ಶಾರ್ಜಾ ತಲುಪಿದ ಬಿಸಿಸಿಐ ಬಿಗ್ ಬಾಸ್ ಸೌರವ್ ಗಂಗೂಲಿ

ಈ ಸುದ್ದಿಯನ್ನು ಶೇರ್ ಮಾಡಿ

ದುಬೈ, ಸೆ.15- ಐಪಿಎಲ್ ಪಂದ್ಯಗಳು ಸುಲಲಿತವಾಗಿ ನಡೆಯುವ ನಿಟ್ಟಿನಲ್ಲಿ ಎಲ್ಲ ತಯಾರಿಗಳ ನಡುವೆಯೇ ನಾಲ್ಕು ದಿನ ಮುಂಚಿತವಾಗಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಶಾರ್ಜಾಗೆ ಬಂದಿಳಿದಿದ್ದಾರೆ.

ಭಾರತ ಕ್ರಿಕೆಟ್ ತಂಡದ ಆಟಗಾರನಾಗಿ, ನಾಯಕನಾಗಿ ಹಲವು ಕೀರ್ತಿ ಸಾಸಿದ ಮತ್ತು ಐಪಿಎಲ್‍ನಲ್ಲೂ ತನ್ನ ಖದರ್ ತೋರಿಸಿದ್ದ ಸೌರವ್ ಗಂಗೂಲಿ ಈಗ ಭಾರತ ಕ್ರಿಕೆಟ್‍ನ ಬಿಗ್‍ಬಾಸ್.

ಮೈದಾನದಿಂದ ಹೊರಗೆ ಆಡಳಿತ ನಡೆಸುವ ಚಾಕಚಕ್ಯತೆಯನ್ನು ಕಲಿಯುತ್ತಿರುವ ಗಂಗೂಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಈಗ ತಮ್ಮ ಛಾಪು ಒತ್ತಲು ಐಪಿಎಲ್ ಟ್ವೆಂಟಿ-20 ಯಶಸ್ಸಿಗೆ ಸಂಕಲ್ಪ ತೊಟ್ಟಿದ್ದಾರೆ. ಶಾರ್ಜಾ ಕ್ರಿಕೆಟ್ ಸ್ಟೇಡಿಯಂಗೂ ಭೇಟಿ ನೀಡಿ ತಾವು ಆಡಿದ ಪಂದ್ಯಗಳ ಅನುಭವಗಳನ್ನು ಮೆಲುಕು ಹಾಕಿ ಅಂತರ್ಜಾಲದಲ್ಲಿ ಹಂಚಿಕೊಂಡಿದ್ದಾರೆ.

ಯುಎಇ ಶಾರ್ಜಾದಲ್ಲಿ ಮೂರು ರಮಣೀಯ ಕ್ರಿಕೆಟ್ ಮೈದಾನಗಳಿದ್ದು, ಎಲ್ಲ ಪಂದ್ಯಗಳೂ ಇಲ್ಲೇ ನಡೆಯುತ್ತಿರುವುದು ವಿಶೇಷ.
ನಾನು ಈ ಮೈದಾನದಲ್ಲಿ ಆಡುವಾಗ ಹಲವು ಅವಿಸ್ಮರಣೀಯ ಕ್ಷಣಗಳನ್ನು ಅನುಭವಿಸಿದ್ದೇನೆ. ಅದನ್ನು ವರ್ಣಿಸಲು ಅಸಾಧ್ಯ ಎಂದು ಹೇಳಿದ್ದಾರೆ.
ಈ ನಡುವೆ ಗಂಗೂಲಿಗೆ ಜತೆಯಾಗಿದ್ದ ಮಾಜಿ ಕ್ರಿಕೆಟಿಗ, ಐಪಿಎಲ್ ಅಧ್ಯಕ್ಷ ಬ್ರಿಜೇಶ್ ಪಟೇಲ್ ಮತ್ತು ಸಿಇಒ ಹೀಮಂಗ್ ಅಮೀನ್ ಮತ್ತಿತರರು ಗಂಗೂಲಿ ಜತೆ ಸಾಥ್ ನೀಡಿದ್ದಾರೆ.

Facebook Comments

Sri Raghav

Admin