ಲೋಕಸಭೆ ಅಧ್ಯಕ್ಷ ಓಂ ಬಿರ್ಲಾ ಅವರ ಭಾಷಣ : ಪ್ರತಿಪಕ್ಷಕ್ಕೆ ಸ್ಪೀಕರ್ ಮನವಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಸೆ.24- ಲೋಕಸಭೆ ಅಧ್ಯಕ್ಷ ಓಂ ಬಿರ್ಲಾ ಅವರು ವಿಧಾನಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ಮಾಡಲಿರುವ ಭಾಷಣವನ್ನು ಪ್ರತಿಪಕ್ಷವಾದ ಕಾಂಗ್ರೆಸ್ ಬಹಿಷ್ಕರಿಸದೇ ಭಾಗವಹಿಸಬೇಕು ಎಂದು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ವಿಧಾನಸಭೆಯಲ್ಲಿ ಮನವಿ ಮಾಡಿದರು.

ಇಂದು ಬೆಳಗ್ಗೆ ಸದನ ಪ್ರಾರಂಭವಾದ ಕೂಡಲೇ ಈ ವಿಷಯ ಪ್ರಸ್ತಾಪಿಸಿದ ಸಭಾಧ್ಯಕ್ಷರು ಕಾಂಗ್ರೆಸ್ ಶಾಸಕರು ಜಂಟಿ ಅಧಿವೇಶನಕ್ಕೆ ಬರುವುದಿಲ್ಲ ಎಂಬುದನ್ನು ಗಮನಕ್ಕೆ ತಂದಿದ್ದಾರೆ. ಆದರೆ, ಕಾಂಗ್ರೆಸ್ ಸದಸ್ಯರು ತಮ್ಮ ನಿರ್ಣಯವನ್ನು ಪುನರ್ ಪರಿಶೀಲಿಸಿ ಅವೇಶನದಲ್ಲಿ ಪಾಲ್ಗೊಳ್ಳಬೇಕು ಎಂದರು.

ವಿಧಾನ ಪರಿಷತ್ ಸಭಾಪತಿ ಮತ್ತು ನಾನು ಲೋಕಸಭಾ ಅಧ್ಯಕ್ಷರಿಂದ ಉಭಯ ಸದನಗಳ ಸದಸ್ಯರಿಗೆ ಭಾಷಣ ಮಾಡಿಸುವ ತೀರ್ಮಾನ ಮಾಡಿದ್ದೇವೆ. ಸಂವಿಧಾನ ಅಡಿಯಲ್ಲೇ ನಾವು ಕಾರ್ಯನಿರ್ವಹಿಸುತ್ತಿದ್ದೇವೆ.

ವ್ಯವಸ್ಥೆಗೆ ಶಕ್ತಿ ತುಂಬುವ ಉದ್ದೇಶದಿಂದ ಜಂಟಿ ಅವೇಶನ ನಡೆಸಲಾಗುತ್ತಿದ್ದು, ಬಹಿಷ್ಕಾರ ಉತ್ತಮವಲ್ಲ. ಇದರಿಂದ ಸರಿಯಾದ ಸಂದೇಶ ರವಾನೆ ಆಗುವುದಿಲ್ಲ ಎಂದು ಹೇಳಿದರು.

ಈಗಾಗಲೇ ಲೋಕಸಭಾಧ್ಯಕ್ಷರು ಬೆಂಗಳೂರಿಗೆ ಬಂದಿದ್ದಾರೆ. ಮಧ್ಯಾಹ್ನ ಭೋಜನದ ಬಳಿಕ ಜಂಟಿ ಅವೇಶನವನ್ನು ಉದ್ದೇಶಿಸಿ ಅವರು ಭಾಷಣ ಮಾಡಲಿದ್ದಾರೆ.

ಹೀಗಾಗಿ ಪ್ರಸಕ್ತ ಅವೇಶನವನ್ನು ಇಂದು ಮಧ್ಯಾಹ್ನ ಒಂದು ಗಂಟೆಗೆ ಮುಗಿಸಬೇಕಿದೆ. ಒಂದು ವೇಳೆ ಸದಸ್ಯರಿಗೆ ಅವಕಾಶ ಸಿಗದಿದ್ದರೆ ಅನ್ಯತಾ ಭಾವಿಸಬಾರದು. ವಸ್ತು ಸ್ಥಿತಿ ಸ್ವೀಕಾರ ಮiÁಡಬೇಕು ಎಂದು ಸಭಾಧ್ಯಕ್ಷರು ಮನವಿ ಮಾಡಿದರು.

Facebook Comments

Sri Raghav

Admin