ನಿರ್ಮಾಪಕ ಸೌಂದರ್ಯ ಜಗದೀಶ್‍ರ ಪತ್ನಿ, ಪುತ್ರ ಪತ್ತೆಗೆ ರಾಜ್ಯಾದಾದ್ಯಂತ ಶೋಧ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.28- ನಿರ್ಮಾಪಕ ಸೌಂದರ್ಯ ಜಗದೀಶ್ ಅವರ ಪತ್ನಿ, ಪುತ್ರ ಹಾಗೂ ಬೌನ್ಸರ್‍ಗಳು ಇನ್ನೂ ಪತ್ತೆಯಾಗಿಲ್ಲ. ಅವರುಗಳಿಗಾಗಿ ಉತ್ತರ ವಿಭಾಗದ ಎಂಟು ವಿಶೇಷ ತಂಡಗಳು ರಾಜ್ಯಾದ್ಯಂತ ವ್ಯಾಪಕ ಶೋಧ ನಡೆಸುತ್ತಿವೆ. ಈಗಾಗಲೇ ಈ ತಂಡಗಳು ಮಂಗಳೂರು, ಮೈಸೂರು, ಬೆಳಗಾವಿ, ಕಲಬುರಗಿ ಸೇರಿದಂತೆ ಮುಂತಾದ ಕಡೆಗಳಿಗೆ ತೆರಳಿ ಹುಡುಕಾಟ ನಡೆಸಿದರೂ ಪ್ರಯೋಜನವಾಗಿಲ್ಲ. ಹಾಗಾಗಿ ತಲೆಮರೆಸಿಕೊಂಡಿರುವವರ ಶೋಧಕಾರ್ಯ ಮುಂದುವರೆದಿದೆ.

ಈ ಪ್ರಕರಣದಲ್ಲಿ ಸೌಂದರ್ಯ ಜಗದೀಶ್ ಅವರ ಮನೆಯ ಸೆಕ್ಯೂರಿಟಿ ಗಾರ್ಡ್ ಬಾಲಾಜಿಯನ್ನು ಮಹಾಲಕ್ಷ್ಮಿ ಲೇಔಟ್ ಠಾಣೆ ಪೊಲೀಸರು ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಿ ಹಲವು ಮಾಹಿತಿಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಹಲ್ಲೆ ನಡೆಸಲು ಸೆಕ್ಯೂರಿಟಿ ಗಾರ್ಡ್ ಪ್ರಚೋದನೆ ಹಾಗೂ ಸಹಾಯ ಮಾಡಿದ ಹಿನ್ನೆಲೆಯಲ್ಲಿ ಅವರನ್ನು ಬಂಸಲಾಗಿದೆ.

ನಗರದಲ್ಲೂ ಸಹ ಒಂದು ತಂಡ ಪರಾರಿಯಾಗಿರುವವರಿಗಾಗಿ ಶೋಧ ನಡೆಸುತ್ತಿದ್ದು, ಬೌನ್ಸರ್‍ಗಳ ಮನೆಗಳನ್ನು ಪರಿಶೀಲನೆ ನಡೆಸಿದೆ. ಆದರೆ, ಅಲ್ಲೂ ಅವರ ಸುಳಿವಿಲ್ಲ. ಸೌಂದರ್ಯ ಜಗದೀಶ್ ಅವರ ಎದುರು ಮನೆಯ ಕೆಲಸದ ಮಹಿಳೆ ಹಾಗೂ ಅವರ ತಾಯಿ ಮೇಲೆ ಹಲ್ಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಸಿದಂತೆ ವಿಚಾರಣೆಗೆ ಹಾಜ ರಾಗಲು ಸೌಂದರ್ಯ ಜಗದೀಶ್ ಅವರ ಪತ್ನಿ ರೇಖಾ, ಮಗ ಸ್ನೇಹಿತ್ ಸೇರಿ 9 ಮಂದಿಗೆ ವಿಚಾರಣೆಗೆ ಹಾಜರಾಗು ವಂತೆ ನೋಟಿಸ್ ನೀಡಲಾಗಿತ್ತು.

ವಿಚಾರಣೆಗೆ ಹಾಜರಾಗದೆ ಪರಾರಿಯಾಗಿದ್ದಾರೆ. ಇವರಿಗಾಗಿ ಶೋಧ ಮುಂದುವರೆದಿದೆ. ಈ ನಡುವೆ ಘಟನೆಗೆ ಸಂಬಂಸಿದಂತೆ ಮೊನ್ನೆ 50ಕ್ಕೂ ಹೆಚ್ಚು ಮಹಿಳೆಯರು ಸೌಂದರ್ಯ ಜಗದೀಶ್ ಅವರ ಮನೆ ಮುಂದೆ ಪ್ರತಿಭಟನೆ ನಡೆಸಿ, ಪರಾರಿಯಾಗಿರುವ ಸ್ನೇಹಿತ್ ಹಾಗೂ ಇನ್ನಿತರರನ್ನು ಶೀಘ್ರ ಬಂಸಬೇಕೆಂದು ಒತ್ತಾಯಿಸಿದರು.

ಪಶ್ಚಿಮ ವಲಯದ ಹೆಚ್ಚುವರಿ ಪೊಲೀಸ್ ಆಯುಕ್ತರ ಉಸ್ತುವಾರಿಯಲ್ಲಿ ಈ ಪ್ರಕರಣದ ತನಿಖೆ ನಡೆಯುತ್ತಿದ್ದು, ತಲೆ ಮರೆಸಿಕೊಂಡಿರುವ ಆರೋಪಿ ಗಳನ್ನು ಸದ್ಯದಲ್ಲೇ ಪತ್ತೆಹಚ್ಚಿ ಬಂಸಲಾಗುವುದು ಎಂದು ಪೊಲೀಸ್ ಅಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

# ಠಾಣೆಗೆ ದೂರುದಾರರು:

ಸೌಂದರ್ಯ ಜಗದೀಶ್ ಅವರ ಪತ್ನಿ, ಪುತ್ರ ಹಾಗೂ ಇತರರ ಮೇಲೆ ದೂರು ನೀಡಿರುವ ದೂರುದಾರರು ರಾತ್ರಿ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಗೆ ಹೋಗಿ ಇನ್ಸ್‍ಪೆಕ್ಟರ್ ಅವರನ್ನು ಭೇಟಿಯಾಗಬೇಕೆಂದು ಹೇಳಿದ್ದಾರೆ.  ಆ ಸಂದರ್ಭದಲ್ಲಿ ಇನ್ಸ್‍ಪೆಕ್ಟರ್ ಇರದ ಕಾರಣ ಠಾಣೆಯಲ್ಲಿದ್ದ ಸಿಬ್ಬಂದಿ ಏನು ಸಮಾಚಾರ ಹೇಳಿ ಎಂದು ವಿಚಾರಿಸಿದ್ದಾರೆ.

ಈ ಪ್ರಕರಣ ಸಂಬಂಧ ಇನ್ಸ್‍ಪೆಕ್ಟರ್ ಅವರೊಂದಿಗೆ ಮಾತನಾಡಬೇಕೆಂದು ದೂರುದಾರರು ಹೇಳಿದಾಗ ನಾಳೆ ಬೆಳಗ್ಗೆ ಇನ್ಸ್‍ಪೆಕ್ಟರ್ ಬರುತ್ತಾರೆ. ಬಂದು ಮಾತನಾಡಿ ಎಂದು ಸಿಬ್ಬಂದಿ ಹೇಳಿ ಕಳುಹಿಸಿದ್ದಾರೆ. ಆದರೆ, ಇದುವರೆಗೂ ದೂರುದಾರರು ಇನ್ಸ್ ಪೆಕ್ಟರ್ ಅವರನ್ನು ಭೇಟಿಯಾಗಲು ಬಂದಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಈ ಸಂಜೆಗೆ ತಿಳಿಸಿದ್ದಾರೆ. ಜಗದೀಶ್ ಅವರ ಪತ್ನಿ ಮತ್ತು ಪುತ್ರನ ಹೆಸರನ್ನು ಪ್ರಕರಣದಿಂದ ಕೈಬಿಡುವಂತೆ ತಿಳಿಸಲು ದೂರುದಾರರು ಠಾಣೆಗೆ ಬಂದಿದ್ದರೆಂದು ತಿಳಿದುಬಂದಿದೆ.

ರಾಜಿ-ಸಂಧಾನ: ಈ ನಡುವೆ ನಟರೊಬ್ಬರು ರಾಜಿ-ಸಂಧಾನ ನಡೆಸಲು ಪ್ರಯತ್ನಿಸುತ್ತಿದ್ದಾರೆಂಬುದು ತಿಳಿದುಬಂದಿದೆ.

Facebook Comments