ಉತ್ತರ ಕೊರಿಯಾ ಕ್ರೂರ ಸರ್ವಾಧಿಕಾರಿ ಕಿಮ್ ಬದುಕೋದು ಡೌಟ್..!

ಈ ಸುದ್ದಿಯನ್ನು ಶೇರ್ ಮಾಡಿ

ಸಿಯೋಲ್, ಏ.21-ವಿಶ್ವಸಂಸ್ಥೆಯ ಎಚ್ಚರಿಕೆಯನ್ನೂ ಲೆಕ್ಕಿಸದೇ ಸತತ ಅಣ್ವಸ್ತ್ರಗಳ ಪರೀಕ್ಷೆಗಳನ್ನು ನಡೆಸುತ್ತಾ ಏಷ್ಯಾ ಖಂಡವಲ್ಲದೇ ಜಗತ್ತಿನ ಮಹಾ ಶಕ್ತಿಶಾಲಿ ದೇಶ ಅಮೆರಿಕಾ ನಿದ್ಧೆಗೆಡಿಸಿದ್ದ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಮರಣಶಯ್ಯೆಯಲ್ಲಿ ದ್ದಾರೆಯೇ..?

ಮೂಲಗಳ ಪ್ರಕಾರ ಯಾವುದೇ ಅನಾರೋಗ್ಯದ ಕಾರಣ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಮಿಸೈಲ್ ಮ್ಯಾನ್ ಎಂಬ ಕುಖ್ಯಾತಿಯ ಕಿಮ್ ಸ್ಥಿತಿ ಚಿಂತಾಜನಕವಾಗಿದೆ.
ಆದರೆ ಎಲ್ಲ ವಿಷಯಗಳನ್ನು ಅತ್ಯಂತ ಗೌಪ್ಯವಾಗಿರುವ ಉತ್ತರ ಕೊರಿಯಾದಿಂದ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.

ಸ್ಥೂಲಕಾಯ ಸರ್ವಾಧಿಕಾರಿ ಯಾವ ಕಾರಣಕ್ಕಾಗಿ ಸರ್ಜರಿಗೆ ಒಳಗಾದರು. ಈಗ ಅವರ ಆರೋಗ್ಯ ಸ್ಥಿತಿ ಹೇಗಿದೆ ಎಂಬ ಬಗ್ಗೆ ಉತ್ತರ ಕೊರಿಯಾ ಗುಟ್ಟು ಬಿಟ್ಟು ಕೊಟ್ಟಿಲ್ಲ. ಆದರೆ ಉತ್ತರ ಕೊರಿಯಾದ ಕಡು ವೈರಿ ದೇಶ ದಕ್ಷಿಣ ಕೊರಿಯಾದಲ್ಲಿ ಈ ಬಗ್ಗೆ ಹರಿದಾಡುತ್ತಿವೆ.

ಯಾವುದೇ ಗಂಭೀರ ಆರೋಗ್ಯ ಸಮಸ್ಯೆ ಕಾರಣ ಅವರು ರಾಜಧಾನಿ ಪಯೋಂಗ್‍ಯಾಂಗ್‍ನಲ್ಲಿ ಶಸ್ತ್ರಕ್ರಿಯೆಗೆ ಒಳಗಾದರು. ನಂತರ ಅವರ ಸ್ಥಿತಿ ಅತ್ಯಂತ ಗಂಭೀರವಾಗಿದೆ ಎಂಬ ವರದಿಗಳನ್ನು ದೃಢಪಡಿಸಿಕೊಳ್ಳಲು ದಕ್ಷಿಣ ಕೊರಿಯಾ ಕಾರ್ಯೋನ್ಮುಖವಾಗಿದೆ.

ಕಳೆದ ವಾರವಷ್ಟೇ ಉತ್ತರ ಕೊರಿಯಾ ಮತ್ತೊಂದು ಕ್ಷಿಪಣಿ ಪರೀಕ್ಷೆ ನಡೆಸಿತ್ತು. ಅಮರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‍ಗೆ ತಿರುಗೇಟು ನೀಡಿದ್ದ ಕಿಮ್ ವಿಶ್ವ ಸಂಸ್ಥೆ ಭದ್ರತಾ ಮಂಡಳಿಗೇ ಸಡ್ಡು ಹೊಡೆದು ನಿರಂತರ ಅಣ್ವಸ್ತ್ರ ಪರೀಕ್ಷೆ ನಡೆಸಿದ್ದರು. ಅಮೆರಿಕ ಮತ್ತು ಉತ್ತರ ಕೊರಿಯಾ ನಡುವಣ ಸಂಧಾನ ಮಾತುಕತೆ ಮುರಿದು ಬಿದ್ದಿದೆ.

Facebook Comments

Sri Raghav

Admin