ಎಸ್‍ಪಿಬಿ ಚೇತರಿಕೆಗೆ ಸಂಗೀತದ ಟ್ರೀಟ್ಮೆಂಟ್..!

ಈ ಸುದ್ದಿಯನ್ನು ಶೇರ್ ಮಾಡಿ

ಚೆನ್ನೈ, ಆ. 17- ಸಂಗೀತಕ್ಕೆ ಕಲ್ಲನ್ನು ಕರಗಿಸುವಂತಹ ಶಕ್ತಿ ಇದೆ ಎಂದು ಹೇಳುತ್ತಾರೆ, ಆದರೆ ಕೊರೊನಾ ಓಡಿಸಲು ಸಂಗೀತವೇ ಸೂರ್ತಿ ನೀಡುತ್ತದೆ ಎಂಬ ಮಾತು ಎಸ್‍ಬಿಪಿ ವಿಷಯದಲ್ಲಿ ನಿಜವಾಗಿದೆ ಎಂದು ಗಾನ ಗಾರುಡಿಗನಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ತಿಳಿಸಿದ್ದಾರೆ.

ಕೊರೊನಾ ಪಾಸಿಟಿವ್‍ನಿಂದಾಗಿ ಕಳೆದ 5 ರಿಂದ ಚೆನ್ನೈನ ಅರುಂಬಾಕಂನಲ್ಲಿರುವ ಎಂಜಿಎಂ ಆಸ್ಪತ್ರೆಯಲ್ಲಿ ಎಸ್‍ಪಿಬಿ ಚಿಕಿತ್ಸೆ ಪಡೆಯುತ್ತಿದ್ದು, ಕಳೆದ ಮೂರು ದಿನಗಳ ಹಿಂದೆ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತಾದ್ದರೂ, ಅವರ ಆರೋಗ್ಯದಲ್ಲಿ ಈಗ ಚೇತರಿಕೆ ಕಂಡು ಬರುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಎಸ್‍ಪಿಬಿ ಹಾಡಿರುವ ಭಕ್ತಿಗೀತೆಗಳು ಹಾಗೂ ಸೂರ್ತಿದಾಯಕವಾದ ಗೀತೆಗಳನ್ನು ಬಾಲಸುಬ್ರಹ್ಮಣ್ಯಂರಿಗೆ ಕೇಳಿಸಿದ್ದರಿಂದಾಗಿ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತಿದೆ ಎಂದು ವೈದ್ಯರು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಎಸ್‍ಬಿಪಿ ಹಾಡಿರುವ ಗೀತೆಗಳು ಅನೇಕರಿಗೆ ಸೂರ್ತಿದಾಯಕವಾಗಿದ್ದು, ಈಗ ಅವರ ಗೀತೆಗಳಿಗೆ ಅವರ ಆರೋಗ್ಯ ಚೇತರಿಕೆಗೆ ಕಾರಣವಾಗುತ್ತಿರುವುದು ವಿಸ್ಮಯವೇ ಸರಿ. ಈಗ ಇದೇ ಸಂಗೀತ ಚಿಕಿತ್ಸೆಯನ್ನು ಆಸ್ಪತ್ರೆಯಲ್ಲಿರುವ ಇತರ ರೋಗಿಗಳಿಗೂ ಕೇಳಲು ಮಂದಾಗಿದ್ದಾರಂತೆ.

Facebook Comments

Sri Raghav

Admin