ನಾಲ್ಕರ ಮಾಯೆಯಲ್ಲಿ ರಾಹುಲ್ ಪಡೆ

ಈ ಸುದ್ದಿಯನ್ನು ಶೇರ್ ಮಾಡಿ

ದುಬೈ, ಅ. 24- ಹ್ಯಾಟ್ರಿಕ್ ಗೆಲುವಿನ ಸಂತಸದಲ್ಲಿರುವ ಕಿಂಗ್ಸ್ ಇಲೆವೆನ್ ಪಂಜಾಬ್‍ಗೆ ತಂಡ ಈಗ ನಾಲ್ಕರ ಮಾಯೆಯಲ್ಲಿ ವಿಜೃಂಭಿಸಲಿದೆ.  ಇಂದು ಸನ್‍ರೈಸರ್ಸ್ ಹೈದ್ರಾಬಾದ್ ವಿರುದ್ಧ ನಡೆಯುವ ಪಂದ್ಯದಲ್ಲಿ ಗೆದ್ದು ಸತತ ನಾಲ್ಕನೇ ಪಂದ್ಯ ಗೆದ್ದ ಎರಡನೇ ತಂಡವಾಗಿ ವಿಜೃಂಭಿಸುವುದರೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಲು ಕನ್ನಡಿಗ ಕೆ.ಎಲ್.ರಾಹುಲ್ ಪಡೆ ಸಜ್ಜಾಗಿದೆ.

#ಕನ್ನಡಿಗರ ವೈಭವ:
ಎರಡು ತಂಡಗಳು ವಿಜೃಂಭಿಸುತ್ತಿರುವುದು ಕೂಡ ಕನ್ನಡಿಗರೇ. ಕಿಂಗ್ಸ್‍ನ ಹ್ಯಾಟ್ರಿಕ್ ಗೆಲುವಿನಲ್ಲಿ ಕೆ.ಎಲ್.ರಾಹುಲ್, ಮಾಯಂಕ್ ಅಗರ್‍ವಾಲ್ ಅಗ್ರ ಪಾತ್ರ ವಹಿಸಿದ್ದರೆ, ಕಳೆದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸ್ಫೋಟಕ ಅರ್ಧಶತಕ (83 ರನ್) ಸಿಡಿಸಿದ ಮನೀಷ್ ಪಾಂಡೆ ಸನ್‍ರೈಸರ್ಸ್ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದ್ದು ಇಂದಿನ ಪಂದ್ಯದಲ್ಲೂ ಎಸ್‍ಆರ್‍ಎಚ್‍ಗೆ ಗೆಲುವು ತಂದುಕೊಡುವ ಮೂಲಕ ತಂಡವನ್ನು 4ನೇ ಹಂತಕ್ಕೇರಿಸಲು ಸಜ್ಜಾಗಿರುವುದರಿಂದ ಇದು ಕನ್ನಡಿಗರ ಕಾಳಗವೆಂದೇ ಬಿಂಬಿಸಬಹುದು.

#ಸೋತರೆ ಪ್ಲೇಆಫ್ ಕಠಿಣ:
ಎರಡು ತಂಡಗಳು ಆಡಿದ 4 ಪಂದ್ಯಗಳಲ್ಲಿ ಗೆದ್ದು 8 ಅಂಕಗಳನ್ನು ಕಲೆಹಾಕಿದ್ದು ಪ್ಲೇಆಫ್‍ಗೇರಲು ಇನ್ನುಳಿದ ಪಂದ್ಯಗಳು ಕಠಿಣವಾಗಿರುವುದರಿಂದ ಇಂದು ಸೋಲುವ ತಂಡಕ್ಕೆ ಪ್ಲೇಆಫ್À ಹಾದಿ ಕಠಿಣವಾಗಲಿದ್ದು ಜಿದ್ದಾಜಿದ್ದಿನ ಹೋರಾಟ ನಡೆಸಲಿರುವುದರಿಂದ ವೀಕೆಂಡ್‍ನಲ್ಲಿ ಕ್ರಿಕೆಟ್ ಪ್ರೇಮಿಗಳ ಕ್ರೇಜ್ ಹೆಚ್ಚಿಸಲಿದೆ.

#ತ್ರಿಮೂರ್ತಿಗಳ ಮೇಲೆ ಭರವಸೆ:
ಸನ್‍ರೈಸರ್ಸ್ ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವು ತ್ರಿಮೂರ್ತಿಗಳ ಮೇಲೆಯೇ ಹೆಚ್ಚು ಭರವಸೆ ಹೊಂದಿದೆ. ಕಿಂಗ್ಸ್ ಪಡೆ ಕೆ.ಎಲ್.ರಾಹುಲ್, ಕ್ರಿಸ್‍ಗೇಲ್, ಮಯಾಂಕ್ ಅಗರ್ವಾಲ್‍ರ ಬ್ಯಾಟಿಂಗ್ ಅನ್ನು ನೆಚ್ಚಿಕೊಂಡಿದ್ದರೆ, ಎಸ್‍ಆರ್‍ಎಚ್ ನಾಯಕ ಡೇವಿಡ್ ವಾರ್ನರ್, ಬ್ಯಾರಿಸ್ಟೋ, ಮನೀಷ್‍ಪಾಂಡೆ ಯ ಬ್ಯಾಟಿಂಗ್ ಆಧರಿಸಿದೆ.

#ಕೇನ್ ವಾಪಸ್:
ಭುಜದ ನೋವಿನಿಂದ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಿಂದ ಹೊರಗುಳಿದಿದ್ದ ಸನ್‍ರೈಸರ್ಸ್ ಹೈದ್ರಾಬಾದ್‍ನ ಸ್ಫೋಟಕ ಆಟಗಾರ ಕೇನ್‍ವಿಲಿಯಮ್ಸ್ ಇಂದಿನ ಪಂದ್ಯಕ್ಕೆ ವಾಪಸ್ಸಾಗುವುದರಿಂದ ಆ ತಂಡದ ಬ್ಯಾಟಿಂಗ್ ಶಕ್ತಿ ಹೆಚ್ಚಿದೆ.

ಕಿಂಗ್ಸ್ ಹಾಗೂ ಎರಡು ತಂಡಗಳು ಬ್ಯಾಟಿಂಗ್‍ನಷ್ಟೇ ಬೌಲಿಂಗ್‍ನಲ್ಲೂ ಸ್ಟ್ರಾಂಗ್ ಆಗಿದ್ದು ಮೊಹಮ್ಮದ್ ಶಮಿ, ಜೆಮ್ನಿನಿಶಮ್, ಮುರುಗನ್ ಅಶ್ವಿನ್ ಸನ್ಸ್ ಬ್ಯಾಟ್ಸ್‍ಮನ್‍ಗಳ ರನ್ ದಾಹಕ್ಕೆ ಬ್ರೇಕ್ ಹಾಕಲು ಸಜ್ಜಾಗಿದ್ದರೆ, ರಶೀದ್ ಖಾನ್, ಜೆಸನ್‍ಹೋಲ್ಡರ್, ನಟರಾಜನ್ ಕಿಂಗ್ಸ್‍ನ ಬ್ಯಾಟಿಂಗ್ ಶಕ್ತಿ ತಗ್ಗಿಸಲು ಮುಂದಾಗಿದ್ದಾರೆ.

#ಹಿಂದಿನ ಪಂದ್ಯದ ಫಲಿತಾಂಶ:
ಅಬುದಾಬಿಯಲ್ಲಿ ಈ ಹಿಂದೆ ಎರಡು ತಂಡಗಳು ಮುಖಾಮುಖಿಯಾಗಿದ್ದ ಬ್ಯಾರಿಸ್ಟೋರ ಆಕರ್ಷಕ 97 ರನ್‍ಗಳಿಂದ ಹೈದ್ರಾಬಾದ್ 201 ರನ್ ಗಳಿಸಿತ್ತು. ಈ ಗುರಿಯನ್ನು ಬೆನ್ನಟ್ಟಿದ ಕಿಂಗ್ಸ್ ಪೂರನ್‍ರ ಅಕ್ರಮಣಕಾರಿ ಆಟ (77 ರನ್, 37 ಎಸೆತ)ದ ಸಹಾಯವಿದ್ದರೂ ರಶೀದ್‍ಖಾನ್‍ರ ಬೌಲಿಂಗ್ ಜಾದೂ( 12 ರನ್‍ಗೆ 3 ವಿಕೆಟ್)ಗೆ ತಲೆಬಾಗಿ 69 ರನ್‍ಗಳಿಂದ ಸೋಲು ಕಂಡಿತ್ತು.

Facebook Comments