ನಿವೃತ್ತ ಆರ್‌ಬಿಐ ಅಧಿಕಾರಿಯನ್ನು ಕೊಂದ ಮಗ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಡಿ.30- ಆಸ್ತಿ ವಿಚಾರವಾಗಿ ಮಗನೇ ತಂದೆಯನ್ನು ಕೊಲೆ ಮಾಡಿರುವ ಘಟನೆ ಭಾರತೀನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ. ಅಮರನಾಥ್ (62) ಕೊಲೆಯಾದ ನಿವೃತ್ತ ಆರ್‌ಬಿಐ ಅಧಿಕಾರಿ. ಗೋವಾದಲ್ಲಿ ನೆಲೆಸಿದ್ದ ಅಮರನಾಥ್ ಅವರು ಇತ್ತೀಚೆಗಷ್ಟೆ ಆರ್‍ಬಿಐ ಕ್ವಾಟ್ರರ್ಸ್‍ನಲ್ಲಿ ವಾಸವಾಗಿದ್ದರು. ಆಸ್ತಿ ವಿಚಾರವಾಗಿ ಮಗ ಮನನ್ ರಾತ್ರಿ 10 ಗಂಟೆ ಸುಮಾರಿನಲ್ಲಿ ತಂದೆ ಜತೆ ಜಗಳವಾಡಿದ್ದಾನೆ.

ಈ ವೇಳೆ ತಾಳ್ಮೆ ಕಳೆದುಕೊಂಡು ಮಗನೇ ಚಾಕುವಿನಿಂದ ತಂದೆಗೆ ಇರಿದು ಕೊಲೆ ಮಾಡಿದ್ದಾನೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಭಾರತಿನಗರ ಠಾಣೆ ಪೊಲೀಸರು ಮಗನನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments