ಹುತಾತ್ಮ ಯೋಧರಿಗೆ ಕ್ರೀಡಾಪಟುಗಳ ನಮನ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಜೂ. 17- ಇಂಡೋ- ಚೀನಾ ಸಂಘರ್ಷದಲ್ಲಿ ಹುತಾತ್ಮರಾದ ವೀರ ಸೇನಾನಿಗಳ ಆತ್ಮಕ್ಕೆ ಶಾಂತಿ ಸಿಗಲೆಂದು ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ಹಲವು ಕ್ರೀಡಾಪಟುಗಳು ಸಂತಾಪ ಸೂಚಿಸಿದ್ದಾರೆ.

ದೇಶದ ರಕ್ಷಣೆಗಾಗಿ ತಮ್ಮ ಅಮೂಲ್ಯ ಜೀವವನ್ನು ಸಮರ್ಪಣೆ ಮಾಡಿದ ಯೋಧರಿಗೆ ದೇಶದ ನಾವೆಲ್ಲರು ನಮನ ಸಲ್ಲಿಸಬೇಕು, ಯೋಧರ ಗುಣಗಾನ ಮಾಡಬೇಕೆ ಹೊರತು ಹುತಾತ್ಮ ಯೋಧರ ಅಂತ್ಯಕ್ರಿಯೆಯ ವೇಳೆ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಬಾರದು, ವೀರ ಮರಣವನ್ನಪ್ಪಿದ ಯೋಧರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ಪರಮಾತ್ಮ ನೀಡಲಿ ಎಂದು ಟ್ವಿಟ್ಟರ್ ಮೂಲಕ ವಿರಾಟ್ ಕೊಹ್ಲಿ ಸಂತಾಪ ಸೂಚಿಸಿದ್ದಾರೆ.

ಚೀನಾ ತನ್ನ ಎಲ್ಲ ದೌರ್ಜನ್ಯಗಳನ್ನು ನಿಲ್ಲಿಸಬೇಕು, ಮಾನವ ಜೀವನ ಅಮೂಲ್ಯವಾದದ್ದು ಅದನ್ನು ಶಾಂತಿಯುತ ಜಗತ್ತನ್ನು ನಿರ್ಮಿಸಲು ಬಳಸಿಕೊಳ್ಳಬೇಕು, ಗಾಲ್ವಾನ್ ವ್ಯಾಲಿಯಲ್ಲಿ ಹುತಾತ್ಮರಾದ ಭಾರತೀಯ ಸೈನಿಕರ ಧೈರ್ಯಕ್ಕೆ ನನ್ನ ಸೈಲುಟ್ ಎಂದು ಯುವರಾಜ್‍ಸಿಂಗ್ ತಿಳಿಸಿದ್ದಾರೆ.

ಲಡಾಖ್‍ನಲ್ಲಿ ಚೀನಾ ದೇಶದ ನಡುವೆ ನಡೆದ ಸಂಘರ್ಷದಲ್ಲಿ ಹುತಾತ್ಮರಾದ ಭಾರತೀಯ ಯೋಧರ ಧೈರ್ಯಕ್ಕೆ ನಾನು ನಮಸ್ಕರಿಸುತ್ತೇನೆ, ಹುತಾತ್ಮರಾದ ಸೈನಿಕರ ಕುಟುಂಬದವರ ತ್ಯಾಗವನ್ನು ನಾನು ಕೊಂಡಾಡುತ್ತೇನೆ ಎಂದು ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ತಮ್ಮ ಟ್ವಿಟ್ಟರ್ ಮೂಲಕ ಗೌರವಾರ್ಪಣೆ ಸಲ್ಲಿಸಿದ್ದಾರೆ.

ಟೀಂ ಇಂಡಿಯಾದ ಉಪನಾಯಕ ರೋಹಿತ್‍ಶರ್ಮಾ, ಕ್ರಿಕೆಟಿಗರಾದ ಕುಲ್‍ದೀಪ್‍ಯಾದವ್, ಇರ್ಫಾನ್‍ಪಠಾಣ್ ಸೇರಿದಂತೆ ಹಲವಾರು ಕ್ರೀಡಾಪಟುಗಳು ಹುತಾತ್ಮ ಯೋಧರಿಗೆ ನಮನ ಸಲ್ಲಿಸಿದ್ದಾರೆ.

Facebook Comments