‘ದಕ್ಷಿಣ ಆಫ್ರಿಕಾ ಸೋಲಿಗೆ ಐಪಿಎಲ್ ಕಾರಣ’

ಈ ಸುದ್ದಿಯನ್ನು ಶೇರ್ ಮಾಡಿ

ಕರಾಚಿ,ಏ.8- ಪಾಕಿಸ್ತಾನ ವಿರುದ್ಧ ದಕ್ಷಿಣ ಆಫ್ರಿಕಾ ತಂಡವು 2-1 ರಿಂದ ಸೋಲು ಕಾಣಲು ಐಪಿಎಲ್ ನೇರ ಕಾರಣ ಎಂದು ಪಾಕ್‍ನ ಮಾಜಿ ಆಟಗಾರ ಶಹೀದ್ ಅಫ್ರಿದಿ ಅವರು ಕಿಡಿಕಾರಿದ್ದಾರೆ.

ಪಾಕಿಸ್ತಾನ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಸರಣಿ ನಡೆಯುತ್ತಿರುವ ಮಧ್ಯ ಭಾಗದಲ್ಲೇ ದಕ್ಷಿಣ ಆಫ್ರಿಕಾದ ಕ್ರಿಕೆಟ್ ಮಂಡಳಿಯು ಆ ತಂಡದ ಶ್ರೇಷ್ಠ ಆಟಗಾರರ ಕಿಂಟನ್ ಡಿ ಕಾಕ್, ಡೇವಿಡ್ ಮಿಲ್ಲರ್, ರಬಡಾ, ನಗಡಿ ಸೇರಿದಂತೆ ಹಲವಾರು ಆಟಗಾರ ರಿಗೆ ಐಪಿಎಲ್‍ನಲ್ಲಿ ಪಾಲ್ಗೊಳ್ಳಲು ಅನುಮತಿ ನೀಡಿದ್ದರಿಂದಲೇ ದಕ್ಷಿಣ ಆಫ್ರಿಕಾ ತಂಡವು ಸರಣಿ ಸೋಲಲು ಕಾರಣ ವಾಯಿತು ಎಂದು ಆಫ್ರಿದಿ ಹೇಳಿದರು.

Facebook Comments