ದ.ಆಫ್ರಿಕಾ ಕ್ರಿಕೆಟ್ ಮಂಡಳಿ ಅಮಾನತು

ಈ ಸುದ್ದಿಯನ್ನು ಶೇರ್ ಮಾಡಿ

ಕೇಪ್‍ಟೌನ್,ಸೆ.11- ಭ್ರಷ್ಟಾಚಾರ ಪ್ರಕರಣಗಳು ಕೇಳಿಬಂದ ನಡುವೆಯೇ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿಯನ್ನು ಒಂದು ತಿಂಗಳ ಕಾಲ ಅಮಾನತು ಮಾಡಿ ಎಲ್ಲಾ ಅಧಿಕಾರವನ್ನು ಸರ್ಕಾರಿ ಪ್ರಾಧಿಕಾರವಾದ ಒಲಿಂಪಿಕ್ ಸಮಿತಿ ವಶಕ್ಕೆ ಪಡೆದಿದೆ.

ಆಟಗಾರರ ಮೇಲೆ ಬಂದಂತಹ ಆರೋಪಗಳನ್ನು ಬಗೆಹರಿಸುವಲ್ಲಿ ಮತ್ತು ಕ್ರೀಡಾ ವಲಯದಲ್ಲಿ ತನ್ನ ದೇಶಕ್ಕೆ ಆಗುತ್ತಿರುವ ಅಪಮಾನ ಹಾಗೂ ಹಿನ್ನಡೆ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ದಕ್ಷಿಣ ಆಪ್ರಿಕಾ ಕ್ರೀಡಾಕೂಟ ಮತ್ತು ಒಲಿಂಪಿಕ್ ಸಮಿತಿ ತಿಳಿಸಿದೆ.

ಆರೋಪಗಳ ಬಗ್ಗೆ ಮತ್ತು ಮಂಡಳಿಯ ನಿರ್ಣಯಗಳ ಕುರಿತಂತೆ ತನಿಖೆ ಕೈಗೊಳ್ಳಲಾಗುವುದು ಎಂದು ಹೇಳಲಾಗಿದೆ. ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿಯ ಮೇಲೆ ಐಸಿಸಿ ಹಿಡಿತದ ವಿರುದ್ದವೂ ಸಮಿತಿ ಆಕ್ರೋಶ ವ್ಯಕ್ತಪಡಿಸಿದೆ.

ಆದರೆ ಇದರ ಬಗ್ಗೆ ಅಂತಾರಾಷ್ಟ್ರೀಯ ಕ್ರಿಕೆಟ ಸಮಿತಿ(ಐಸಿಸಿ) ಈವರೆಗೂ ಯಾವುದೇ ಹೇಳಿಕೆ ನೀಡದಿದ್ದರೂ ಕ್ರಿಕೆಟ್ ಪಂಡಿತರಲ್ಲಿ ಈ ನಿರ್ಧಾರದ ಬಗ್ಗೆ ಕುತೂಹಲ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗಷ್ಟೇ ಜಿಂಬಾವ್ವೆ ಕ್ರಿಕೆಟ್ ಮಂಡಳಿಯೂ ಕೂಡ ಇದೇ ರೀತಿ ಅಲ್ಲಿನ ಸರ್ಕಾರ ತನ್ನ ಸ್ವಾಧೀನಕ್ಕೆ ಪಡೆದುಕೊಂಡಿತ್ತು.

Facebook Comments