EXCLUSIVE : ಬಿಸಿಸಿಐ ಬಾಸ್ ಗಂಗೂಲಿ ಜೀವನದ ಅತ್ಯಮೂಲ್ಯ 48 ಕ್ಷಣಗಳು

ಈ ಸುದ್ದಿಯನ್ನು ಶೇರ್ ಮಾಡಿ

# ಜಯಪ್ರಕಾಶ್
ಭಾರತ ಕ್ರಿಕೆಟ್ ತಂಡದ ಮೆಚ್ಚಿನ ನಾಯಕ ಸೌರವ್‍ಗಂಗೂಲಿ, ಬಿಸಿಸಿಐನ ಅಧ್ಯಕ್ಷ, ಟೀಂ ಇಂಡಿಯಾದ ಯಶಸ್ವಿ ಬ್ಯಾಟ್ಸ್‍ಮನ್, ಬೌಲರ್, ವೀಕ್ಷಕ ವಿವರಣೆಗಾರ ಹೀಗೆ ನಾನಾ ಪ್ರತಿಭೆಗಳನ್ನು ಹೊಂದಿರುವ ಸೌರವ್ ಗಂಗೂಲಿಗೆ ಇಂದು 48ರ ಜನ್ಮದಿನದ ಸಂಭ್ರಮ.

ಸೌರವ್‍ಗಂಗೂಲಿ ಕ್ರಿಕೆಟ್ ತಂಡದ ಹಾಲಿ ಹಾಗೂ ಮಾಜಿ ಆಟಗಾರರು ಶುಭಾಶಯಗಳ ಸುರಿಮಳೆಯನ್ನೇ ಸುರಿಸಿದ್ದರೆ, ಗಂಗೂಲಿ ಹುಟ್ಟುಹಬ್ಬದ ಸಲುವಾಗಿ ಅವರ ಜೀವನ ಹಾಗೂ ಕ್ರಿಕೆಟ್‍ನಲ್ಲಿ ಅವರು ಮಾಡಿದ ಕೆಲವು ಕ್ಷಣಗಳನ್ನು ಇಲ್ಲಿ ಕೊಡಲಾಗಿದೆ.

1) ಬಿಸಿಸಿಐನ ಅಧ್ಯಕ್ಷರಾಗಿರುವ ಸೌರವ್‍ಗಂಗೂಲಿಗೆ ಅವರ ಪೋಷಕರು ಗಂಗೂಲಿಗೆ ಚಿಕ್ಕ ವಯಸ್ಸಿನಲ್ಲಿ ಮಹಾರಾಜ ಎಂಬ ಹೆಸರಿಟ್ಟಿದ್ದರು, ನಂತರ ಅವರು ಪ್ರಿನ್ಸ್ ಆಫ್ ಕೋಲ್ಕತ್ತಾ ಆಗಿ ಈಗ ಬಿಸಿಸಿಐ ದೊರೆಯಾಗಿದ್ದಾರೆ.

2) ಚಿಕ್ಕವಯಸ್ಸಿನಲ್ಲಿ ಸೌರವ್ ಫುಟ್‍ಬಾಲ್ ಪ್ರೇಮಿಯಾಗಿದ್ದರು.
3) ಗಂಗೂಲಿ ತಾಯಿ ನಿರೂಪಾಗೆ ಸೌರವ್‍ರನ್ನು ಕ್ರಿಕೆಟ್ ರಂಗಕ್ಕೆ ತರಲು ಇಷ್ಟವಿರಲಿಲ್ಲ, ಆತ ಹೆಚ್ಚಿನ ವಿದ್ಯಾಭ್ಯಾಸ ಮಾಡಲಿ ಎಂಬ ಬಯಕೆ ಅವರಿಗಿತ್ತು.

4) ಬಂಗಾಳ ಕ್ರಿಕೆಟ್ ಅಕಾಡೆಮಿಯಲ್ಲಿ ಬೇಸಿಗೆ ಶಿಬಿರದಲ್ಲಿ ಪಾಲ್ಗೊಂಡಿದ್ದ ದಾದಾರ ಅಣ್ಣ ಸ್ನೇಹಾಶೀಸ್‍ರ ಬದಲಿಗೆ ಗಂಗೂಲಿ ಮೊದಲ ಬಾರಿಗೆ ಕ್ರಿಕೆಟ್ ಅಂಗಳಕ್ಕೆ ಧುಮುಕ್ಕಿದ್ದರು.

5) ದೇವಭಕ್ತನಾಗಿದ್ದ ಗಂಗೂಲಿ ಪ್ರತಿ ಮಂಗಳವಾರ ಉಪವಾಸ ಮಾಡುತ್ತಿದ್ದರು.
6) ಕ್ರಿಕೆಟ್‍ನಲ್ಲಿ ದಾದಾ ತೋರಿದ ಸಾಧನೆಯನ್ನು ಬಿಂಬಿಸುವ ಸಲುವಾಗಿ ಕೋಲ್ಕತ್ತಾದಲ್ಲಿ ಸೌರವ್ ಹೌಸಿಂಗ್ ಎಂಬ ಅಪಾರ್ಟ್‍ಮೆಂಟ್ ಇದೆ.

7) ಗಂಗೂಲಿ ತಮ್ಮ ಚೊಚ್ಚಲ ಪಂದ್ಯದಲ್ಲಿ (1996)ಲಾಡ್ರ್ಸ್‍ನಲ್ಲಿ ಗಳಿಸಿದ ಚೊಚ್ಚಲ ಶತಕ (131) ಇಂದಿಗೂ ಗರಿಷ್ಠ ಮೊತ್ತವಾಗಿಯೇ ಉಳಿದಿದೆ.
8) ಭಾರತ ತಂಡದ ಅತ್ಯಂತ ಸಕ್ಸಸ್ ನಾಯಕ ಎಂಬ ಕೀರ್ತಿಗೆ ಸೌರವ್ ಭಾಜನರಾಗಿದ್ದಾರೆ.

9) 2002ರಲ್ಲಿ ನಡೆದ ನಾಟ್‍ವೆಸ್ಟ್ ಸೀರೀಸ್ ಗೆದ್ದ ನಂತರ ನಾಯಕ ಗಂಗೂಲಿ ಶರ್ಟ್ ಬಿಚ್ಚಿ ಸಂಭ್ರಮಿಸಿದ ಕ್ಷಣ ಇಂದಿಗೂ ಸ್ಮರಣೀಯವಾಗಿದೆ.
10) ಗಂಗೂಲಿ ಒತ್ತಾಯದ ಮೇರೆಗೆ ಮೈಸೂರು ಎಕ್ಸ್‍ಪ್ರೆಸ್ ಜವಾಗಲ್‍ಶ್ರೀನಾಥ್ ಮೂರು ಬಾರಿ ನಿವೃತ್ತಿ ಘೋಷಿಸಿದ್ದರೂ ಮತ್ತೆ ಕ್ರಿಕೆಟ್ ಅಂಗಳಕ್ಕಿಳಿದಿದ್ದರು.

11) 1992ರಲ್ಲಿ ಭಾರತೀಯ ಕ್ರಿಕೆಟ್ ತಂಡದಿಂದ ದಾದಾರನ್ನು ಕೈಬಿಟ್ಟ ನಂತರ ಅವರ ಮನೆಯಲ್ಲೇ ವೈಯಕ್ತಿಕ ಬೌಲಿಂಗ್ ಯಂತ್ರವನ್ನು ಅಳವಡಿಸಿಕೊಂಡಿದ್ದರು.
12) ವಿಶ್ವಕಪ್ ಫೈನಲ್‍ನಲ್ಲಿ ಶ್ರೀಲಂಕಾದ ಅರವಿಂದ ಡಿಸಿಲ್ವಾ, ಮಹೇಲ ಜಯವರ್ಧನೆ ನಂತರ ಶತಕ ಗಳಿಸಿದ ಮೂರನೇ ಆಟಗಾರನಾಗಿ ಗಂಗೂಲಿ ಗುರುತಿಸಿಕೊಂಡಿದ್ದಾರೆ.

13) ಬಂಗಾಳ ಕ್ರಿಕೆಟ್ ಸಂಘದ ಜಂಟಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿ ದ್ದಾರೆ.
14) ಕ್ರಿಕೆಟ್ ಜೀವನದ ಆರಂಭದಲ್ಲಿ ಗಂಗೂಲಿ ಅವರನ್ನು ಸೊಕ್ಕಿನವರು ಎಂದು ಬಿಂಬಿಸಿದ್ದರಿಂದ ಅವರನ್ನು ಟೀಂಇಂಡಿಯಾದಿಂದ ಕೈಬಿಡಲಾಯಿತು.

15) ಗಂಗೂಲಿಗೆ ಇಂಗ್ಲೆಂಡ್ ಆಟಗಾರ ಡೇವಿಡ್ ಗೋವರ್ಸ್‍ರ ಆಟದ ಶೈಲಿ ಇಷ್ಟವಾಗಿದ್ದರಿಂದ ಅವರ ಹಳೆಯ ವೀಡಿಯೋಗಳನ್ನು ನೋಡುತ್ತಿದ್ದರು ಹಾಗೂ ಅದೇ ಶೈಲಿಯನ್ನು ತಮ್ಮ ಕ್ರಿಕೆಟ್ ಜೀವನಕ್ಕೆ ಅಳವಡಿಸಿಕೊಂಡಿದ್ದರು.
16) ಗಂಗೂಲಿಗೆ ಆಸ್ಟ್ರೇಲಿಯಾದ ಅಲನ್ ಬರ್ಡರ್, ಡೇವಿಡ್‍ಬೂನ್, ಭಾರತದ ಮೊಹಿಂದರ್ ಅಮರ್‍ನಾಥ್, ಕಪಿಲ್‍ದೇವ್‍ರ ಆಟದ ಶೈಲಿಯೂ ಇಷ್ಟವಾಗಿತ್ತು.

17) ಸೌರವ್ ಮೊದಲು ಬಲಗೈ ಬ್ಯಾಟ್ಸ್‍ಮನ್ ಆಗಿದ್ದವರು ನಂತರ ತನ್ನ ಸೋದರನ ಸಲಹೆಯಂತೆ ಎಡಗೈ ಬ್ಯಾಟ್ಸ್‍ಮನ್ ಆಗಿ ಪರಿವರ್ತನೆಯಾದರು.
18) ವಿಶ್ವಕಪ್‍ನ ನಾಕೌಟ್ ಪಂದ್ಯದಲ್ಲಿ ಚೊಚ್ಚಲ ಶತಕ ಗಳಿಸಿದ ಭಾರತೀಯ ಬ್ಯಾಟ್ಸ್‍ಮನ್.
19) 2003ರಲ್ಲಿ ಕೀನ್ಯಾವಿರುದ್ಧ ನಡೆದ ವಿಶ್ವಕಪ್ ಸೆಮಿಫೈನಲ್‍ನಲ್ಲಿ 111 ರನ್‍ಗಳನ್ನು ಗಳಿಸಿದ್ದರು.
20) ನಾಯಕನಾಗಿ ವಿಶ್ವಕಪ್‍ನಲ್ಲಿ ಅತಿ ಹೆಚ್ಚು ಶತಕ ಗಳಿಸಿದ ಕೀರ್ತಿಯೂ ಸೌರವ್ ಹೆಸರಿನಲ್ಲಿದೆ.

21)2003ರ ವಿಶ್ವಕಪ್‍ನಲ್ಲಿ ಗಂಗೂಲಿ 3 ಸೆಂಚುರಿ ದಾಖಲಿಸಿದ್ದರು. ಆಸ್ಟ್ರೇಲಿಯಾದ ರಿಕ್ಕಿಪಾಂಟಿಂಗ್ 4 ಸೆಂಚುರಿ ಬಾರಿಸಿದ್ದಾರೆ.
22) ಎಡಗೈ ಬ್ಯಾಟ್ಸ್‍ಮನ್ ಆಗಿ ಅತಿ ಹೆಚ್ಚು ಶತಕ ಗಳಿಸಿದ ಕೀರ್ತಿಯು ಸೌರವ್‍ಗೆ ಸಲ್ಲುತ್ತದೆ.
23) ಶ್ರೀಲಂಕಾದ ಸ್ಫೋಟಕ ಆಟಗಾರ ಸನತ್ ಜಯಸೂರ್ಯ 10 ಸೆಂಚುರಿ ಗಳಿಸಿದ್ದರೆ, ಸೌರವ್ 11 ಸೆಂಚುರಿ ದಾಖಲಿಸಿದ್ದಾರೆ.
24) ಎಡಗೈ ಬ್ಯಾಟ್ಸ್‍ಮನ್ ಆಗಿ ಅತಿ ಹೆಚ್ಚು ರನ್ ಗಳಿಸಿದ ಕೀರ್ತಿಯು ಗಂಗೂಲಿಗೆ ಸಲ್ಲುತ್ತದೆ.

25)ಗಂಗೂಲಿ ಅಂತರರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಒಟ್ಟು 18,433 ರನ್‍ಗಳನ್ನು ದಾಖಲಿಸಿದ್ದಾರೆ. ಏಕದಿನದಲ್ಲಿ 11,221 ರನ್ ಗಳಿಸಿದ್ದರೆ, ಟೆಸ್ಟ್‍ನಲ್ಲಿ 7212 ರನ್ ಬಾರಿಸಿದ್ದಾರೆ.
26) ಅತಿ ಹೆಚ್ಚು ಶತಕ ಗಳಿಸಿದ ಎಡಗೈ ಬ್ಯಾಟ್ಸ್‍ಮನ್ ಎಂಬ ದಾಖಲೆಯು ಗಂಗೂಲಿ ಹೆಸರಿಗೆ ಸೇರಿಕೊಂಡಿದೆ.
27) ಸೌರವ್ ತಮ್ಮ ಕ್ರಿಕೆಟ್ ಜೀವನದಲ್ಲಿ ಒಟ್ಟು 38 ಶತಕ ಗಳಿಸಿದ್ದು ಏಕದಿನದಲ್ಲಿ 22 ಹಾಗೂ ಟೆಸ್ಟ್‍ನಲ್ಲಿ 16 ಶತಕ ದಾಖಲಿಸಿದ್ದಾರೆ.
28) ವಿದೇಶದಲ್ಲಿ ಅತಿ ಹೆಚ್ಚು ಶತಕ ಗಳಿಸಿದ ಭಾರತೀಯ ನಾಯಕನಾಗಿಯು ಗಂಗೂಲಿ ಗುರುತಿಸಿಕೊಂಡಿದ್ದಾರೆ.

29) ಗಂಗೂಲಿ ನಾಯಕನಾಗಿ ವಿದೇಶಿ ನೆಲದಲ್ಲಿ ಆಡಿದ ಪಂದ್ಯಗಳಲ್ಲಿ 9 ಶತಕ ಗಳಿಸಿದ್ದಾರೆ.
30) ಗಂಗೂಲಿ ತಮ್ಮ ಕ್ರಿಕೆಟ್ ಇತಿಹಾಸದಲ್ಲಿ ವಿದೇಶಗಳಲ್ಲಿ 12 ಶತಕ ಗಳಿಸಿದ್ದಾರೆ. ಏಕದಿನದಲ್ಲಿ 3, ಟೆಸ್ಟ್‍ನಲ್ಲಿ 9 ಶತಕ ದಾಖಲಿಸಿದ್ದಾರೆ.
31) ವಿದೇಶಗಳಲ್ಲಿ ಅತಿ ಹೆಚ್ಚು ಟೆಸ್ಟ್ ರನ್ ಗಳಿಸಿದ ಕೀರ್ತಿಯೂ ಗಂಗೂಲಿ ಹೆಸರಿನಲ್ಲಿದ್ದು, ಅವರು ಒಟ್ಟು 1693 ರನ್‍ಗಳನ್ನು ಬಾರಿಸಿದ್ದಾರೆ.
32) ಏಕದಿನ ಮಾದರಿಯಲ್ಲಿ ಏಕದಿನ ಮಾದರಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಎರಡನೇ ನಾಯಕ(3619ರನ್) ಹಾಗೂ ಎರಡನೇ ಆಟಗಾರ(5312ರನ್)ನಾಗಿ ಬಿಂಬಿಸಿಕೊಂಡಿದ್ದಾರೆ, ಮಹೇಂದ್ರಸಿಂಗ್‍ಧೋನಿ ಭಾರತದ ಮೊದಲ ನಾಯಕ ಹಾಗೂ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ.

33)ಗಂಗೂಲಿ ಹಾಗೂ ಸಚಿನ್‍ತೆಂಡೂಲ್ಕರ್ ಉತ್ತಮ ಆರಂಭಿಕ ಜೊತೆಗಾರರಾಗಿ ಗುರುತಿಸಿಕೊಂಡಿದ್ದಾರೆ, ಈ ಜೋಡಿಯು ಏಕದಿನದಲ್ಲಿ 8227 ರನ್‍ಗಳನ್ನು ಕಲೆ ಹಾಕಿದ್ದಾರೆ.
34) ಆರಂಭಿಕ ಆಟಗಾರನಾಗಿ ಗಂಗೂಲಿ 6609 ರನ್‍ಗಳನ್ನು ಗಳಿಸಿದ್ದಾರೆ.
35)ಗಂಗೂಲಿ ಹಾಗೂ ಸಚಿನ್ ಜೋಡಿಯು ಒಟ್ಟು 26 ಶತಕಗಳ ಜೊತೆಯಾಟ ನೀಡಿದ್ದಾರೆ.

36) ಸೌರವ್ ಗಂಗೂಲಿಯು ಕ್ರಿಕೆಟ್ ಜೀವನದಲ್ಲಿ ಒಟ್ಟು 38 ಶತಕಗಳ ಜೊತೆಯಾಟ ನೀಡಿದ್ದಾರೆ, ಏಕದಿನದಲ್ಲಿ 26 ಹಾಗೂ ಟೆಸ್ಟ್‍ನಲ್ಲಿ 12.
37) ಸೌರವ್ ಗಂಗೂಲಿ ಹಾಗೂ ಸಚಿನ್‍ತೆಂಡೂಲ್ಕರ್ ಜೋಡಿಯು ಒಟ್ಟು 12400 ರನ್‍ಗಳ ಕಾಣಿಕೆ ನೀಡಿದ್ದಾರೆ. (ಏಕದಿನ 4173 ರನ್, ಟೆಸ್ಟ್ 8227ರನ್) ಮಹೇಲ ಜಯವರ್ಧನೆ ಹಾಗೂ ಕುಮಾರ ಸಂಗಾಕಾರ 13,368 ರನ್‍ಗಳ ಕಾಣಿಕೆ ನೀಡಿದ್ದಾರೆ.

38) ನಾಲ್ಕು ಬಾರಿ ಸತತವಾಗಿ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದ ಏಕೈಕ ಕ್ರಿಕೆಟಿಗ. 14 ಸೆಪ್ಟೆಂಬರ್‍ರಿಂದ 21 ಸೆಪ್ಟೆಂಬರ್‍ವರೆಗೂ ಗಂಗೂಲಿ 4 ಬಾರಿ ಪಂದ್ಯ ಪುರುಷೋತ್ತಮರಾಗಿದ್ದಾರೆ.

39) ಭಾರತೀಯ ನಾಯಕನಾಗಿ ಸೌರವ್ ಒಟ್ಟು 8 ಬಾರಿ ಪಂದ್ಯ ಪುರುಷೋತ್ತಮ ಹಾಗೂ 2 ಬಾರಿ ಸರಣಿ ಪುರುಷೋತ್ತಮರಾಗಿದ್ದಾರೆ.
40) ಸೌರವ್ ಗಂಗೂಲಿ ನಿವೃತ್ತಿ ಯಾಗುವುದಕ್ಕೂ ಮುಂಚೆ 236 ಪಂದ್ಯಗಳಲ್ಲಿ ಆರಂಭಿಕ ಆಟಗಾರರಾಗಿ ಕಣಕ್ಕಿಳಿದಿದ್ದಾರೆ. ಆದರೆ 113 ಟೆಸ್ಟ್ ಪಂದ್ಯಗಳಲ್ಲಿ ಗಂಗೂಲಿ ಆರಂಭಿಕ ಆಟಗಾರನಾಗಿ ಕಣಕ್ಕಿಳಿದಿದ್ದು 3 ಪಂದ್ಯಗಳಲ್ಲಿ ಮಾತ್ರ.
41) ಬ್ಯಾಟ್ಸ್‍ಮನ್ ಆಗಿ ಗುರುತಿಸಿಕೊಂಡಿದ್ದ ಗಂಗೂಲಿ ಒಳ್ಳೆ ಬ್ರೇಕ್ ಥ್ರೂ ಬೌಲರ್ ಕೂಡ ಆಗಿದ್ದರು. 2000 ಡಿಸೆಂಬರ್ 11ರಲ್ಲಿ ಜಿಂಬಾಬ್ವೆ ವಿರುದ್

Facebook Comments