ಚಿನ್ನದ ಮೇಲೆ ಹೂಡಿಕೆ ಮಾಡಲು ಯೋಚಿಸುತ್ತಿದ್ದೀರಾ..? ಇಲ್ಲಿದೆ ಬೆಸ್ಟ್ ‘ಪ್ಲಾನ್’

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು, ಅ. 14- ಭಾರತೀಯ ಅಂಚೆ ಇಲಾಖೆ ವತಿಯಿಂದ ಸಾವರಿನ್ ಗೋಲ್ಡ್ ಬಾಂಡ್ ಯೋಜನೆಯು ಇದೇ ಅ. 12 ರಂದು ಪ್ರಾರಂಭವಾಗಿದ್ದು, ಗ್ರಾಹಕರು ಅ. 16ರೊಳಗೆ ಸಮೀಪದ ಅಂಚೆ ಕಚೇರಿಯ ಮೂಲಕ ಸಾವರಿನ್ ಗೋಲ್ಡ್ ಬಾಂಡ್ ಯೋಜನೆಯಲ್ಲಿ ಹೂಡಿಕೆ ಮಾಡಿಕೊಳ್ಳಬಹುದು. ಒಂದು ಗ್ರಾಂ ಚಿನ್ನದ ದರವನ್ನು 5,051 ರೂ. ಗೆ ನಿಗದಿಪಡಿಸಲಾಗಿದೆ. ಕನಿಷ್ಠ ಹೂಡಿಕೆ ಒಂದು ಗ್ರಾಂ ಆಗಿದ್ದು, ವ್ಯಕ್ತಿಗಳಿಗೆ ಮತ್ತು ಹಿಂದೂ ಅವಿಭಕ್ತ ಕುಟುಂಬಗಳಿಗೆ 4 ಕೆ.ಜಿ ಹಾಗೂ ಟ್ರಸ್ಟ್ ಮತ್ತು ಇದೇ ರೀತಿಯ ಘಟಕಗಳಿಗೆ 20 ಕೆ.ಜಿ (ಒಂದು ಆರ್ಥಿಕ ವರ್ಷದಲ್ಲಿ) ಗರಿಷ್ಠ ಹೂಡಿಕೆಯಾಗಿರುತ್ತದೆ.

ಬಾಂಡ್ ಅವ 8 ವರ್ಷವಾಗಿದ್ದು, ಬಾಂಡ್ ಅವ ಮುಗಿದಾಗ ಮಾರುಕಟ್ಟೆಯಲ್ಲಿರುವ ಚಿನ್ನದ ದರ ಮೊತ್ತವನ್ನು ನೀಡಲಾಗುವುದು. ವಾರ್ಷಿಕ ಶೇ. 2.5ರಷ್ಟು ನಿಶ್ಚಿತ ಬಡ್ಡಿಯೂ ಲಭ್ಯವಿರುತ್ತದೆ.

5, 6, ಮತ್ತು 7ನೇ ವರ್ಷಗಳಲ್ಲಿಯೂ ಸಹ ನಿರ್ಗಮಿಸುವ ಅವಕಾಶವಿರುತ್ತದೆ. ಜೊತೆಗೆ ಸಾಲಗಳಿಗೆ ಮೇಲಾಧಾರವಾಗಿ ಉಪಯೋಗಿಸಬಹದು.ಹೆಚ್ಚಿನ ಮಾಹಿತಿಗೆ ಸಮೀಪದ ಅಂಚೆ ಕಚೇರಿಯನ್ನು ಸಂಪರ್ಕಿಸುವುದು ಅಥವಾ ದೂರವಾಣಿ ಸಂಖ್ಯೆ 0821-2417308,2017307, 9845107947 ಗೆ ಕರೆ ಮಾಡುವಂತೆ ಅಂಚೆ ಇಲಾಖೆಯ ಮೈಸೂರು ವಿಭಾಗದ ಅೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Facebook Comments

Sri Raghav

Admin