ಸುಟ್ನಿಕ್-ವಿ ಕೊರೊನಾ ಲಸಿಕೆಗೆ ಭಾರತ ಅನುಮತಿ..?

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಏ.12- ಕೊರೊನಾ ವಿರುದ್ಧದ ಹೋರಾಟದಲ್ಲಿ ಮತ್ತೊಂದು ಮೈಲಿಗಲ್ಲು ಸಾಸಲಿರುವ ಭಾರತ ಸುಟ್ನಿಕ್ ವಿ ಲಸಿಕೆಯನ್ನು ಶೀಘ್ರವೇ ಮಾರುಕಟ್ಟೆಗೆ ಪರಿಚಯಿಸುವ ಕ್ಷಣಗಳು ಸಮೀಪಿಸುತ್ತಿವೆ. ಈಗಾಗಲೇ ಕೋವ್ಯಾಕ್ಸಿನ್, ಕೋವಿಶೀಲ್ಡ್ ಲಸಿಕೆಗಳು ಉತ್ಪಾದನೆಯಾಗುತ್ತಿದ್ದು, ಕೊರೊನಾ ವಿರುದ್ಧದ ಮುಂಜಾಗ್ರತಾ ಲಸಿಕೆಯಾಗಿ ಬಳಕೆಯಾಗುತ್ತಿಗೆ.

ಮೂರನೇ ಲಸಿಕೆಯಾಗಿ ಸುಟ್ನಿಕ್ ವಿ ತುರ್ತು ಸಂದರ್ಭದ ಬಳಕೆಗೆ ಅನುಮತಿ ಪಡೆದುಕೊಳ್ಳುವ ಸಾಧ್ಯತೆಗಳಿವೆ.ಡಾ.ರೆಡ್ಡೀಸ್, ಜಾನ್ಸ್ ಆ್ಯಂಡ್ ಜಾನ್ಸ್, ಬಯೋಲಾಜಿಕಲ್ ಇ, ನೋವಾವ್ಯಾಕ್ಸ್, ಜ್ಯುಡಾಸ್ ಲಾಡಿಲ ಸೇರಿದಂತೆ ಸುಮಾರು ಐದು ಉತ್ಪಾದಕ ಸಂಸ್ಥೆಗಳ ಜತೆ ಸಹಯೋಗ ಪಡೆದುಕೊಂಡಿರುವ ಸುಟ್ನಿಕ್ ವಿ ಲಸಿಕೆ ಶೀಘ್ರವೇ ಸಾರ್ವಜನಿಕ ಬಳಕೆಗಾಗಿ ಉತ್ಪಾದನೆ ಆರಂಭಿಸುವ ಸಾಧ್ಯತೆ ಇದೆ.

ರಷ್ಯಾದ ವಿದೇಶ ಬಂಡವಾಳ ಹೂಡಿಕೆ ಯೋಜನೆಯಡಿ ಭಾರತೀಯ ಕಂಪೆನಿಗಳು ಅಭಿವೃದ್ಧಿ ಪಡಿಸಿರುವ ಈ ಲಸಿಕೆಯನ್ನು ತುರ್ತು ಬಳಕೆಗೆ ಅನುಮತಿ ನೀಡಬೇಕೆಂದು ವಿಶೇಷ ತಜ್ಞರ ಸಮಿತಿ ಮುಂದೆ ಮನವಿ ಸಲ್ಲಿಸಲಾಗಿತ್ತು.

ಸಮಿತಿ ಇಂದು ಸಭೆ ನಡೆಸಿದ್ದು, ಅಂತಿಮ ಹಂತದ ಪರಿಶೀಲನೆ ಬಳಿಕ ಅಂಗೀಕಾರ ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಮುಂದಿನ 10 ದಿನಗಳ ಒಳಗೆ ಅನುಮತಿ ದೊರೆಯುವ ನಿರೀಕ್ಷೆಗಳಿದ್ದು, ಮೂರನೆ ಲಸಿಕೆಯಾಗಿ ಸುಟ್ನಿಕ್ ವಿ ಮಾರುಕಟ್ಟೆ ಪ್ರವೇಶಿಸಲಿದೆ.

ಇದಲ್ಲದೆ ಭಾರತೀಯ ಕಂಪೆನಿಗಳು ಅಭಿವೃದ್ಧಿಪಡಿಸಿರುವ ಬೇರೆ ಬೇರೆ ಲಸಿಕೆಗಳು ಪ್ರಯೋಗದಲ್ಲಿದ್ದು, ಮತ್ತಷ್ಟು ಲಸಿಕೆಗಳು ಮಾರುಕಟ್ಟೆಗೆ ಬರುವ ಸಾಧ್ಯತೆಗಳಿವೆ.

Facebook Comments

Sri Raghav

Admin