ಬಿಸಿಸಿಐನಲ್ಲಿ ‘ದಾದಾ’ಗಿರಿ ಶುರು

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ, ಅ.23- ಭಾರತೀಯ ಕ್ರಿಕೆಟ್ ತಂಡದ ಅತ್ಯಂತ ಯಶಸ್ವೀ ನಾಯಕರಲ್ಲಿ ಒಬ್ಬರಾಗಿದ್ದ ಸೌರವ್ ಗಂಗೂಲಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯ 39ನೆ ಅಧ್ಯಕ್ಷರಾಗಿ ಇಂದು ಅಧಿಕಾರ ಸ್ವೀಕರಿಸಿದರು.

ದಾದಾ ಎಂದೇ ಚಿರಪರಿಚಿತರಾದ 47 ವರ್ಷದ ಗಂಗೂಲಿ ಇನ್ನು 9 ತಿಂಗಳ ಕಾಲ ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ನಿಯಂತ್ರಣ ಮಂಡಳಿ ಅಧ್ಯಕ್ಷರಾಗಿ ಮುಂದುವರೆಯಲಿದ್ದಾರೆ.
ಮುಂಬೈನ ಬಿಸಿಸಿಐ ಕಚೇರಿಯಲ್ಲಿ ಇಂದು ನಡೆದ ವಾರ್ಷಿಕ ಸಾಮಾನ್ಯ ಸಭೆಯ ನಂತರ ಗಂಗೂಲಿ ಸಂಸ್ಥೆಯ ಅಧ್ಯಕ್ಷರಾಗಿ ಪದಗ್ರಹಣ ಮಾಡಿದರು.

# 65 ವರ್ಷಗಳ ನಂತರ ಬಿಸಿಸಿಐ ಅಧ್ಯಕ್ಷರಾದ ಕ್ರಿಕೆಟಿಗ ಇಂದಿನಿಂದ `ದಾದಾ’ ದರ್ಬಾರ್
ಮುಂಬೈ, ಅ.23- ಬಂಗಾಳದ ಹುಲಿ ಸೌರವ್‍ಗಂಗೂಲಿ ಬಿಸಿಸಿಐನ ನೂತನ ಸಾರಥಿ ಆಗುವ ಮೂಲಕ 65 ವರ್ಷಗಳ ನಂತರ ಕ್ರಿಕೆಟಿಗನೊಬ್ಬ ಆ ಹುದ್ದೆಯನ್ನು ಅಲಂಕರಿಸಿದ ಎರಡನೇ ಆಟಗಾರನೆಂಬ ಕೀರ್ತಿಗೆ ಭಾಜನರಾಗಿದ್ದಾರೆ. ಈ ಹಿಂದೆ 1954-56ರಲ್ಲಿ ಮಹಾರಾಜ್ ಆಫ್ ವಿಜಯನಗರಂ ಎಂದೇ ಖ್ಯಾತರಾಗಿದ್ದ ವಿಜ್ಜಿ ಅವರು ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ನಂತರ ಕ್ರಿಕೆಟಿಗರಾದ ಸುನೀಲ್‍ಗವಾಸ್ಕರ್, ಶಿವಲಾಲ್‍ಯಾದವ್ ಅವರು ಅರೆಕಾಲಿಕರಾಗಿ ಬಿಸಿಸಿಐ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿ ದ್ದರು, ಈಗ ಗಂಗೂಲಿ 39 ನೆ ಬಿಸಿಸಿಐ ಅಧ್ಯಕ್ಷರಾಗುವ ಮೂಲಕ ಭಾರತ ಕ್ರಿಕೆಟ್ ತಂಡಕ್ಕೆ ಹೊಸ ರಂಗು ತುಂಬಲು ಹೊರಟಿದ್ದಾರೆ.

ಸಿಒಎ ವಜಾ: 2017ರಲ್ಲಿ ನಡೆದ ಐಪಿಎಲ್‍ನಲ್ಲಿ ಫಿಕ್ಸಿಂಗ್ ಕರಿನೆರಳು ಆವರಿಸಿ ಇಡೀ ಕ್ರಿಕೆಟ್ ರಂಗವೇ ತಲೆತಗ್ಗಿಸುವಂತಾದ ನಂತರ ಸುಪ್ರೀಂಕೋರ್ಟ್ ಬಿಸಿಸಿಐ ಆಡಳಿತ ಮಂಡಳಿಯನ್ನು ರದ್ದು ಮಾಡಿ ಕೋರ್ಟೇ ಆಡಳಿತಾತ್ಮಕ ಸಮಿತಿಯನ್ನು ರಚಿಸಿದ ವಿನೋದ್‍ರೈ ಅವರು ಅದರ ಮುಖ್ಯಸ್ಥರಾಗಿ 33 ತಿಂಗಳ ಕಾಲ ಅಧಿಕಾರ ನಡೆಸಿದ್ದರು. ಈಗ ಗಂಗೂಲಿ ಬಿಸಿಸಿಐ ನೂತನ ಅಧ್ಯಕ್ಷರಾಗಿರುವುದರಿಂದ ಸಿಒಎ ಅಧಿಕಾರವನ್ನು ಸುಪ್ರೀಂಕೋರ್ಟ್ ವಜಾ ಗೊಳಿಸಿದೆ.

ತ್ಯಾಗ ಮಾಡಿದ ಬ್ರಿಜೇಶ್: ಬಿಸಿಸಿಐ ನೂತನ ಅಧ್ಯಕ್ಷ ಸ್ಥಾನಕ್ಕೆ ಕರ್ನಾಟಕ ರಾಜ್ಯ ಅಸೋಸಿಯೇಷನ್ ಅಧ್ಯಕ್ಷ ಬ್ರಿಜೇಶ್ ಪಟೇಲ್ ಹಾಗೂ ಸೌರವ್ ಗಂಗೂಲಿ ನಡೆವು ತೀವ್ರ ಜಿದ್ದಾ ಜಿದ್ದಿ ಇತ್ತಾದರೂ ನಂತರ ಬ್ರಿಜೇಶ್ ಹಿಂದೆ ಸರಿದಿದ್ದರಿಂದ ಗಂಗೂಲಿ ಒಬ್ಬರೇ ಅಖಾಡದಲ್ಲಿ ಉಳಿದಿದ್ದರಿಂದ ಅವರನ್ನೇ ಅವಿರೋಧವಾಗಿ ಬಿಸಿಸಿಐನ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ.

ದಾದಾಗಿರಿ 10 ತಿಂಗಳು :
ಗಂಗೂಲಿಯು 2015 ರಿಂದ ಬಂಗಾಳ ಕ್ರಿಕೆಟ್ ಅಸೋಸಿ ಯೇಷನ್‍ನ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸು ತ್ತಿದ್ದರೂ ಈಗ ಬಿಸಿಸಿಐನ ನೂತನ ಸಾರಥಿಯಾಗಿ ರುವುದರಿಂದ ಆ ಹುದ್ದೆಗೆ ರಾಜೀನಾಮೆ ನೀಡಿದ್ದಾದರಾದರೂ ಗಂಗೂಲಿ 10 ತಿಂಗಳು ಕಾಲವಷ್ಟೇ ಬಿಸಿಸಿಐ ಅಧ್ಯಕ್ಷರಾಗಿ ದಾದಾಗಿರಿ ಮಾಡಲಿದ್ದಾರೆ. ಮುಂಬೈನಲ್ಲಿ ಇಂದು ನಡೆದ ಸಭೆಯಲ್ಲಿ ಗಂಗೂಲಿ ಅಧಿಕೃತವಾಗಿ ಬಿಸಿಸಿಐ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರೆ, ಮಹಿಮ್ ವರ್ಮಾ ಉಪಾಧ್ಯಕ್ಷರಾಗಿ, ಕೇಂದ್ರಗೃಹ ಸಚಿವ ಅಮಿತ್‍ಶಾರ ಪುತ್ರ ಜಯ್‍ಶಾ ಕಾರ್ಯದರ್ಶಿಯಾಗಿ ಹಾಗೂ ಬಿಸಿಸಿಐ ಮಾಜಿ ಅಧ್ಯಕ್ಷ ಅನುರಾಗ್ ಠಾಕೂರ್ ಸಹೋದರ ಅರುಣ್ ಧುಮಾಲ್ ಖಜಾಂಚಿಯಾಗಿ ಅಧಿಕಾರ ವಹಿಸಿಕೊಂಡರು.

ಬೆಟ್ಟದಂತಹ ಸವಾಲು: ಬಿಸಿಸಿಐ ಅಧ್ಯಕ್ಷರಾಗಿರುವ ಗಂಗೂಲಿ ಮುಂದೆ ಸಾಕಷ್ಟು ಸವಾಲುಗಳು ಎದುರಾಗಿವೆ. ಧೋನಿ ನಿವೃತ್ತಿ, ಭಾರತ ತಂಡದ ಕೋಚ್ ರವಿಶಾಸ್ತ್ರಿಯನ್ನು ಮುಂದುವರೆಸಬೇಕೋ ಅಥವಾ ಅ ಬೇರೊಬ್ಬ ತರಬೇತುದಾರರನ್ನು ತಂಡಕ್ಕೆ ತರಬೋಕೋ, ಕಪ್ಪು ಚುಕ್ಕಿಯಂತಿರುವ ಐಪಿಎಲ್‍ಗೆ ಹೊಸ ಆಯಾಮ ಬರೆದಿರುವುದು ಗಂಗೂಲಿ ಮುಂದಿರುವ ಸವಾಲುಗಳಾಗಿದ್ದು ಅದನ್ನು ದಾದಾ ಹೇಗೆ ನಿಭಾಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕು.

Facebook Comments