ದುಬೈಗೆ ಹಾರಿದ ಸೌರವ್

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ,ಸೆ.9- ಭಾರತದಲ್ಲಿ ಹೆಚ್ಚುತ್ತಿರುವ ಕೋವಿಡ್ ಕಾರಣದಿಂದಾಗಿ ದುಬೈಗೆ ಸ್ಥಳಾಂತರಗೊಂಡಿರುವ ಟಿ-20 ಪಂದ್ಯಾವಳಿ ಹಿನ್ನೆಲೆಯಲ್ಲಿ ಜೈವಿಕ ಸುರಕ್ಷಿತ ಐಪಿಎಲ್ ಸಿದ್ಧತೆಗಳ ಮೇಲ್ವಿಚಾರಣೆಗಾಗಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಇಂದು ದುಬೈಗೆ ತೆರಳಿದರು.  ಐಪಿಎಲ್ ಅಧ್ಯಕ್ಷ ಬ್ರಿಜೇಶ್ ಪಟೇಲ್ ಸೇರಿದಂತೆ ಇತರ ಪ್ರಮುಖ ಅಧಿಕಾರಿಗಳು ಈಗಾಗಲೇ ದುಬೈನಲ್ಲಿದ್ದಾರೆ.

ಭಾರತದಲ್ಲಿ ಹೆಚ್ಚುತ್ತಿರುವ ಕೋವಿಡ್ ಕಾರಣದಿಂದ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ನಡೆಯಲಿರುವ ಟಿ-20 ಸ್ಪರ್ಧೆಯ ಆರಂಭಿಕ ಪಂದ್ಯವನ್ನು ಯುಎಇಗೆ ಸ್ಥಳಾಂತರಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಸೆ.19ರ ಜೈವಿಕ ಸುರಕ್ಷಿತ ಐಪಿಎಲ್ ಸಿದ್ದತೆಗಳ ಮೇಲ್ವಿಚಾರಣೆಗಾಗಿ ಸೌರವ್ ಗಂಗೂಲಿ ಇಂದು ದುಬೈಗೆ ತೆರೆಳಿದ್ದಾರೆ. ಈ ಬಗ್ಗೆ ತಮ್ಮ ಇನ್‍ಸ್ಟ್ರಾಗ್ರಾಂನಲ್ಲಿ ಮಾಹಿತಿ ಹಂಚಿಕೊಂಡಿದ್ದು, ಕಳೆದ ಆರು ತಿಂಗಳ ಅವಧಿಯಲ್ಲಿ ಐಪಿಎಲ್‍ಗಾಗಿ ನನ್ನ ಮೊದಲ ವಿಮಾನ ಯಾನ.. ಕ್ರೇಜಿ ಜೀವನದ ಬದಲಾವಣೆ.. ಎಂದು ಪೋಸ್ಟ್ ಮಾಡಿದ್ದಾರೆ.

Facebook Comments