ಎಸ್‍ಪಿಬಿಗೆ ಭಾರತ ರತ್ನ ನೀಡಬೇಕು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.26- ಸಂಗೀತ ಹಾಗೂ ಚಿತ್ರರಂಗದಲ್ಲಿ ಹೊಸ ದಾಖಲೆಯನ್ನೇ ಬರೆದಿರುವ ಗಾನ ಗಾರುಡಿಗ ಡಾ.ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರಿಗೆ ಕೇಂದ್ರ ಸರ್ಕಾರ ಭಾರತ ರತ್ನ ನೀಡಿ ಗೌರವಿಸಬೇಕು ಎಂದು ಶಾಸಕ ಹಾಗೂ ಮಾಜಿ ಸಚಿವ ರಾಮಲಿಂಗಾರೆಡ್ಡಿ ಮನವಿ ಮಾಡಿದ್ದಾರೆ.

14ಕ್ಕೂ ಹೆಚ್ಚು ಭಾಷೆಗಳಲ್ಲಿ 40ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಲ್ಲದೆ ಕನ್ನಡಿಗರ ಮೇಲೆ ಅಪಾರವಾದ ಗೌರವ ಹೊಂದಿದ್ದ ಎಸ್‍ಪಿಬಿ ಅವರ ನಿಧನ ನಿಜಕ್ಕೂ ಆಘಾತಕಾರಿ. ಅವರ ಆದರ್ಶ ಗುಣ ಹಾಗೂ ಸರಳತೆ ಮಾದರಿಯಾಗುತ್ತದೆ.

ಇಂತಹ ಮಹನೀಯರಿಗೆ ಭಾರತ ರತ್ನ ನೀಡಿ ಗೌರವಿಸುವುದು ಅಗತ್ಯ ಎಂದು ಹೇಳಿದ್ದಾರೆ. ಬೆಂಗಳೂರು ನಗರ ಕಾಂಗ್ರೆಸ್ ಪ್ರಚಾರ ಸಮಿತಿ ಹಾಗೂ ಕಲಾವಿದರು ಮತ್ತು ವಾದ್ಯಗೋಷ್ಠಿಯ ಹಿನ್ನೆಲೆ ಗಾಯಕರು ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ರಾಜ್ಯಸರ್ಕಾರ ಈ ಬಗ್ಗೆ ದೃಢ ನಿರ್ಧಾರ ಕೈಗೊಂಡು ಕೇಂದ್ರಕ್ಕೆ ಶಿಫಾರಸು ಮಾಡಬೇಕು ಎಂದು ಒತ್ತಾಯಿಸಿದರು. ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ ಎಸ್.ಮನೋಹರ್, ಜಿ.ಜನಾರ್ದನ್ , ಆನಂದ , ಶೇಖರ್, ಜಯಸಿಂಹ ,

ಶ್ರೀಧರ್, ಪುಟ್ಟರಾಜ, ಪರಿಸರ ರಾಮಕೃಷ್ಣ, ರವಿಶೇಖರ್ ಉಮೇಶ್ ಹಾಗೂ ಸಿನಿಮಾ ಕಲಾವಿದರು ಹಿನ್ನೆಲೆಯ ಗಾಯಕರಾದ ಪ್ರವೀಣ್ ಗಣೇಶ್, ಜ್ಯೂನಿಯರ್ ಎಸ್‍ಪಿಬಿ, ಸ್ವಪ್ನ , ಮಂಜಪ್ಪ ಹಾಗೂ ಇನ್ನೂ ಅನೇಕ ಹಿನ್ನೆಲೆ ಗಾಯಕರು ಭಾಗವಹಿಸಿದ್ದರು.

Facebook Comments

Sri Raghav

Admin