ಹೆತ್ತ ತಾಯಿಯನ್ನೇ ಬರ್ಬರವಾಗಿ ಹತ್ಯೆ ಮಾಡಿದ ಪುತ್ರ ..!

ಈ ಸುದ್ದಿಯನ್ನು ಶೇರ್ ಮಾಡಿ

ಚಿಕ್ಕಮಗಳೂರು, ಸೆ.24- ಹೆತ್ತ ಮಗನೇ ತಾಯಿಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಗರದ ಗೌರಿ ಕಾಲುವೆ ಬಡಾವಣೆಯಲ್ಲಿ ನಡೆದಿದೆ. ಸುಧಾ (51) ಮೃತ ದುರ್ದೈವಿ. ದುಶಾಂತ್ (28) ಕೊಲೆ ಮಾಡಿದ ಪುತ್ರ ಎಂದು ಎಂದು ಶಂಕಿಸಿ ಆತನನ್ನು ಪೊಲೀಸರು ಬಂಸಿಧಿದ್ದಾರೆ.

ಮೃತ ಸುಧಾ ಅವರ ಮತ್ತೊಬ್ಬ ಪುತ್ರ ಸಂತೋಷ್ ಅವರು ಸಂಜೆ ಮನೆಗೆ ಬಂದು ಬಾಗಿಲು ಬಡಿದಾಗ ಯಾರು ಬಹಳ ಹೊತ್ತಿನಿಂದ ಬಾಗಿಲು ತೆರೆದಿದ್ದರಿಂದ ಕಿಟಕಿಯಲ್ಲಿ ನೋಡಿದ್ದಾರೆ. ನಂತರ ಒಳ ಹೋಗಿ ನೋಡಿದಾಗ ತಾಯಿ ಶವವಾಗಿ ಬಿದ್ದಿರುವುದು ಪಕ್ಕದಲ್ಲಿ ಸಹೋದರ ಕುಳಿತಿರುವುದು ಕಂಡುಬಂದಿದೆ.

ತಾಯಿ ಮತ್ತು ಮಗನ ನಡುವೆ ಆಗಾಗ ಗಲಾಟೆ ನಡೆಯುತ್ತಿತ್ತು ಎಂದು ತಿಳಿದುಬಂದಿದ್ದು.ನಿನ್ನೆ ಮಧ್ಯಾಹ್ನ ತಾಯಿಯ ಬಳಿ ಜಗಳವಾಡಿರುವ ದುಶ್ಯಂತ್ ಈ ಕೃತ್ಯ ಎಸಗಿರಬಹುದು ಎಂದು ಶಂಕಿಸಲಾಗಿದೆ. ಈತ ಮಾನಸಿಕ ಅಸ್ವಸ್ಥನಂತೆ ನಡೆದುಕೊಳ್ಳುತ್ತಿದ್ದ ಹೆಚ್ಚಿನ ತನಿಖೆಯಿಂದ ಕೊಲೆಗೆ ಕಾರಣ ತಿಳಿಯಬೇಕಾಗಿದೆ.

ಶವವನ್ನು ಮರಣೋತ್ತರ ಪರೀಕ್ಷೆಗೆ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದ್ದು ಪೊಲೀಸರು ದುಷ್ಯಂತನನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ. ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Facebook Comments

Sri Raghav

Admin