾಗ ಅವರು ಮರು ಮಾತನಾಡದೇ ನಮಗೆ ಸ್ವಾಗತವನ್ನು ಕೋರಿ ಉತ್ತಮ ಸ್ಥಾನಮಾನಗಳನ್ನು ಕಲ್ಪಿಸಿಕೊಟ್ಟಿದ್ದಾರೆ.

ಇದಕ್ಕೆ ಅವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದರು. ಕೇಂದ್ರ ಸರ್ಕಾರದಿಂದ ಎಪಿಎಂಸಿ ಕಾಯ್ದೆ ತಿದ್ದುಪಡಿ ಮಾಡಿರುವುದು ಉತ್ತಮ ಕ್ರಮ. ಇಲ್ಲಿ ಎಪಿಎಂಸಿಗೆ ಇರುವ ಅಧಿಕಾರವನ್ನು ತೆಗೆಯಲಾಗಿಲ್ಲ. ಬದಲಾಗಿ ರೈತರಿಗೆ ಉತ್ತಮ ಎಂದು ಸಚಿವರು ತಿಳಿಸಿದರು.

ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ, ಎಸï.ಟಿ.ಸೋಮಶೇರ್ಖ ಅವರು ಸಹಕಾರ ಸಚಿವರಾದ ಎಸï.ಟಿ.ಸೋಮಶೇಖರ್ ಅವರು ಸಾಕಷ್ಟು ಬದಲಾವಣೆಗಳನ್ನು ಮಾಡುತ್ತಿದ್ದಾರೆ. ಕೋವಿಡ್ ಸಂಕಷ್ಟದ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 53 ಕೋಟಿ ರೂಪಾಯಿ ದೇಣಿಗೆಯನ್ನು ಸಹಕಾರ ಇಲಾಖೆಯಿಂದ ವಿತರಣೆ ಮಾಡಿದ್ದಾರೆ.

ಅಲ್ಲದೆ, ರಾಜ್ಯದಲ್ಲಿರುವ 42 ಸಾವಿರ ಆಶಾ ಕಾರ್ಯಕರ್ತೆಯರಿಗೆ ತಲಾ 3 ಸಾವಿರ ರೂ. ಪ್ರೋತ್ಸಾಹ ಧನ ನೀಡುವಲ್ಲಿ ಶ್ರಮಿಸಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಸೋಮಶೇಖರ್ ಅವರು ಸಹಕಾರ ಕ್ಷೇತ್ರದಲ್ಲಿ ಸ್ವತಃ ಕೆಲಸವನ್ನು ಮಾಡಿರುವುದರಿಂದ ಸಹಕಾರ ವಲಯದ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುತ್ತಿz್ದÁರೆ. ಕೋವಿಡ್ ಸಂಕಷ್ಟ ಕಾಲದಲ್ಲಿ ಅವರು 25 ಜಿ¯್ಲÉಗಳ ಪ್ರವಾಸ ಮಾಡಿ ಕಷ್ಟಗಳಿಗೆ ಸ್ಪಂದಿಸುತ್ತಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

ದಕ್ಷಿಣ ಕನ್ನಡ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಡಾ.ಎಂ.ಎನï. ರಾಜೇಂದ್ರಕುಮಾರ್‍ಮಾತನಾಡಿ, ದೇಶದಲ್ಲಿಯೇ ಕಳೆದ 25 ವರ್ಷಗಳಿಂದ ರೈತರ ಸಾಲ ನೂರಕ್ಕೆ ನೂರರಷ್ಟು ಮರುಪಾವತಿಯಾಗುತ್ತಿರುವ ಬ್ಯಾಂಕ್ ಎಂಬ ಖ್ಯಾತಿಗೆ ಈ ಡಿಸಿಸಿ ಬ್ಯಾಂಕ್ ಒಳಪಟ್ಟಿದೆ ಎಂದು ತಿಳಿಸಿದರು.

Facebook Comments