ನಿರಾಶ್ರಿತರಿಗೆ ನೆರವಿನ ಹಸ್ತ ಚಾಚಿದ ನಟ ಸೋನುಸೂದ್

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ, ಜೂ.5- ತೆರೆಯ ಮೇಲೆ ವಿಲನ್ ಆಗಿರುವ ಸೋನುಸೂದ್ ನಿಜ ಜೀವನದಲ್ಲಿ ಹೀರೋ ಆಗುವ ಮೂಲಕ ಗಮನ ಸೆಳೆಯುತ್ತಿದ್ದಾರೆ.ಇತ್ತೀಚೆಗೆ ಕೊರೊನಾ ಹಾವಳಿಯಿಂದ ಸಂಕಷ್ಟಕ್ಕೆ ಸಿಲುಕಿದ್ದ 177 ಯುವತಿಯರನ್ನು ರಕ್ಷಿಸಿ ಅವರ ತವರಿಗೆ ತೆರಳಲು ಸಹಾಯ ಮಾಡಿದ್ದ ಸೋನುಸೂದ್ ಈಗ ಚಂಡಮಾರುತಕ್ಕೆ ಸಿಲುಕಿದ್ದ ಕುಟುಂಬದವರ ನೆರವಿಗೆ ಧಾವಿಸಿದ್ದಾರೆ.

ಚಂಡಮಾರುತದ ಆರ್ಭಟಕ್ಕೆ ಸಿಲುಕಿ ಕಂಗಲಾಗಿದ್ದ 28 ಸಾವಿರ ನಿರಾಶ್ರಿತರಿಗೆ ಆಹಾರ, ಆಶ್ರಯದ ವ್ಯವಸ್ಥೆಯನ್ನು ಮಾಡುವ ಮೂಲಕ ಅವರಿಗೆ ನೆರವು ನೀಡಿದ್ದಾರೆ.

ಇಂದು ನಾವು ಕಷ್ಟದ ಸ್ಥಿತಿಯನ್ನು ಎದುರಿಸುತ್ತಿದ್ದೇವೆ, ಸೆಲಬ್ರಿಟಿಗಳು ಹಾಗೂ ಜನಸಾಮಾನ್ಯರು ತಮ್ಮ ಕೈಲಾದ ಸಹಾಯವನ್ನು ಮಾಡುವುದು ಎಲ್ಲರ ಧರ್ಮ, ನಾನು ಕೂಡ ಸಹಾಯದ ಹಸ್ತ ಚಾಚಿದ್ದು ಮುಂಬೈ ಕರಾವಳಿಯಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ 28 ಸಾವಿರ ಜನರಿಗೆ ಆಹಾರವನ್ನು ಒದಗಿಸಿರುವುದರೊಂದಿಗೆ ಶಾಲಾ, ಕಾಲೇಜಿನಲ್ಲಿ ಉಳಿದುಕೊಳ್ಳಲು ನೆರವು ನೀಡಿದ್ದೇನೆ, ಚಂಡಮಾರುತದಲ್ಲಿ 200 ಮಂದಿ ಅಸ್ಸಾಂನ ವಲಸಿಗರು ಸಿಲುಕಿದ್ದರು ಅವರನ್ನು ಅವರ ಊರುಗಳಿಗೆ ಕಳಿಸಿಕೊಟ್ಟಿದ್ದೇನೆ ಎಂದು ಹೇಳಿದರು.

Facebook Comments