ದಕ್ಷಿಣ ಕೊರಿಯಾದಲ್ಲಿ ಚಂಡಮಾರುತದ ರೌದ್ರಾವತಾರ : ನೌಕೆಗಳು ಕಣ್ಮರೆ

ಈ ಸುದ್ದಿಯನ್ನು ಶೇರ್ ಮಾಡಿ

ಸಿಯೋಲ್, ಸೆ.3- ದಕ್ಷಿಣ ಕೊರಿಯಾದ ದಕ್ಷಿಣ ಪ್ರಾಂತ್ಯದಲ್ಲಿ ಭಾರೀ ಚಂಡಮಾರುತದಿಂದ ಸಾವು-ನೋವು ಸಂಭವಿಸಿದ್ದು, ಹಲವರು ಕಣ್ಮರೆಯಾಗಿದ್ದಾರೆ.ಸಮುದ್ರ ಸುಂಟರಗಾಳಿಯಿಂದ ಸಾಗರ ಪ್ರದೇಶಗಳು ಪ್ರಕ್ಷುಬ್ಧಗೊಂಡಿದ್ದು, ಹಲವು ನೌಕೆಗಳು ಕಣ್ಮರೆಯಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

ದಕ್ಷಿಣ ಭಾಗದ ಕರಾವಳಿ ಪ್ರಾಂತ್ಯಗಳ ಮೇಲೆ ಬಂದೆರಗಿದ ವಿನಾಶಕಾರಿ ಚಂಡಮಾರುತದಿಂದ ಅನೇಕ ಮರಗಳು, ವಿದ್ಯುತ್ ಕಂಬಗಳು ಉರುಳಿ ಬಿದ್ದಿದ್ದು, ಆ ಪ್ರದೇಶಗಳ ಸಹಸ್ರಾರು ಮನೆಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.

ಭಾರೀ ಮಳೆ, ಪ್ರವಾಹದೊಂದಿಗೆ ಈಗಷ್ಟೇ ಚೇತರಿಸಿಕೊಳ್ಳುತ್ತಿದ್ದ ಕೊರಿಯಾದ ದಕ್ಷಿಣ ಪ್ರಾಂತ್ಯದಲ್ಲೀಗ ಸಮುದ್ರ ಸುಂಟರಗಾಳಿಯ ರೌದ್ರಾವತಾರದಿಂದ ಸಾವು-ನೋವು ಮತ್ತು ಆಸ್ತಿ-ಪಾಸ್ತಿ ನಷ್ಟ ಸಂಭವಿಸಿದೆ.

Facebook Comments