ಚಾಮರಾಜನಗರ ನೂತನ ಎಸ್ಪಿ ಆನಂದ್‍ಕುಮಾರ್

ಈ ಸುದ್ದಿಯನ್ನು ಶೇರ್ ಮಾಡಿ

ಕೊಳ್ಳೇಗಾಲ, ಜೂ.13- ಚಾಮರಾಜನಗರ ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಎಚ್.ಡಿ.ಆನಂದ್ ಕುಮಾರ್ ಅಧಿಕಾರ ಸ್ವಿಕರಿಸಿದರು.
ಹಿಂದಿನ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್‍ಮೀನಾರವರು ಬೆಂಗಳೂರಿನ ನಿಸ್ತಂತು (ವೈರ್ ಲೆಸ್) ವಿಭಾಗಕ್ಕೆ ವರ್ಗಾವಣೆಯಾಗಿದ್ದು ಅವರ ವರ್ಗಾವಣೆಯಿಂದ ತೆರವಾಗಿದ್ದ ಸ್ಥಾನಕ್ಕೆ ಎಚ್.ಡಿ.ಆನಂದ್‍ಕುಮಾರ್ ಅವರನ್ನು ನೇಮಿಸಲಾಗಿದೆ.

ನಿನ್ನೆ ಅವರು ಅಧಿಕಾರ ವಹಿಸಿಕೊಂಡರು. ಇದಕ್ಕೂ ಮೊದಲು ಎಚ್.ಡಿ.ಆನಂದ್ ಕುಮಾರ್ ರವರು ಬೆಂಗಳೂರಿನ ಅಪರಾಧ ತನಿಖಾ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.  ಅಧಿಕಾರ ವಹಿಸಿ ಕೊಳ್ಳುವುದಕ್ಕೂ ಮೊದಲು ಅವರು ಮಲೆಮಹದೇಶ್ವರ ಬೆಟ್ಟಕ್ಕೆ ತೆರಳಿ ಪೂಜೆ ಸಲ್ಲಿಸಿ, ಮಲೆ ಮಹದೇಶ್ವರ ದರ್ಶನ ಪಡೆದರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ