ರುಬ್ಬು ಗುಂಡಿನಿಂದ ಹೊಡೆದು ತಂದೆಯನ್ನು ಕೊಂದ ಮಗ..!

ಈ ಸುದ್ದಿಯನ್ನು ಶೇರ್ ಮಾಡಿ

ಕೋಲಾರ.ಜೂ.18 ಕ್ಲುಲ್ಲಕ ವಿಚಾರವಾಗಿ ತಂದೆ ಮಗನ ನಡುವೆ ನಡೆದ ಜಗಳದಲ್ಲಿ ರುಬ್ಬು ಗುಂಡಿನಿಂದ ಹೋಡೆದು ತಂದೆಯನ್ನು ಪಾಪಿ ಮಗ ಹತ್ಯೆಗೈದಿರುವ ಘಟನೆ ಜಿಲ್ಲೆಯ ಶ್ರೀ ನಿವಾಸಪುರ ತಾಲೂಕಿನ ಅಂಬೇಡ್ಕರ್ ಪಾಳ್ಯದಲ್ಲಿ ತಡ ರಾತ್ರಿ ನಡೆದಿದೆ. ವೆಂಕಟೇಶ್(65) ಮಗನಿಂದ ಹತ್ಯೆಯಾದ ತಂದೆ.ನವೀನ್ ಕೊಲೆ ಮಾಡಿದ ಮಗ.

ಕ್ಲುಲ್ಲಕ ವಿಚಾರಕ್ಕೆ ಕಳೆದ ರಾತ್ರಿ ತಂದೆ ಮಗನ ನಡುವೆ ಜಗಳ ನಡೆದು ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ರೊಚ್ಚಿಗೆದ್ದ ಮಗ ಮಲಗಿದ್ದ ತಂದೆಯ ತಲೆಯ ಮೆಲೆ ರುಬ್ಬುವ ಕಲ್ಲಿನಿಂದ ಬಲವಾಗಿ ಹೊಡೆದಿದ್ದಾನೆ ತೀವ್ರ ರಕ್ತಸ್ರಾವ ದಿಂದ ವೆಂಕಟೆಶ್ ಸ್ಥಳದಲ್ಲೆ ಮೃತ ಪಟ್ಟಿದ್ದಾರೆ.

ಕುಟುಂಬ ಸದಸ್ಯರ ಚಿರಾಟ ಕೆಳಿ ಅಕ್ಕಪಕ್ಕದ ನಿವಾಸಿಗಳು ಸ್ಥಳಕ್ಕೆ ದೌಡಾಯಿಸುತ್ತಿದ್ದಂತೆ ನವೀನ್ ಅಲ್ಲಿಂದ ಓಡಿಹೊಗಲು ಪ್ರಯತ್ನಿಸಿದ್ದು ಗ್ರಾಮಸ್ಥರು ಹಿಡಿದು ಥಳಿಸಿ ಹಗ್ಗದಿಂದ ಕೈ ಕಾಲು ಕಟ್ಟಿ ಪೊಲೀಸರಿಗೆ ಮಾಹಿತಿ ನಿಡಿದ್ದಾರೆ. ಸುದ್ದಿ ತಿಳಿದುಶ್ರಿನಿವಾಸ ಪುರ ಠಾಣೆ ಪೊಲಿಸರು ಸ್ಥಳಕ್ಕಾಗಮಿಸಿ ಆರೋಪಿಯನ್ನು ವಶಕ್ಕೆ ಪಡೆದು ಪರಿಶಿಲನೆ ನಡೆಸಿ ಪ್ರಕರಣ ದಾಖಲಿಸಿ ಕೊಂಡು ಮುಂದಿನ ಕ್ರಮ ಕೈ ಗೊಂಡಿದ್ದಾರೆ.

Facebook Comments

Sri Raghav

Admin