ಬಂಗಾಳ ರಾಜಕೀಯದಲ್ಲಿ ದಾದಾಗಿರಿ ಆರಂಭ..?

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಆ.26- ಭಾರತ ಕ್ರಿಕೆಟ್ ತಂಡದ ದಾದಾ ಎಂದೇ ಹೆಸರಾಗಿದ್ದ ಮಾಜಿ ಕ್ಯಾಪ್ಟನ್, ಬಿಸಿಸಿಐ ಅಧ್ಯಕ್ಷ ಸೌರವ್‍ಗಂಗೂಲಿ ಈಗ ರಾಜಕೀಯ ರಂಗದಲ್ಲೂ ತಮ್ಮ ದಾದಾಗಿರಿಯನ್ನು ಆರಂಭಿಸಲು ಹೊರಟಿದ್ದಾರೆ ಎಂಬ ಸುದ್ದಿ ದಟ್ಟವಾಗಿ ಹಬ್ಬುತ್ತಿದೆ.

ಸೌರವ್‍ಗಂಗೂಲಿ ಬಿಸಿಸಿಐ ಅಧ್ಯಕ್ಷರಾಗಲು ಕೇಂದ್ರ ಗೃಹ ಮಂತ್ರಿ ಅಮಿತ್‍ಷಾ ಅವರೇ ಕಾರಣ ಎಂದು ಹೇಳಲಾಗುತ್ತಿದೆ, ಅಲ್ಲದೆ ಬಿಸಿಸಿಐ ಕಾರ್ಯದರ್ಶಿಯಾಗಿರುವ ಜೈಷಾ, ಅಮಿತ್‍ಷಾರ ಪುತ್ರನಾಗಿದ್ದು, ಸೌರವ್ ಹಾಗೂ ಜೈಷಾ ನಡುವೆ ಉತ್ತಮ ಹೊಂದಾಣಿಕೆ ಇರುವುದರಿಂದ ಅವರ ಮೂಲಕವೇ ದಾದಾನನ್ನು ರಾಜಕೀಯ ಕರೆ ತರಲು ಬಿಜೆಪಿ ಕಾರ್ಯತಂತ್ರ ರೂಪಿಸುತ್ತಿದೆ.

ಇತ್ತೀಚೆಗೆ ಸೌರವ್ ಗಂಗೂಲಿ ಅವರ ನಡೆಯನ್ನು ಗಮನಿಸಿದರೆ ಅವರು ರಾಜಕೀಯ ಪ್ರವೇಶಿಸುವುದು ಬಹುತೇಕ ನಿಶ್ಚಯವಾಗಿದ್ದು ಸೌರವ್‍ಗೆ ಬಿಜೆಪಿಯ ಸಿದ್ಧಾಂತಗಳ ಬಗ್ಗೆ ಹೆಚ್ಚು ಒಲವು ಇರುವುದರಿಂದ ಮುಂಬರುವ ಪಶ್ಚಿಮ ಬಂಗಾಳದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸೌರವ್ ಅಖಾಡಕ್ಕಿಳಿಯಲಿದ್ದಾರಾ ಎಂಬ ಮುನ್ಸೂಚನೆಗಳು ಕಂಡುಬರುತ್ತಿವೆ.

# ಬಂಗಾಳ ಸಿಎಂ ಆಗ್ತಾರಾ ಗಂಗೂಲಿ..?
ಪಶ್ಚಿಮ ಬಂಗಾಳದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯ ಹವಾ ತಗ್ಗಿಸಲು ಬಿಜೆಪಿ ಹೊಸ ನಾಯಕನ ಅನ್ವೇಷಣೆಯಲ್ಲಿದ್ದು, ಮಮತಾರನ್ನು ಮಣಿಸಲು ಬಿಸಿಸಿಐ ಅಧ್ಯಕ್ಷ ಸೌರವ್‍ಗಂಗೂಲಿಯೇ ಸೂಕ್ತ ಎಂದು ಬಿಜೆಪಿ ಮುಖಂಡರು ಲೆಕ್ಕಾ ಚಾರ ಹಾಕಿದ್ದಾರೆ.

ಸೌರವ್‍ಗಂಗೂಲಿ ಒಬ್ಬ ಕ್ರಿಕೆಟಿಗನಾಗಿ, ನಾಯಕನಾಗಿ ಪಶ್ಚಿಮ ಬಂಗಾಳದ ಮಂದಿಗೆ ಅಚ್ಚುಮೆಚ್ಚಾಗಿದ್ದು ಮುಂದಿನ ಚುನಾವಣೆಯಲ್ಲಿ ಗಂಗೂಲಿ ಅವರನ್ನೇ ರಾಜ್ಯದ ಮುಖ್ಯಮಂತ್ರಿಯಾಗಿ ಘೋಷಿಸಿ ಚುನಾವಣೆಗೆ ನಡೆದರೆ ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯನ್ನು ಅಕಾರಕ್ಕೆ ತರಬಹುದು ಎಂಬ ಲೆಕ್ಕಾಚಾರಗಳನ್ನು ಮುಖಂಡರು ಹಾಕಿಕೊಂಡಿದ್ದಾರೆ.

ಇತ್ತೀಚೆಗೆ ಸೌರವ್‍ಗಂಗೂಲಿ, ಪಶ್ಚಿಮಬಂಗಾಳ ಸರ್ಕಾರ ಗಂಗೂಲಿ ಒಡೆತನದ ಎಜುಕೇಷನ್ ಆ್ಯಂಡ್ ವೆಲ್‍ಫೇರ್ ಸೊಸೈಟಿಗೆ ನೀಡಿದ್ದ 2 ಎಕರೆ ಜಾಗದಲ್ಲಿ 12ನೇ ತರಗತಿಯನ್ನು ನಿರ್ಮಿಸಲು ಮುಂದಾಗಿದ್ದ ಗಂಗೂಲಿ ದಿಢೀರನೆ ಆ ಜಾಗವನ್ನು ಸರ್ಕಾರಕ್ಕೆ ಹಿಂದಿರುಗಿಸಿರುವುದು ಕೂಡ ಗಂಗೂಲಿ ಬಿಜೆಪಿ ಸರ್ಕಾರವನ್ನು ಸೇರುತ್ತಾರಾ ಎಂಬ ಅನುಮಾನ ಮೂಡಿಸುತ್ತಿದೆ.

ಬಂಗಾಳದಲ್ಲಿ ಗಂಗೂಲಿ ಹೆಸರು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ, ಬಿಜೆಪಿ ಪಡಾಸಾಲೆಯಲ್ಲಿ ಗಂಗೂಲಿ ಹೆಸರು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಮುಂಬರುವ ಚುನಾವಣೆ ಕ್ರಿಕೆಟ್ ಆಟದಂತೆ ರಂಗೇರುವ ಸಾಧ್ಯತೆ ಹೆಚ್ಚಾಗಿದೆ.

Facebook Comments

Sri Raghav

Admin