ಆಸ್ತಿಗಾಗಿ ತಂದೆಯನ್ನೇ ಕೊಂದ ಮಗ

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರುು,ಏ.3- ಆಸ್ತಿಗಾಗಿ ಜನ್ಮ ನೀಡಿದ ತಂದೆಯನ್ನೇ ಕೊಲೆ ಮಾಡಿದ ಕುಲಪುತ್ರನನ್ನು ಮಧುಗಿರಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮಧುಗಿರಿ ತಾಲ್ಲೂಕಿನ ಸಿದ್ದಾಪುರ ಗೇಟ್‍ನ ನಿವಾಸಿ ನವೀನ್‍ಕುಮಾರ್(35) ಬಂಧಿತ ಆರೋಪಿ. ತಂದೆ ಮಂಜುನಾಥ್(60) ಹಾಗೂ ನವೀನ್‍ಕುಮಾರ್ ನಡುವೆ ಆಸ್ತಿ ವಿಚಾರವಾಗಿ ಗಲಾಟೆ ನಡೆಯುತ್ತಿತ್ತು. ಮಾ.2ರಂದು ಗ್ರಾಮದ ವೀರಣ್ಣ ಎಂಬುವರ ಜಮೀನಿನಲ್ಲಿ ಮಂಜುನಾಥ್ ಅವರ ಶವ ಪತ್ತೆಯಾಗಿದ್ದು, ಇದನ್ನು ಆತ್ಮಹತ್ಯೆ ಎಂದು ಬಿಂಬಿಸಲಾಗಿತ್ತು.

ಆದರೆ ಆಸ್ತಿ ವಿಚಾರವಾಗಿ ನವೀನ್‍ಕುಮಾರ್ ಮದ್ಯದ ಬಾಟಲಿಗೆ ವಿಷ ಬೆರೆಸಿ ಮಂಜುನಾಥ್ ಅವರಿಗೆ ಕುಡಿಯಲು ಕೊಟ್ಟು ನಂತರ ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ ಎಂದು ತನಿಖೆಯಿಂದ ತಿಳಿದುಬಂದಿದೆ. ಮೃತ ಮಂಜುನಾಥ್ ಆಸ್ತಿ ವಿಚಾರವಾಗಿ ಪುತ್ರನ ವಿರುದ್ಧ ಈ ಹಿಂದೆ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದರು.

ಆಸ್ತಿ ಕೈಬಿಟ್ಟು ಹೋಗುತ್ತದೆ ಎಂದು ನವೀನ್‍ಕುಮಾರ್ ಕೊಲೆ ಮಾಡಿ ಆತ್ಮಹತ್ಯೆ ಎಂದು ಬಿಂಬಿಸಿದ್ದನು. ಆದರೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಡಿವೈಎಸ್ಪಿ ಕೆ.ಜಿ.ರಾಮಕೃಷ್ಣಪ್ಪ ಅವರ ನೇತೃತ್ವದಲ್ಲಿ ತನಿಖೆ ನಡೆಸಿದ್ದು, ಕೊಲೆ ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Facebook Comments