ದಾದಾಗೆ ತಪ್ಪಿದ ಐಸಿಸಿ ಸುಲ್ತಾನ್ ಪಟ್ಟ

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ, ಮೇ 27- ಬಿಸಿಸಿಐ ಅಧ್ಯಕ್ಷರಾಗಿರುವ ಸೌರವ್‍ಗಂಗೂಲಿಗೆ ಐಸಿಸಿ ಸುಲ್ತಾನ್(ಅಧ್ಯಕ್ಷ) ಪಟ್ಟಕ್ಕೇರುವ ಛಾನ್ಸ್ ತಪ್ಪಿ ಹೋಗಿದೆ. ಭಾರತದವರೇ ಆದ ಶಶಾಂಕ್ ಮನೋಹರ್ ಸದ್ಯ ಐಸಿಸಿ ಅಧ್ಯಕ್ಷರಾಗಿದ್ದು ಅವರ ಕಾಲಾವಧಿ ಮೇ 31 ಕ್ಕೆ ಕೊನೆಗೊಳ್ಳುವುದರಿಂದ ಆ ಸ್ಥಾನಕ್ಕೆ ಸೌರವ್‍ಗಂಗೂಲಿಯೇ ಸೂಕ್ತ ಎಂದು ಮಾಜಿ ಕ್ರಿಕೆಟಿಗರಾದ ಗ್ರಾಹಂ ಸ್ಮಿತ್ ಹಾಗೂ ಡೇವಿಡ್ ಗೋವರ್ ಅವರು ಕೂಡ ಬೆಂಬಲ ವ್ಯಕ್ತಪಡಿಸಿದ್ದರು.

ಸೌರವ್‍ಗಂಗೂಲಿಗೆ ಆಧುನಿಕ ಆಟ ಹಾಗೂ ಸವಾಲುಗಳನ್ನು ಎದುರಿಸುವುದು ಎಂಬುದನ್ನು ಸಮರ್ಥವಾಗಿ ಅರಿತಿದ್ದಾರೆ, ಅವರು ಐಸಿಸಿ ಅಧ್ಯಕ್ಷರಾದರೆ, ಅದರಿಂದ ಕ್ರಿಕೆಟ್ ರಂಗದಲ್ಲಿ ಅನೇಕ ಬದಲಾವಣೆಗಳನ್ನು ತರಬಹುದು ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಸ್ಮಿತ್ ಅವರ ಅಬಿಪ್ರಾಯವನ್ನು ದಕ್ಷಿಣ ಆಫ್ರಿಕಾದ ಹಂಗಾಮಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಜಾಕ್‍ಫಾಲ್ ಅಲ್ಲಗಳೆದಿದ್ದರು. 2008ರಲ್ಲಿ ಕ್ರಿಕೆಟ್ ಜೀವನಕ್ಕೆ ಗುಡ್‍ಬೈ ಹೇಳಿದ ಸೌರವ್‍ಗಂಗೂಲಿ ನಂತರ ಸಿಎಬಿ ಹಾಗೂ ಬಿಸಿಸಿಐ ಅಧ್ಯಕ್ಷರಾಗಿ ಹಾಗೂ ದೆಹಲಿ ಕ್ಯಾಪಿಟಲ್ ತಂಡದ ಸಲಹೆಗಾರರಾಗಿ ಕಾರ್ಯನಿರ್ವಹಿಸಿದ್ದಾರೆ.

ಈಗ ಶಶಾಂಕ್ ಮನೋಹರ್‍ರಿಂದ ತೆರವಾಗಲಿರುವ ಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆÀಟ್ ಮಂಡಳಿಯ ಅಧ್ಯಕ್ಷ ಕಾಲಿನ್ ಗ್ರೇವ್ಸ್ ಅವರ ಹೆಸರನ್ನು ಸೂಚಿಸಿದ್ದು ಜೂನ್ ತಿಂಗಳ ಮೊದಲ ವಾರದಲ್ಲಿ ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ.

Facebook Comments