ಸಂತ್ರಸ್ತರಿಗೆ ನೆರವಾದ ಸೋನು ಸೂದ್‍ಗೆ ಸೋಶಿಯಲ್ ಮೀಡಿಯಾದಲ್ಲಿ ಪ್ರಶಂಸೆ

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ, ಜೂ.7- ಅಂತರ್ಜಾಲದಲ್ಲಿ ಇತ್ತೀಚೆಗೆ ಬಾರಿ ಸುದ್ದಿಯಾಗುತ್ತಿರುವ ಬಾಲಿವುಡ್ ನಟ ಸೋನುಸೂದ್‍ಗೆ ಎಲ್ಲೆಡೆಯಿಂದ ಪ್ರಶಂಸೆಗಳ ಸುರಿಮಳೆ ಹರಿದು ಬರುತ್ತಿದೆ. ಲಾಕ್‍ಡೌನ್, ಪ್ರಕೃತಿ ವಿಕೋಪಕ್ಕೆ ತುತ್ತಾಗಿ ಬಳಲುತ್ತಿರುವವರ ನೆರವಿಗೆ ಸೋನು ಸೂದ್ ಆಗಮಿಸುವ ಮೂಲಕ ಅಂತರ್ಜಾಲದಲ್ಲಿ ಭಾರೀ ಸುದ್ದಿ ಮಾಡುತ್ತಿದ್ದಾರೆ.

ಲಾಕ್‍ಡೌನ್ ವೇಳೆ ಸಂಕಷ್ಟಕ್ಕೆ ಸಿಲುಕಿದ್ದ 177 ಮಂದಿ ಯುವತಿಯರನ್ನು ತಮ್ಮ ತಾಯ್ನಾಡಿಗೆ ಹೋಗಲು ನೆರವಿನ ಹಸ್ತ ಚಾಚಿದ್ದ ಸೂದ್, ಚಂಡಮಾರುತಕ್ಕೆ ಸಿಲುಕಿದ್ದ 200 ಮಂದಿ ಅಸ್ಸಾಂ ಪ್ರವಾಸಿಗರನ್ನು ತಮ್ಮ ತವರಿಗೆ ತೆರಳುವ ವ್ಯವಸ್ಥೆ ಮಾಡಿದ್ದರು.

ಈಗ ಮತ್ತೊಮ್ಮೆ ಸೋನುಸೂದ್ ಸಂಕಷ್ಟದಲ್ಲಿರುವವರ ನೆರವಿಗೆ ಬಂದಿದ್ದು ಮುಂಬೈನಲ್ಲಿ ಇಡ್ಲಿ ವ್ಯಾಪಾರ ಮಾಡುತ್ತಿದ್ದ 200 ಮಂದಿ ತಮಿಳುನಾಡು ನಿವಾಸಿಗಳನ್ನು ಬಸ್‍ಗಳಲ್ಲಿ ಅವರ ತಾಯ್ನಾಡಿಗೆ ತಲುಪಿಸಲು ಸಹಾಯ ಮಾಡುವ ಮೂಲಕ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಇತ್ತೀಚೆಗೆ ಸೋನುಸೂದ್ ಅವರು ಮನೆಯಲ್ಲಿ ಫೇಸ್ ಮಾಸ್ಕ್ ಮಾಡುವ ವೀಡಿಯೋವನ್ನು ಹರಿಬಿಟ್ಟಿದ್ದು ಅದಕ್ಕೆ ಭಾರೀ ಪ್ರಶಂಸೆಗಳು ವ್ಯಕ್ತವಾಗಿದ್ದವು. ತೆರೆಯ ಮುಂದೆ ವಿಲನ್ ಆಗಿ ಕಾಣಿಸಿಕೊಂಡರೂ ನಿಜ ಜೀವನದಲ್ಲಿ ಹೀರೋ ಆಗಲು ಹೊರಟಿರುವ ಸೂದ್‍ರ ಕಾರ್ಯವನ್ನು ಮೆಚ್ಚಿಕೊಳ್ಳಲೇಬೇಕು.

Facebook Comments