ಸೋನು ಸೂದ್ ನಿರೂಪಣೆಯಲ್ಲಿ ನ್ಯಾಷನಲ್ ಜಿಯೋಗ್ರಾಫಿಕ್ ನವೀನ ಸರಣಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.21- ಬೆರಗುಗಳಿಂದ ಅದ್ಭುತಗಳವರೆಗೆ , ಭಾರತವು ವಿಶಾಲವಾದ ಮತ್ತು ವೈವಿಧ್ಯಮಯವಾದ ದೇಶವಾಗಿದ್ದು , ಈ ದೇಶದ ನಾಗರಿಕರಿಗೂ ಸೇರಿದಂತೆ ವಿಶಿಷ್ಟವಾದ , ಆಸಕ್ತಿದಾಯಕವಾದ ಕಥೆಗಳ ಭಂಡಾರವನ್ನು ಹೊಂದಿದೆ. ಇಂತಹ ವಿಶಿಷ್ಟ ಕಥೆಗಳನ್ನು ಬಿಚ್ಚಿಡಲಿರುವ ನ್ಯಾಷನಲ್ ಜಿಯೋಗ್ರಾಫಿಕ್ ವೀಕ್ಷಕರಿಗೆ ಇಟ್ ಹ್ಯಾಪ£್ಸï ಓನ್ಲಿ ಇನ್ ಇಂಡಿಯಾ ಎಂಬ ಮೂಲ ಸರಣಿ ಯನ್ನು ತರುತ್ತಿದೆ. ನಟ , ನಿರ್ಮಾಪಕ ಸೋನು ಸೂದ್ ಇದನ್ನು ನಿರೂಪಣೆ ಮಾಡಲಿದ್ದು , ಈ 10 – ಭಾಗಗಳ ಸರಣಿಯು ಭಾರತದ ಉದ್ದಗಲದ ಹೆಚ್ಚು ಪ್ರಸಿದ್ಧವಲ್ಲದ ಮತ್ತು ಉತ್ತಮ ಸಂಶೋಧನೆಯ ವಿವರಣೆಗಳಿಗೆ ವೀಕ್ಷಕರನ್ನು ಕರೆದೊಯ್ಯುತ್ತದೆ.

ಅ.26 ರಂದು ರಾತ್ರಿ 8 ಗಂಟೆಗೆ ಭಾರತದ ನ್ಯಾಷನಲ್ ಜಿಯೋಗ್ರಾಫಿಕ್ ಚಾನೆಲ್‍ನಲ್ಲಿ ಪ್ರದರ್ಶನಗೊಳ್ಳಲಿದ್ದು , ಕಾರ್ಯಕ್ರಮದಲ್ಲಿ ಸೋನು ಸಂಪೂರ್ಣ ಭಾರತೀಯತೆಗಳನ್ನು ! ಆಧುನಿಕತೆಯಿಂದ ಅತೀಂದ್ರಿ ಯದವರೆಗೆ , ಜನರಿಂದ ಸ್ಥಳಗಳವರೆಗೆ , ಪುರಾಣಗಳಿಂದ ನೈಸರ್ಗಿಕ ಅದ್ಭುತಗಳವರೆಗೆ , ಪ್ರತಿಭಾವಂತ ಆವಿಷ್ಕಾರರು , ಬೃಹತ್ ಕಟ್ಟಡಗಳಿಂದ ಹಿಡಿದು ಇತ್ತೀಚಿನ ಅಂತರಿಕ್ಷ ತಂತ್ರಜ್ಞಾನದವರೆಗೆ ರಾಷ್ಟ್ರದಾದ್ಯಂತದ ಆಕರ್ಷಕ ಮತ್ತು ಅನಿರೀಕ್ಷಿತ ಕಥೆಗಳನ್ನು ಪ್ರಸ್ತುತಪಡಿಸಲಿದ್ದಾರೆ.

ಉದಾಹರಣೆಗೆ ಪ್ರದರ್ಶನವು ಕರ್ನಾಟಕದ ಕೆಲವು ಅದ್ಭುತ ಕಥೆಗಳನ್ನು ವೀಕ್ಷಕರಿಗೆ ತರುತ್ತದೆ . – 1 ನೇ ಮಹಾಯುದ್ಧದ ಸಮಯದಲ್ಲಿ ಆರಂಭ ವಾದ ಮೈಸೂರು ಶ್ರೀಗಂಧದ ಸಾಬೂನುಗಳ ಮೂಲ ಮತ್ತು ಪಯಣ , ಮತ್ತು ಹಂಪಿಯ ಸಂಗೀತ ಸ್ತಂಭಗಳು ಹೇಗೆ ಕೆಲವು ಭಾರತೀಯ ಸಂಗೀತ ವಾದ್ಯಗಳ ನಾದಗಳಿಗೆ ಸಂಬಂಸಿದ ಶಬ್ದಗಳನ್ನು ಹೊರಡಿಸುತ್ತವೆ ಎಂದು ನಂಬಲಾಗಿದೆ.

ಪ್ರತಿ ಎಪಿಸೋಡ್ ವೀಕ್ಷಕರಿಗೆ ಅವರು ದೇಶವನ್ನು ಎಷ್ಟು ಚೆನ್ನಾಗಿ ತಿಳಿದುಕೊಂಡಿದ್ದಾರೆ ಮತ್ತು ಅರ್ಥಮಾಡಿಕೊಂಡಿದ್ದಾರೆ ಎಂಬ ಮಿತಿಗಳನ್ನು ಮೀರಿದ ಇಂತಹ ಅಸಾಂಪ್ರದಾಯಿಕ ಕಥೆಗಳನ್ನು ತರುತ್ತದೆ.

ಭಾರತದ ವಿಶಿಷ್ಟತೆಯನ್ನು ಅನೇಕ ಕ್ಷೇತ್ರಗಳಲ್ಲಿ ಆಚರಿಸುವುದು ನಮ್ಮ ಗುರಿ, ಮತ್ತು ಕಥೆಗಳನ್ನು ಪ್ರಸ್ತುತಪಡಿಸಲು ಸೋನು ಸೂದ್ಗಿಂತ ಉತ್ತಮ ಆತಿಥೇಯರ ಬಗ್ಗೆ ನಾವು ಯೋಚಿಸಲು ಸಾಧ್ಯವಿಲ್ಲ ಎಂದು ನ್ಯಾಷನಲ್ ಜಿಯೋಗ್ರಾಫಿಕ್ ವಕ್ತಾರರು ಹೇಳಿದರು.

Facebook Comments