ರಷ್ಯಾ ಸೇನಾ ವಿಮಾನದ ಮೇಲೆ ದಕ್ಷಿಣ ಕೊರಿಯಾ ದಾಳಿ..!

ಈ ಸುದ್ದಿಯನ್ನು ಶೇರ್ ಮಾಡಿ

ಸಿಯೊಲ್(ಪಿಟಿಐ), ಜು.23- ತನ್ನ ವಾಯು ಸೀಮೆ ಮೇಲೆ ನಿಯಮ ಉಲ್ಲಂಘಿಸಿ ಹಾರಿದ ರಷ್ಯಾ ಸೇನಾ ವಿಮಾನದ ಮೇಲೆ ದಕ್ಷಿಣ ಕೊರಿಯಾ ಸೇನೆ 400ಕ್ಕೂ ಹೆಚ್ಚು ಎಚ್ಚರಿಕೆ ಗುಂಡುಗಳನ್ನು ಹಾರಿಸಿದ ಘಟನೆ ಇಂದು ಬೆಳಗ್ಗೆ ನಡೆದಿದೆ.

ದೇಶದ ಪೂರ್ವ ಕರಾವಳಿ ಪ್ರದೇಶದ ವಾಯು ನೆಲೆ ಉಲ್ಲಂಘಿಸಿ ಹಾರಾಟ ನಡೆಸಿದ ರಷ್ಯಾದ ಎಸ್-50 ಮಿಲಿಟರಿ ವಿಮಾನಗಳ ಮೇಲೆ ಈ ಎಚ್ಚರಿಕೆ ದಾಳಿ ನಡೆಸಲಾಗಿದೆ ಎಂದು ದಕ್ಷಿಣ ಕೊರಿಯಾ ಸೇನಾ ಮುಖ್ಯಸ್ಥರು ತಿಳಿಸಿದ್ದಾರೆ.

Facebook Comments