ಜೈಲಲ್ಲಿರುವ ಡಿಕೆಶಿ ಮತ್ತು ಚಿದಂಬರಂ ಭೇಟಿಯಾದ ಸೋನಿಯಾ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಸೆ.23- ತಿಹಾರ್ ಜೈಲಿನಲ್ಲಿರುವ ಕಾಂಗ್ರೆಸ್‍ನ ಇಬ್ಬರು ಪ್ರಭಾವಿ ನಾಯಕರಾದ ಪಿ.ಚಿದಂಬರಂ, ಡಿ.ಕೆ.ಶಿವಕುಮಾರ್ ಅವರನ್ನು ಎಐಸಿಸಿ ಅಧಿನಾಯಕಿ ಸೋನಿಯಾ ಗಾಂಧಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಇಂದು ಬೆಳಗ್ಗೆ ಭೇಟಿ ಮಾಡಿ ಸ್ಥೈರ್ಯ ತುಂಬಿದ್ದಾರೆ.

ತಿಹಾರ್ ಜೈಲಿಗೆ ಬೆಳಗ್ಗೆ 10 ಗಂಟೆಗೆ ಭೇಟಿ ನೀಡಿದ ಸೋನಿಯಾ ಅವರು, ಡಿ.ಕೆ.ಶಿವಕುಮಾರ್ ಹಾಗೂ ಚಿದಂಬರಂ ಅವರೊಂದಿಗೆ ಚರ್ಚೆ ನಡೆಸಿ, ಅವರಿಗೆ ಧೈರ್ಯ ತುಂಬಿರುವುದಲ್ಲದೇ, ಪಕ್ಷ ನಿಮ್ಮೊಂದಿಗಿದೆ, ಎಲ್ಲಾ ಅಗತ್ಯ ಕಾನೂನು ನೆರವು ನೀಡುವ ಭರವಸೆ ನೀಡಿದ್ದಾರೆ.

ಈ ಮೂಲಕ ಕಾಂಗ್ರೆಸ್ ಪಕ್ಷ ಕೂಡ ಸಂಕಷ್ಟದಲ್ಲಿರುವ ನಾಯಕ ಬೆನ್ನಿಗೆ ನಿಲ್ಲುತ್ತದೆ. ಅವರಿಗೆ ಧೈರ್ಯವನ್ನು ಕೊಡುತ್ತದೆ. ಅಲ್ಲದೆ ಮುಂದಿನ ಹೋರಾಟಕ್ಕೆಲ್ಲ ಪಕ್ಷ ನಿಮ್ಮ ಜೊತೆಗಿರುತ್ತದೆ ಎಂಬ ಸಂದೇಶ ರವಾನಿಸುವ ಪ್ರಯತ್ನ ಮಾಡಿದ್ದಾರೆ.

Facebook Comments