ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಪತ್ನಿಗೂ ಕೊರೋನಾ ವಾಸಿಟಿವ್…!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಆ.15- ಖ್ಯಾತ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರಿಗೆ ಕೋವಿಡ್ ಪಾಸಿಟಿವ್ ಆವರಿಸಿ ಸಾವುಬದುಕಿನ ನಡುವೆ ಹೋರಾಟ ನಡೆಸುತ್ತಿರುವ ಬೆನ್ನಲ್ಲೆ ಅವರ ಪತ್ನಿಗೆ ಕೊರೊನಾ ಪಾಸಿಟಿವ್ ಬಂದಿದೆ.

ಎಸ್‍ಪಿಬಿ ಪತ್ನಿ ಸಾವಿತ್ರಿ ಅವರಿಗೆ ಕೊರೊನಾ ವೈರಸ್ ವಾಸಿಟಿವ್ ವರದಿ ಬಂದಿದೆ. ಈ ಕುರಿತು ಬಾಲಸುಬ್ರಹ್ಮಣ್ಯಂ ಅವರ ಪುತ್ರ ಚರಣ್ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಇದರಿಂದ ಎಸ್‍ಪಿಬಿ ಅಭಿಮಾನಿಗಳಿಗೆ ಇನ್ನಷ್ಟು ಆತಂಕ ಮೂಡಿದೆ.

ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯ ಸ್ಥಿತಿ ಶುಕ್ರವಾರ ಗಂಭೀರ ಆಗಿದೆ. ಹಾಗಾಗಿ ಚೆನ್ನೈನ ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಅವರ ಆರೋಗ್ಯದ ಬಗ್ಗೆ ಕೆಲವು ಊಹಾಪೋಹಗಳು ಹರಿದಾಡಿದವು. ಆದರೆ ಅವುಗಳಿಗೆಲ್ಲ ಅವರ ಪುತ್ರ ಎಸ್‍ಪಿಬಿ ಚರಣ್ ಪುಲ್‍ಸ್ಟಾಪ್ ಇಟ್ಟಿದ್ದಾರೆ. ಆದರೆ ಈ ನಡುವೆ ಅವರ ಕುಟುಂಬದ ಇತರೆ ಸದಸ್ಯರಿಗೂ ಕೊರೊನಾ ಪಾಸಿಟಿವ್ ಆಗಿರುವ ಬಗ್ಗೆ ಸುದ್ದಿ ಕೇಳಿಬಂದಿದೆ.

ಎಸ್‍ಪಿ ಬಾಲಸುಬ್ರಹ್ಮಣಂ ಬೇಗ ಚೇತರಿಸಿಕೊಳ್ಳಲಿ ಎಂದು ಅಭಿಮಾನಿಗಳು, ಸ್ನೇಹಿತರು, ಚಿತ್ರರಂಗದ ಗಣ್ಯರು ಹಾಗೂ ಇತರ ಕ್ಷೇತ್ರಗಳ ಗಣ್ಯರು ಕೂಡ ಪ್ರಾರ್ಥಿಸುತ್ತಿದ್ದಾರೆ.

ಸಂಗೀತ ಲೋಕದ ದಿಗ್ಗಜರಾದ ಎ.ಆರ್. ರೆಹಮಾನ್, ಇಳಯರಾಜ ಮುಂತಾದವರು ಸೋಶಿಯಲ್ ಮೀಡಿಯಾ ಮೂಲಕ ಲೆಜೆಂಡರಿ ಗಾಯಕನಿಗೆ ಧೈರ್ಯ ತುಂಬಿದ್ದಾರೆ. ಅವರು ಬೇಗ ಗುಣಮುಖರಾಗಲಿ ಎಂದು ಮೆಗಾ ಸ್ಟಾರ್ ಚಿರಂಜೀವಿ ಕೂಡ ಪ್ರಾರ್ಥಿಸಿದ್ದಾರೆ.

Facebook Comments

Sri Raghav

Admin