‘ಅನೈತಿಕ ಸಂಬಂಧ’ದ ಅನುಮಾನದಿಂದ ಹೆತ್ತ ತಾಯಿಯನ್ನು ಕೊಂದ ಕಟುಕ ಮಗ..!

ಈ ಸುದ್ದಿಯನ್ನು ಶೇರ್ ಮಾಡಿ

Wife-Murder--01

ರಾಮನಗರ. ನ.17 : ಹೆತ್ತ ತಾಯಿಯನ್ನೆ ಮಗ ಬರ್ಬರವಾಗಿ ಕತ್ತು ಕೊಯ್ದು ಕೊಲೆ ಮಾಡಿರುವ ಘಟನೆ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಕರಲಹಳ್ಳಿ ಗ್ರಾಮದಲ್ಲಿ ನಡೆದಿದೆ. ಪಾರ್ವತಮ್ಮ (50) ಮಹಿಳೆಯಾಗಿದ್ದು, ಮಗ ಕುಮಾರ್ (20) ಕೊಲೆ ಮಾಡಿದ ಆರೋಪಿ. ನಿನ್ನೆ  4 ಗಂಟೆ ಸಮಯದಲ್ಲಿ ನಡೆದಿದ್ದು, ಮನೆಯ ಆವರಣದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ನಡೆದ ಗಲಾಟೆಯಲ್ಲಿ ಕುಮಾರ್ ಕೋಪಗೊಂಡು ಕುಡುಗೋಲಿನಿಂದ ತಾಯಿಯ ಹತ್ಯೆ ಮಾಡಿದ್ದಾನೆ.

ಅಂದಹಾಗೇ ಮಗ ಕುಮಾರ್ ತಾಯಿಯ ಅನೈತಿಕ ಸಂಬಂಧ ಹೊಂದಿದ್ದಾರೆ ಎಂಬ ಶಂಕೆಯ ಹಿನ್ನೆಲೆಯಲ್ಲಿ ಕೊಲೆ ಮಾಡಿದ್ದು, ಬಳಿಕ ಮೃತದೇಹವನ್ನು ಸ್ಥಳದಲ್ಲೇ ಬಿಟ್ಟು ನೇರ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ. ಆರೋಪಿಯ ಕುಮಾರ್ ಹೇಳಿಕೆ ಕೇಳಿದ ಪೊಲೀಸರು ಒಂದು ಕ್ಷಣ ಶಾಕ್ ಆಗಿದ್ದರು. ಬಳಿಕ ಆತನನ್ನು ವಶಕ್ಕೆ ಪಡೆದ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಘಟನೆ ಕುರಿತು ಅಕ್ಕೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುಮಾರ ಪಾರ್ವತಮ್ಮನನ್ನ ಹತ್ಯೆ ಮಾಡಿದ್ದಾನೆ ಎಂಬ ವಿಚಾರ ಇಡೀ ಗ್ರಾಮಕ್ಕೆ ಹರಡುತ್ತಿದ್ದಂತೆ ಇಡೀ ಗ್ರಾಮವೇ ಆತಂಕಕ್ಕೆ ಒಳಗಾಗಿತ್ತು. ಟ್ರ್ಯಾಕ್ಟರ್ ಚಾಲಕನಾಗಿದ್ದ ಕುಮಾರ್ ಗೆ ಕಳೆದ ಹದಿನೈದು ದಿನಗಳ ಕೆಳಗೆ ತನ್ನ ತಾಯಿಯ ನಡುವಳಿಕೆ ಸರಿಯಿಲ್ಲ ಎಂಬುದು ತಿಳಿದಿದೆ. ಇದರಿಂದ ತಾಯಿ ಬೇರೆಯೇ ದಾರಿ ಹಿಡಿದ್ದಾಳೆ ಎಂದು ಕುಪಿತಗೊಂಡಿದ್ದ. ಈ ಬಗ್ಗೆ ಸಾಕಷ್ಟು ಬಾರಿ ತಾಯಿಗೆ ಹೇಳಿದರೂ ಪಾರ್ವತಮ್ಮ ತನ್ನ ನಡುವಳಿಕೆ ಸರಿಪಡಿಸಿಕೊಂಡಿಲ್ಲ. ಹೀಗಾಗಿ ಇವತ್ತು ಬೆಳಗ್ಗೆಯಿಂದಲೇ ಜಗಳ ನಡೆಯುತ್ತಲೇ ಇತ್ತು. ಅಲ್ಲದೆ ಪಾರ್ವತಮ್ಮನ ಗಂಡ ಸಹಾ ಸಾಕಷ್ಟು ಬಾರಿ ತನ್ನ ಹೆಂಡತಿಗೆ ತಿಳಿಹೇಳಿದ್ದರು ಪ್ರಯೋಜನ ಆಗಿರಲಿಲ್ಲ. ಹೀಗಾಗಿ ಇದರಿಂದ ಕುಪಿತಗೊಂಡ ಕುಮಾರ್ ಮನೆಯ ಆವರಣದಲ್ಲಿ ತಾಯಿಯನ್ನು ಬರ್ಬರವಾಗಿ ಹತ್ಯೆ ಮಾಡಿ, ನಂತರ ತನ್ನ ತಂದೆಗೆ ಈ ವಿಚಾರವನ್ನ ತಿಳಿಸಿದ್ದಾನೆ.

Facebook Comments