ಮೇರಿಕೋಮ್, ಪಿ.ವಿ.ಸಿಂಧು ಸೇರಿ 9 ಮಹಿಳಾ ಕ್ರೀಡಾಪಟುಗಳಿಗೆ ಪದ್ಮ ಪ್ರಶಸ್ತಿಗೆ ಶಿಫಾರಸು

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಸೆ.12- ಶ್ರೇಷ್ಠ ಮಹಿಳಾ ಬಾಕ್ಸರ್ ಮೇರಿ ಕೋಮ್‍ರ ಸಾಧನೆಯನ್ನು ಪರಿಗಣಿಸಿ ದೇಶದ ಎರಡನೇ ಉನ್ನತ ಪ್ರಶಸ್ತಿ ಪದ್ಮವಿಭೂಷಣವನ್ನು ನೀಡಬೇಕೆಂದು ಕ್ರೀಡಾ ಸಚಿವಾಲಯವು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದೆ.

ಕ್ರೀಡಾಲೋಕದಲ್ಲಿ ಮಾಡಿದ ಸಾಧನೆಯನ್ನು ಪರಿಗಣಿಸಿ ನೀಡಲಾಗುವ ಪದ್ಮವಿಭೂಷಣ ಪ್ರಶಸ್ತಿಗೆ ಚೆಸ್ ಚಾಂಪಿಯನ್ ವಿಶ್ವನಾಥ್ ಆನಂದ್ (2007), ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್(2008) ಹಾಗೂ ಪರ್ವತರೋಹಿ ಸರ್ ಎಡ್‍ಮಂಡ್ ಹಿಲರಿ(2008)ರವರು ಭಾಜನರಾಗಿದ್ದು, ಇದೇ ಮೊದಲ ಬಾರಿಗೆ ಮಹಿಳಾ ಕ್ರೀಡಾಪಟು ಮೇರಿಕೋಮ್ ಅವರಿಗೂ ನೀಡಬೇಕೆಂದು ಶಿಫಾರಸು ಮಾಡಲಾಗಿದೆ.

ಮೇರಿ ಕೋಮ್ ಆರು ಬಾರಿ ವಿಶ್ವ ಚಾಂಪಿಯನ್ಸ್ ಆಗಿರುವ ಮೇರಿ ಕೋಮ್‍ಗೆ 2013ರಲ್ಲಿ ಪದ್ಮಭೂಷಣ ಹಾಗೂ 2006ರಲ್ಲಿ ಪದ್ಮಶ್ರೀ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ.
2020ರಲ್ಲಿ ನಡೆಯಲಿರುವ ಟೋಕಿಯೋ ಒಲಿಂಪಿಕ್ಸ್‍ಗೆ ಅರ್ಹತೆ ಪಡೆದಿರುವ ಮಣಿಪುರದ ಬಾಕ್ಸರ್ ಮೇರಿಕೋಮ್ 2012ರ ಲಂಡನ್ ಒಲಿಂಪಿಕ್ಸ್‍ನಲ್ಲಿ ಕಂಚಿನ ಪ್ರಶಸ್ತಿ ಗೆದ್ದ ನಂತರ 2016ರಲ್ಲಿ ಬಿಜೆಪಿ ಪಕ್ಷದಿಂದ ರಾಜ್ಯಸಭಾ ಸದಸ್ಯರಾಗಿಯೂ ಆಯ್ಕೆಯಾಗಿದ್ದರು.

ಸಿಂಧುಗೆ ಪದ್ಮಭೂಷಣ:  ಬ್ಯಾಡ್ಮಿಂಟನ್ ಅಂಗಳದಲ್ಲಿ ಧ್ರುವತಾರೆಯಾಗಿ ಮೆರೆಯುತ್ತಿರುವ ವಿ.ಪಿ.ಸಿಂಧುಗೆ ಪದ್ಮಭೂಷಣ ಪ್ರಶಸ್ತಿಯನ್ನು ನೀಡಬೇಕೆಂದು ಕ್ರೀಡಾ ಸಮಿತಿಯು ಶಿಫಾರಸು ಕಳುಹಿಸಿದೆ.

ರಿಯೋ ಒಲಿಂಪಿಕ್ಸ್‍ನಲ್ಲಿ ಬೆಳ್ಳಿ ಪದಕ ಗೆದ್ದು ದೇಶದ ಕೀರ್ತಿ ಬೆಳಗಿಸಿದ್ದ ಪಿ.ವಿ.ಸಿಂಧುಗೆ 2017ರಲ್ಲೇ ಪದ್ಮ ಭೂಷಣ ಪ್ರಶಸ್ತಿ ನೀಡಬೇಕೆಂದು ಮನವಿ ಮಾಡಲಾಗಿತ್ತಾದರೂ, ಅಂತಿಮ ಕ್ಷಣದಲ್ಲಿ ಕೈತಪ್ಪಿತ್ತು. ಸಿಂಧುಗೆ 2015ರಲ್ಲಿ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ.

ಸಿಂಧು ಇತ್ತೀಚೆಗೆ ನಡೆದ ವಿಶ್ವ ಚಾಂಪಿಯನ್‍ಷಿಪ್‍ನಲ್ಲಿ ಜಪಾನ್‍ನ ನೊಜೊಮಿ ಒಕುಹರಾ ವಿರುದ್ಧ 21-7, 21-7 ಸೆಟ್‍ಗಳಿಂದ ಗೆಲ್ಲುವ ಮೂಲಕ ಈ ಪ್ರಶಸ್ತಿ ಗೆದ್ದ ಮೊದಲ ಭಾರತೀಯ ಆಟಗಾರ್ತಿಯಾಗಿ ಬಿಂಬಿಸಿಕೊಂಡಿದ್ದರು.

ಇನ್ನು ಪದ್ಮಶ್ರೀಗೆ ಶಿಫಾರಸು ಮಾಡಿರುವ ಅಥ್ಲೆಟಿಕ್ಸ್‍ಗಳಲ್ಲೂ 7 ಮಂದಿ ಮಹಿಳಾ ಕ್ರೀಡಾಪಟುಗಳ ಹೆಸರುಗಳಿವೆ. ವಿನೇಶ್ ಪೊಗಾಟ್(ಕುಸ್ತಿ), ಹರ್ಮಿತ್‍ಕೌರ್(ಕ್ರಿಕೆಟ್), ರಾಣಿ ರಾಮ್‍ಪಾಲ್ (ಹಾಕಿ), ಸುಮಾ ಶಿರೂರ್ (ಶೂಟಿಂಗ್), ಮಾಣಿಕಾ ಬಾರ್ತ(ಟೇಬಲ್‍ಟೆನ್ನಿಸ್), ತಾಶಿ ಮತ್ತು ನುಂಗ್ಯಿಮಲಿಕ್(ಪರ್ವತಾರೋಹಿ ಅವಳಿ ಸಹೋದರಿಯರು)ರ ಹೆಸರುಗಳು ಮುಂಚೂಣಿಯಲ್ಲಿವೆ. ಪದ್ಮ ಪ್ರಶಸ್ತಿ ಪುರಸ್ಕøತರ ಹೆಸರನ್ನು ಗೃಹ ಸಚಿವಾಲಯ (ಎಂಎಚ್‍ಎ) 2020ರ ಜನವರಿ 25 ರಂದು ಪ್ರಕಟಿಸಲಿದೆ.

Facebook Comments