ವೀಕ್ಷಕರ ಸೂಚ್ಯಂಕ ಶ್ರೇಣಿಯಲ್ಲಿ ಭಾರತಕ್ಕೆ 8ನೇ ಸ್ಥಾನ

ಈ ಸುದ್ದಿಯನ್ನು ಶೇರ್ ಮಾಡಿ

ಲಂಡನ್, ನ.2-ಆರ್ಥಿಕ ಹಿಂಜರಿತದ ನಡುವೆಯೂ ಪ್ರಗತಿಯತ್ತ ದಿಟ್ಟ ಹೆಜ್ಜೆ ಹಾಕುತ್ತಿರುವ ಭಾರತ ವಿವಿಧ ಕ್ಷೇತ್ರಗಳಲ್ಲೂ ಮುಂಚೂಣಿಯಲ್ಲಿದೆ. ಇದೇ ಕಾರಣಕ್ಕಾಗಿ ಜಾಗತಿಕ ಸ್ಪೆಕ್ಟೆಟರ್ ಇಂಡೆಕ್ಸ್ (ವೀಕ್ಷಕರ ಸೂಚ್ಯಂಕ) ಶ್ರೇಣಿಯಲ್ಲಿ ಭಾರತ ಎಂಟನೇ ಸ್ಥಾನದ ಹೆಗ್ಗಳಿಕೆ ಪಡೆದಿದೆ.

ಸ್ಪೆಕ್ಟೆಟರ್ ಇಂಡೆಕ್ಸ್ಈ  ಸಾಲಿನ 20 ರ್ಯಾಂಕ್‍ಗಳ ಪಟ್ಟಿ ಪ್ರಕಟವಾಗಿದೆ. ರಾಜಕೀಯ, ಆರ್ಥಿಕ, ವಿಜ್ಞಾನ ಮತ್ತು ಸಂಶೋಧನೆ ಹಾಗೂ ಕ್ರೀಡಾ ಕ್ಷೇತ್ರದಲ್ಲಿನ ಆಯಾ ರಾಷ್ಟ್ರಗಳ ಸಾಧನೆಗಳ ಸಮಗ್ರ ಪ್ರಗತಿಯನ್ನು ಪರಿಗಣಿಸಿ ಈ ಶ್ರೇಯಾಂಕ ನೀಡಲಾಗುತ್ತದೆ.

ಈ ಪಟ್ಟಿಯಲ್ಲಿ ಎಂಟನೆ ಸ್ಥಾನದಲ್ಲಿರುವ ಭಾರತ ಇಟಲಿ, ಕೆನಡಾ, ಆಸ್ಟ್ರೇಲಿಯ ದೇಶಗಳನ್ನು ಹಿಂದಿಕ್ಕಿದೆ. ಈ ಪಟ್ಟಿಯಲ್ಲಿ ಅಮೆರಿಕ, ಚೀನಾ ಮತ್ತು ಫ್ರಾನ್ಸ್ ಮೊದಲ ಮೂರು ಸ್ಥಾನಗಳನ್ನು ಆಕ್ರಮಿಸಿಕೊಂಡಿವೆ. ನಂತರದ ಶ್ರೇಣಿಯಲ್ಲಿ ಅನುಕ್ರಮವಾಗಿ ಜರ್ಮನಿ, ಇಂಗ್ಲೆಂಡ್, ಸ್ಪೇನ್, ಜಪಾನ್, ಭಾರತ, ಇಟಲಿ, ಕೆನಡಾ, ದಕ್ಷಿಣ ಕೊರಿಯಾ, ರಷ್ಯಾ, ಆಸ್ಟ್ರೇಲಿಯಾ, ಬ್ರೆಜಿಲ್ ತೈವಾನ್, ಇರಾನ್, ನೆದರ್‍ಲೆಂಡ್ಸ್, ಫೋಲೆಂಡ್, ಟರ್ಕಿ ಮತ್ತು ಸ್ವಿಟ್ಜರ್‍ಲೆಂಡ್ ಇದೆ.

ಸ್ಪೆಕ್ಟೆಟರ್ ಇಂಡೆಕ್ಸ್‍ನ ಏಷ್ಯಾ ಖಂಡದ ರ್ಯಾಂಕ್‍ನಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ. ಭಾರತ ಕಳೆದ ವಾರವಷ್ಟೇ ವಾಣಿಜ್ಯ ವಹಿವಾಟು ನಡೆಸಲು ವಿಶ್ವದ ಅತ್ಯಂತ ಸುಲಲಿತ ದೇಶಗಳಲ್ಲಿ 63ನೇ ಸ್ಥಾನಕ್ಕೆ ಬಡ್ತಿ ಪಡೆದಿತ್ತು. ಕಳೆದ ತಿಂಗಳು ಭಾರತ ಜಾಗತಿಕ ಸ್ಪರ್ಧಾತ್ಮಕತೆಯ ಸೂಚ್ಯಂಕದಲ್ಲಿ 68ನೇ ಸ್ಥಾನಗಳಿಸಿತ್ತು.

Facebook Comments