ಸಿದ್ದು ವಿರುದ್ಧ ಎಸ್.ಆರ್.ವಿಶ್ವನಾಥ್ ವಾಗ್ದಾಳಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.28- ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾತಿನ ಮೇಲೆ ಹಿಡಿತ ಇಲ್ಲದಂತೆ ಮಾತನಾಡುತ್ತಾರೆ. ಹಿಂದುತ್ವ ಮತ್ತು ಆರ್ ಎಸ್ ಎಸ್ ಅನ್ನು ವಿರೋಧ ಮಾಡಿದರೆ ಅಲ್ಪಸಂಖ್ಯಾತರು ಮತ ಹಾಕುತ್ತಾರೆ ಎಂಬ ಕೆಟ್ಟ ಅಭಿಪ್ರಾಯವಿದೆ.

ಇವತ್ತು ಆರ್ ಎಸ್ ಎಸ್ ಇಲ್ಲದೇ ಹೋಗಿದ್ದರೆ ದೇಶದ ಪರಿಸ್ಥಿತಿ ಏನಾಗುತ್ತಿತ್ತು ಎಂಬುದನ್ನು ಅವರು ಅರ್ಥ ಮಾಡಿಕೊಳ್ಳಬೇಕು. ನಾವೆಲ್ಲರೂ ಮೂಲ ಆರ್ ಎಸ್ ಎಸ್ ನಿಂದ ಬಂದವರು,. ನಮಗೆ ಯಾವುದೇ ರೀತಿಯಲ್ಲಿ  ನೇಣಿಗೆ ಹಾಕಿ, ಕೈ ಕತ್ತರಿಸಿ, ಕಲ್ಲು ಹೊಡೆಯಿರಿ ಎಂದು ಆರ್ ಎಸ್ ಎಸ್ ಹೇಳಿಲ್ಲ.ಭಾರತ್ ಮಾತಾಕಿ ಜೈ ಎನ್ನಬೇಕು, ವಂದೇ ಮಾತರಂ ಹೇಳಬೇಕು, ನಮ್ಮ ದೇಶಕ್ಕೆ ಯಾವುದೇ ರೀತಿಯ ತೊಂದರೆ ಆದಾಗ ನಾವು ಧ್ವನಿ ಎತ್ತಬೇಕು. ಈ ದಿಸೆಯಲ್ಲಿ ಆರ್ ಎಸ್ ಎಸ್ ಕೆಲಸ ಮಾಡುತ್ತಿದೆ.

ಸಿದ್ದರಾಮಯ್ಯನವರು ಇನ್ನು ಮುಂದೆಯಾದರೂ ಇಂತಹ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು. ಚಡ್ಡಿಗಳು ಎಂದು ಹೇಳುವುದನ್ನು ನಿಲ್ಲಿಸಬೇಕು. ಬಹುಶಃ ಮೊನ್ನೆ ವಿಧಾನಸಭೆಯಲ್ಲಿ ಅವರ ಪಂಚೆ ಉದುರಿದಾಗ ಈ ಚಡ್ಡಿಯೇ ಅವರ ಮಾನ ಉಳಿಸಿದೆ. ದೇಶದ ಗೌರವ, ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ಹೋರಾಟ ಮಾಡಿಕೊಂಡಿರುವ ಸಂಸ್ಥೆಯಿದು. ಒಮ್ಮೆ ಸಿದ್ದರಾಮಯ್ಯನವರು ನಮ್ಮ ಒಟಿಸಿ ಕ್ಯಾಂಪ್ ಗೆ ಬಂದು ಅಲ್ಲಿನ ಶಿಸ್ತು ದೇಶಭಕ್ತಿಯನ್ನು ಕಲಿಯಲಿ.

ಹೀಗೆ ಬಂದರೆ ಅವರ ಮನಃಸ್ಥಿತಿ ಬದಲಾಗುತ್ತದೆ. ದಯಮಾಡಿ ಸಿದ್ದರಾಮಯ್ಯನವರೇ ನೀವು ಒಂದು ತಿಂಗಳ ಮಟ್ಟಿಗೆ ನಮ್ಮ ಆರ್ ಎಸ್ ಎಸ್ ನ ಒಟಿಸಿಗೆ ಬನ್ನಿ. ನೀವೆಲ್ಲಾ ತಾಲಿಬಾನ್ ಪರವಾಗಿುವವರು ನೀವು. ನೀವು ಒಮ್ಮೆಯೂ ತಾಲಿಬಾನ್ ವಿರೋಧಿಸಿಲ್ಲ. ತಾಲಿಬಾನ್ ಮನಸ್ಥಿತಿ ಕಾಂಗ್ರೆಸ್ ನವರಿಗೆ ಇದೆ.

ನೀವು ಎಷ್ಟು ಆರ್ ಎಸ್ ಎಸ್ ಅನ್ನು ಟೀಕೆ ಮಾಡುತ್ತೀರಿ, ನರೇಂದ್ರ ಮೋದಿಯವ ರನ್ನು ಟೀಕೆ ಮಾಡುತ್ತೀರಿ ಅಷ್ಟು ಕಪ್ಪು ಚುಕ್ಕೆ ನಿಮಗಾಗುತ್ತದೆ. ನಿಮಗೆ ತುಂಬಾ ಡ್ಯಾಮೇಜ್ ಆಗುತ್ತದೆ. ನೀವು ಹೀಗೆ ಮಾತನಾಡುತ್ತಾ ಹೋದರೆ ಜನ ನಿಮ್ಮನ್ನು ಲೆಕ್ಕಕ್ಕೆ ಇಟ್ಟುಕೊಳ್ಳೋಲ್ಲ. ನೀವು ಸೈಕಲ್, ಜಟಕಾ ಹತ್ತಿ ರಾಜ್ಯ ಸುತ್ತುವ ವೇಳೆಗೆ ನಾವು ಮತ್ತೊಮ್ಮೆ ಅಧಿಕಾರಕ್ಕೆ ಬರುತ್ತೇವೆ.

Facebook Comments