ಅಯೋಧ್ಯೆ ಭೂಮಿ ಪೂಜೆ : ರಾಮನಿಗಾಗಿ ಚಿನ್ನದ ದಾರ ಬಳಸಿ ನವರತ್ನದ ವಿಶೇಷ ವಸ್ತ್ರ ತಯಾರಿ

ಈ ಸುದ್ದಿಯನ್ನು ಶೇರ್ ಮಾಡಿ

ಅಯೋಧ್ಯೆ,ಆ.3- ಇಡೀ ವಿಶ್ವದ ಗಮನಸೆಳೆದಿರುವ ರಾಮ ಮಂದಿರ ಭೂಮಿ ಪೂಜೆಗಾಗಿ ಭರದ ಸಿದ್ದತೆಗಳು ನಡೆಯುತ್ತಿವೆ. ಇದೇ ವೇಳೆ ಮಂದಿರ, ಶ್ರೀರಾಮನ ಅಲಂಕಾರಕ್ಕಾಗಿ ಭರ್ಜರಿ ತಯಾರಿ ಸಹ ಮುಂದುವರೆದಿದೆ.

ಅಯೋಧ್ಯೆಯ ಇಬ್ಬರು ರಾಮ ಭಕ್ತ ಸಹೋದರರು ತಮ್ಮ ನೆಚ್ಚಿನ ಆರಾಧ್ಯ ದೇವರಿಗೆ ಚಿನ್ನದ ದಾರಗಳಿಂದ ಹೊಲೆದಿರುವ ನವರತ್ನ ಖಚಿತ ವಿಶೇಷ ವಸ್ತ್ರವನ್ನು ಸಿದ್ದಪಡಿಸಿ ಮಂದಿರ ನಿರ್ಮಾಣದ ಭೂಮಿ ಪೂಜೆಯ ದಿನದಂದು ಸಮರ್ಪಿಸಲಿದ್ದಾರೆ.

ರಾಮನಿಗೆ ಈ ವಿಶೇಷ ವಸ್ತ್ರವನ್ನು ಕೊಡುಗೆಯಾಗಿ ನೀಡಬೇಕೆಂಬುದು ಈ ಕುಟುಂಬ ಮೂರುವರೆ ದಶಕಗಳ ಹಿಂದೆಯೇ ಇಚ್ಚಿಸಿತ್ತು. ಬಾಬುಲಾಲ್ ಎಂಬುವರು ತಮ್ಮ ಮಕ್ಕಳಾದ ಶಂಕರ್ ಲಾಲ್ ಮತ್ತು ಭಗವತ್ ಲಾಲ್ ಎಂಬುವರೊಂದಿಗೆ 1985ರಲ್ಲೇ ಬಂಗಾರ ಮತ್ತು ನವರತ್ನಗಳಿರುವ ಮಕ್ಮಲ್ ವಸ್ತ್ರವನ್ನು ಸಿದ್ದಪಡಿಸಲು ಆರಂಭಿಸಿದ್ದರು.

ಬಾಬುಲಾಲ್ ನಿಧನದ ನಂತರ ಅವರ ಪುತ್ರರಾದ ಲಾಲ್ ಸಹೋದರರು ಈಗ ಈ ಬೆಲೆ ಬಾಳುವ ವಿಶೇಷ ವಸ್ತ್ರವನ್ನು ಮರ್ಯಾದಾ ಪುರುಷೋತ್ತಮ ಶ್ರೀರಾಮನಿಗೆ ಭಕ್ತಿಯಿಂದ ಸಮರ್ಪಿಸಲಿದ್ದಾರೆ.

Facebook Comments

Sri Raghav

Admin