ಸೌರವ್ ಗಂಗೂಲಿಗೆ 22 ಬಾರಿ ಕೋವಿಡ್ ಟೆಸ್ಟ್

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ, ನ.25- ಐಪಿಎಲ್ 13ರ ಆವೃತ್ತಿ ಯಶಸ್ವಿಯಾಗಿ ನಡೆಯುವಲ್ಲಿ ಮಹತ್ತರ ಪಾತ್ರ ವಹಿಸಿದ್ದ ಬಿಸಿಸಿಐನ ಅಧ್ಯಕ್ಷ ಸೌರವ್ ಗಂಗೂಲಿ ಅವರು 22 ಬಾರಿ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ವಿಡಿಯೋ ಸಂವಾದ ಒಂದರಲ್ಲಿ ಮಾತನಾಡಿರುವ ಸೌರವ್‍ಗಂಗೂಲಿ, ವಿಶ್ವದಾದ್ಯಂತ ಕೋವಿಡ್ ಮಹಾಮಾರಿ ಕಾಡುತ್ತಿದ್ದರಿಂದ ಭಾರತದಲ್ಲಿ ಐಪಿಎಲ್ 13 ನಡೆಸಲು ಸಾಧ್ಯವಾಗಲಿಲ್ಲ ಆದರೆ ಸೆಪ್ಟೆಂಬರ್‍ನಿಂದ ನವೆಂಬರ್‍ವರೆಗೆ ಅರಬ್ ರಾಷ್ಟ್ರಗಳಲ್ಲಿ ಯಶಸ್ವಿಯಾಗಿ ನಡೆದಿದೆ.

ಐಪಿಎಲ್ ಆಯೋಜನೆ ಗೊಂಡ ನಂತರ ಐಪಿಎಲ್ ಆಟಗಾರರು, ಫ್ರಾಂಚೈಸಿಗಳು, ಸಿಬ್ಬಂದಿಗಳಿಗೆ ಕೊರೊನಾ ಟೆಸ್ಟ್ ಮಾಡಿಸಲಾಗಿತ್ತು, ನಾನು ಕೂಡ ಕೋವಿಡ್ ಪರೀಕ್ಷೆಗೆ ಒಳಗಾಗಿದ್ದೇನೆ ಎಂದ ದಾದ ಅಚ್ಚರಿ ಸಂಗತಿಯನ್ನು ಹೊರಹಾಕಿದರು.

ನಾನು ವಾಸಿಸುತ್ತಿದ್ದ ಪಶ್ಚಿಮ ಬಂಗಾಳದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗಿದ್ದರಿಂದ ಹಾಗೂ ವಿದೇಶದಲ್ಲಿ ಐಪಿಎಲ್ ನಡೆಯಬೇಕಾ ಗಿದ್ದರಿಂದ ಕಳೆದ 4 ತಿಂಗಳಿನಿಂದ 22 ಬಾರಿ ಪರೀಕ್ಷೆಗೆ ಒಳಗಾಗಿದ್ದೆ ಆದರೆ ಒಮ್ಮೆಯೂ ಪಾಸಿಟಿವ್ ವರದಿ ಬಾರದಿರುವುದು ನನ್ನ ಅದೃಷ್ಟ ಎಂದು ಸೌರವ್ ಹೇಳಿದ್ದಾರೆ.

ಈಗ ಆಸೀಸ್ ನಾಡಿನಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ಸರಣಿ ನಡೆಯಲಿರುವುದರಿಂದ ಟೀಂ ಇಂಡಿಯಾ ಆಟಗಾರರು ಸಿಡ್ನಿ ಕ್ವಾರೆಂಟೈನ್‍ನಲ್ಲಿರುವುದರಿಂದ ತಂಡದ ಆಟಗಾರರು ಬಹಳಷ್ಟು ಸುರಕ್ಷಿತವಾಗಿದ್ದಾರೆ ಎಂದು ಸೌರವ್‍ಗಂಗೂಲಿ ಇದೇ ವೇಳೆ ಹೇಳಿದರು.

ಭಾರತದಲ್ಲಿ ಉತ್ತಮ ವಿಕೆಟ್‍ಕೀಪರ್‍ಗಳಿದ್ದಾರೆ: ಮಹೇಂದ್ರಸಿಂಗ್ ಧೋನಿ ಭಾರತ ಕಂಡ ಉತ್ತಮ ವಿಕೆಟ್‍ಕೀಪರ್‍ಗಳಾಗಿದ್ದರು, ಅವರ ನಿವೃತ್ತಿಯ ನಂತರವೂ ತಂಡದಲ್ಲಿ ಕೆ.ಎಲ್.ರಾಹುಲ್, ಸಂಜುಸಮ್ಸನ್, ವೃದ್ಧಿಮಾನ್‍ಶಾ, ರಿಷಭ್ ಪಂತ್ ಇರುವುದರಿಂದ ತಂಡಕ್ಕೆ ಅನುಕೂಲವಾಗಿದೆ ಎಂದು ಸೌರವ್ ಗಂಗೂಲಿ ಹೇಳಿದರು.

Facebook Comments