ಹೆತ್ತಮ್ಮನ ಸಾವಿನ ದುಃಖದಲ್ಲೂ ಮರೆಯದೆ ಮತ ಚಲಾಯಿಸಿದ ಮಗ..!

ಈ ಸುದ್ದಿಯನ್ನು ಶೇರ್ ಮಾಡಿ

ಹುಬ್ಬಳ್ಳಿ,ಏ.23- ಹಸೆ ಮಣೆ ಏರುವ ಮುನ್ನ ಮಧು ಮಕ್ಕಳು ಮತದಾನ ಮಾಡಿ ಪ್ರಜಾಪ್ರಭುತ್ವ ಮೌಲ್ಯ ಗಟ್ಟಿಗೊಳಿಸಿದ್ದರು. ಅದೇ ರೀತಿ ದಕ್ಷಿಣ ಕನ್ನಡದಲ್ಲಿ ಹೆರಿಗೆಗೂ ಮುನ್ನ ಗರ್ಭಿಣಿಯೊಬ್ಬಳು ಮತದಾನ ಮಾಡಿದ್ದಳು.

ಇದೀಗ ತಾಯಿ ಸತ್ತ ನೋವಿನಲ್ಲೂ ಮಗ ಮತದಾನ ಮಾಡುವ ಮೂಲಕ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ. 2ನೇ ಹಂತದ ಮತದಾನ ಇಂದು ಬೆಳಗ್ಗೆ 7 ಗಂಟೆಯಿಂದ ಪ್ರಾರಂಭವಾಯಿತು.

ಇಂದು ಮುಂಜಾನೆ ಹುಬ್ಬಳ್ಳಿಯ ಮಡಿವಾಳ ನಗರದ ನಿವಾಸಿಗಳಾದ ಸಿ.ಎನ್. ನಾಯಕ ಅವರ ತಾಯಿ ವಿಮಾಲಾ ನಾಯಕ(89) ಕೊನೆಯುಸಿರೆಳೆದರು. ಅಂಕೋಲಾದಲ್ಲಿ ವಾಸಿಸುತ್ತಿದ್ದ ತಾಯಿಯ ಸಾವಿನ ಸುದ್ದಿ ಬರಸಿಡಿಲಿನಂತೆ ಬಂದೆರಗಿತು.

ಆದರೆ ಸಿ.ಎನ್.ನಾಯಕ್ ಹಾಗೂ ಅವರ ಪತ್ನಿ ಇಂದಿರಾ ನಾಯಕ ಸಾವಿನ ನೋವಿನಲ್ಲೂ ಮತಗಟ್ಟೆಗೆ ಬಂದು ತಮ್ಮ ಹಕ್ಕು ಚಲಾವಣೆ ಮಾಡಿ ಅಂತ್ಯಸಂಸ್ಕಾರಕ್ಕೆ ಅಂಕೋಲಾಕ್ಕೆ ತೆರಳಿದರು. ಈ ಮೂಲಕ ಭಾರತೀಯ ಪ್ರಜೆಯ ಜವಾಬ್ದಾರಿ ಮೆರೆದರು.

Facebook Comments

Sri Raghav

Admin