ಬೆಳ್ಳಂ ಬೆಳಗ್ಗೆ ರೌಡಿಗಳಿಗೆ ಬೆವರಿಳಿಸಿದ SP ಕೋನ ವಂಶಿಕೃಷ್ಣ

ಈ ಸುದ್ದಿಯನ್ನು ಶೇರ್ ಮಾಡಿ

ನೆಲಮಂಗಲ, ಆ.3- ಬೆಳ್ಳಂ ಬೆಳಗ್ಗೆ ಬೆಂಗಳೂರು ಹೊರವಲಯ ನೆಲಮಂಗಲದಲ್ಲಿ ರೌಡಿ ಪರೇಡ್ ನಡೆಸಿ ಖಡಕ್ ಎಚ್ಚರಿಕೆ ನೀಡಲಾಗಿದೆ. ಇಂದು ನೆಲಮಂಗಲ ಉಪವಿಭಾಗದ ಪೊಲೀಸರು ವಿವಿಧ ಕಡೆ ದಾಳಿ ನಡೆಸಿ ರೌಡಿ ಪಟ್ಟಿಯ ಆಸಾಮಿಗಳನ್ನು ವಶಕ್ಕೆ ಪಡೆದಿದ್ದರು. ನೆಲಮಂಗಲದಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗದಂತೆ ನಿಗಾ ವಹಿಸಲು ರಾತ್ರೋರಾತ್ರಿ ರೌಡಿಗಳ ಮನೆಗಳ ಮೇಲೆ ದಾಳಿ ನಡೆಸಿ ತಮ್ಮ ಸರಹದ್ದಿನಲ್ಲಿರುವ ರೌಡಿಗಳ ಪರೇಡ್ ಮಾಡಿದ್ದಾರೆ.

ಇನ್ನೂ ಬೆತ್ತನಗೆರೆ ಮಂಜ, ಬೆತ್ತನಗೆರೆ ಶಂಕರ, ಬೆತ್ತನಗೆರೆ ಮುನಿರಾಜ, ಬಂಡೆ ಮಂಜ, ಗಣೇಶನಗುಡಿ ರಂಗ, ಕಡಬಗೆರೆ ಸೀನಾ ಸೇರಿದಂತೆ ಮಾದನಾಯಕನಹಳ್ಳಿ, ನೆಲಮಂಗಲ ಗ್ರಾಮಾಂತರ, ಪಟ್ಟಣ, ದಾಬಸ್‍ಪೇಡೆ, ತ್ಯಾಮಗೊಂಡ್ಳು ಈ ಐದು ಪೊಲೀಸ್ ಠಾಣಾ ವ್ಯಾಪ್ತಿಯ 150 ಕ್ಕು ಹೆಚ್ಚು ಜನ ರೌಡಿಶೀಟರ್‍ಗಳನನು ಜಿಲ್ಲಾ ಸಶಸ್ತ್ರ ಮೀಸಲು ಪಡೆ ವಾಹನಗಳಲ್ಲಿ ಕರೆತಂದಿದ್ದು, ಈ ರೌಡಿ ಪರೇಡ್‍ಗೆ ಯಾರು ಹಾಜರಿಲ್ಲವೋ ಅಂತಹವರಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ.

ಇನ್ನು ನೆಲಮಂಗಲದಲ್ಲಿ ನಡೆದ ಲಾಯರ್ ರಿವಿ ಕೊಲೆ ಪ್ರಕರಣದ ಆರೋಪಿ ಮಂಜುನಾಥ್ ಬೆತ್ತನಗೆರೆ ಮಂಜ, ಹಾಗು ಈ ಹಿಂದೆ ರೌಡಿ ಪೆರೆಡ್ಗೆ ಬಾರದೆ ತಲೆ ತಪ್ಪಿಸಿಕೊಂಡಿದ್ದ ಶ್ರೀನಿವಾಸ್ ಅಲಿಯಾಸ್ ಕಡಬಗೆರೆ ಸೀನನಿಗೆ ಬೆಂಗಳೂರು ಗ್ರಾಮಾಂತರ ಎಸ್ಪಿ ಡಾ.ಕೋನ ವಂಶಿಕೃಷ್ಣ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಇನ್ನು ಮುಂದೆ ಯಾರೂ ಕೂಡ ರೌಡಿ ಚಟುವಟಿಕೆಗಳಲ್ಲಿ ಭಾಗಿಯಾಗ ಬಾರದು, ಗ್ಯಾಂಬ್ಲಿಂಗ್, ಲ್ಯಾಂಡ್ ಗ್ರಾಬಿಂಗ್, ಗ್ಯಾಂಗ್ ಕಟ್ಟೋದು , ಸಾರ್ವಜನಿಕರಿಗೆ ತೊಂದರೆ ಮಾಡುವ ಯಾವುದೆ ಚಟುವಟಿಕೆಗಳನ್ನು ಮಾಡಿದರೆ ಗೂಂಡ ಕಾಯ್ದೆ ಹಾಕುತ್ತೇವೆ ಎಂದು ಎಸ್ಪಿ ಸೂಚಿಸಿದ್ದಾರೆ.

ಈಗಾಗಲೆ ಒಂದು ಗೂಂಡಾ ಕಾಯ್ದೆ ಹಾಕಲು ರೆಡಿ ಮಾಡಿದ್ದೇವೆ. ಇನ್ನು ಮೂರು ನಾಲ್ಕು ಜನಕ್ಕೆ ಗೂಂಡಾ ಕಾಯ್ದೆ ಹಾಕುತ್ತೇವೆ. ಮೊದಲ ವಾರ್ನಿಂಗ್, ಎರಡನೆ ವಾರ್ನಿಂಗ್ ಇರುವುದಿಲ್ಲ ಎಂದು ಎಸ್ಪಿ ರೌಡಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು. ನಗರದ ಕ್ರೀಡಾಂಗಣದಲ್ಲಿ ರೌಡಿಗಳ ಪರೇಡ್ ನಡೆಸಿ ಪ್ರಸ್ತುತ ಮಾಡುತ್ತಿರುವ ಕೆಲಸ , ವಾಸದ ನಿಖರ ವಿಳಾಸ ಹಾಗೂ ಮೊಬೈಲ್ ನಂಬರ್‍ಗಳನ್ನು ಪಡೆದರು.

Facebook Comments