Friday, March 29, 2024
Homeಅಂತಾರಾಷ್ಟ್ರೀಯದಕ್ಷಿಣ ಕೊರಿಯಾ ಪ್ರತಿಪಕ್ಷ ನಾಯಕ ಲೀ ಮೇಲೆ ದಾಳಿ

ದಕ್ಷಿಣ ಕೊರಿಯಾ ಪ್ರತಿಪಕ್ಷ ನಾಯಕ ಲೀ ಮೇಲೆ ದಾಳಿ

ಸಿಯೋಲï, ಜ 2-ದಕ್ಷಿಣ ಕೊರಿಯಾದ ವಿರೋಧ ಪಕ್ಷದ ನಾಯಕ ಲೀ ಜೇ-ಮ್ಯುಂಗ್ ಅವರ ಮೇಲೆ ಆಗ್ನೇಯ ನಗರವಾದ ಬುಸಾನ್‍ಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಪರಿಚಿತ ವ್ಯಕ್ತಿಯೊಬ್ಬರು ದಾಳಿ ಮಾಡಿ ಗಾಯಗೊಳಿಸಿರುವ ಘಟನೆ ನಡೆದಿದೆ.

ಹೊಸ ವಿಮಾನ ನಿಲ್ದಾಣದ ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಿದಾಗ ಲೀ ಮೇಲೆ ದಾಳಿ ನಡೆಸಲಾಗಿದೆ ಎಂದು ಬುಸಾನ್‍ನ ತುರ್ತು ಕಚೇರಿ ತಿಳಿಸಿದೆ. ಪ್ರಮುಖ ವಿರೋಧ ಪಕ್ಷದ ಡೆಮಾಕ್ರಟಿಕ್ ಪಕ್ಷದ ಮುಖ್ಯಸ್ಥ ಲೀ ಅವರು ಪ್ರಜ್ಞೆ ತಪ್ಪಿದ್ದಾರೆ ಆದರೆ ಅವರ ನಿಖರವಾದ ಸ್ಥಿತಿ ತಿಳಿದಿಲ್ಲ ಎಂದು ತಿಳಿದುಬಂದಿದೆ.

ಗಡಿಯಲ್ಲಿ 112 ರೋಹಿಂಗ್ಯಾ ಸೇರಿದಂತೆ 744 ಜನರ ಬಂಧನ

ಲೀ ಅವರ ಕುತ್ತಿಗೆಯನ್ನು ಗಾಯಗೊಳಿಸಲು ವ್ಯಕ್ತಿ ಚಾಕುವಿನಂತಹ ಆಯುಧವನ್ನು ಬಳಸಿದ್ದಾನೆ ಎಂದು ದಕ್ಷಿಣ ಕೊರಿಯಾದ ಮಾಧ್ಯಮಗಳು ವರದಿ ಮಾಡಿವೆ. ಲೀ ಅವರು 2022 ರ ಅಧ್ಯಕ್ಷೀಯ ಚುನಾವಣೆಯಲ್ಲಿ ಅಧ್ಯಕ್ಷ ಯೂನ್ ಸುಕ್ ಯೆಯೋಲ್ ಅವರ ವಿರುದ್ಧ ಕಡಿಮೆ ಅಂತರದಿಂದ ಸೋತಿದ್ದರು.

RELATED ARTICLES

Latest News