ಹೈದ್ರಾಬಾದ್‍ನಲ್ಲಿ ಸ್ಪುಟ್ನಿಕ್ ಲಸಿಕೆ ಲಭ್ಯ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಮೇ.14- ಸ್ಪುಟ್ನಿಕ್ ವಿ ಕೊರೊನಾ ಲಸಿಕೆ ಮೊದಲ ಡೋಸ್ ನೀಡಿಕೆ ಹೈದ್ರಾಬಾದ್‍ನಲ್ಲಿ ಆರಂಭಗೊಳ್ಳಲಿದೆ. ಸ್ಪುಟ್ನಿಕ್ ಲಸಿಕೆಗಳನ್ನು ಅಮುದು ಮಾಡಿಕೊಂಡಿರುವ ಡಾ.ರೆಡ್ಡಿ ಲ್ಯಾಬೋರೆಟರಿ ಸಂಸ್ಥೆ ಶೀಘ್ರದಲ್ಲೇ ಹೈದ್ರಾಬಾದ್‍ನಲ್ಲಿ ಮೊದಲ ಡೋಸ್ ನೀಡುವ ಪ್ರಕ್ರಿಯೆಗೆ ಚಾಲನೆ ನೀಡುವುದಾಗಿ ಘೋಷಿಸಿದೆ.

ಕಳೆದ ಮೇ.1 ರಂದೇ ಸ್ಪುಟ್ನಿಕ್ ಲಸಿಕೆಗಳು ಭಾರತಕ್ಕೆ ಆಗಮಿಸಿದ್ದು, ನಿನ್ನೆ ಲಸಿಕೆ ಬಳಕೆಗೆ ಕಾನೂನಾತ್ಮಕ ಒಪ್ಪಿಗೆ ಸಿಕ್ಕಿರುವುದರಿಂದ ಸ್ಪುಟ್ನಿಕ್ ಬಳಕೆಗೆ ಹಸಿರು ನಿಶಾನೆ ದೊರೆತಿದೆ. ಮೊದಲ ಹಂತದ ಲಸಿಕೆ ಲಭ್ಯವಾಗಿದ್ದು ಉಳಿದ ಲಸಿಕೆಗಳು ಹಂತ ಹಂತವಾಗಿ ನಮಗೆ ಸಿಗಲಿದೆ ಎಂದು ಸಂಸ್ಥೆ ಹೇಳಿಕೊಂಡಿದೆ.

ಇದರ ಜೊತೆಗೆ ಬಾರತೀಯ ಲಸಿಕಾ ಉತ್ಪಾದನಾ ಪಾಲುದಾರರೊಂದಿಗೆ ಸ್ಪುಟ್ನಿಕ್ ತಯಾರಿಕೆಯನ್ನು ಆರಂಭಿಸಲು ತೀರ್ಮಾನಿಸಲಾಗಿದೆ. ಸ್ಪುಟ್ನಿಕ್ ಲಸಿಕೆಯ ಒಂದು ಡೋಸಿನ ಬೆಲೆ 948 ರೂ. ಹಾಗೂ ಶೇ.5 ಜಿಎಸ್‍ಟಿ ಇದ್ದು, ಸೋಂಕಿತರಿಗೆ ಆದಷ್ಟು ಕಡಿಮೆ ಬೆಲೆಗೆ ಲಸಿಕೆ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಡಾ.ರೆಡ್ಡಿ ಸಂಸ್ಥೆಯವರು ತಿಳಿಸಿದ್ದಾರೆ.

Facebook Comments

Sri Raghav

Admin