ಬುದ್ಧ ಬಸವ ಗಾಂಧಿ ಇಲ್ಲಿಯೇ ಇದ್ದಾರೆ

ಈ ಸುದ್ದಿಯನ್ನು ಶೇರ್ ಮಾಡಿ

ಧ್ಯಾನಾಸಕ್ತರಾಗಿ ಕುಳಿತಿರುವ ಗಾಂಧಿ ಮಂದಸ್ಮಿತ ನಗುವನ್ನು ಬೀರುವ ಗೌತಮ ಬುದ್ಧ ರಾಧಾಕೃಷ್ಣ ಕುದುರೆಯ ನೀರಿದ ಶಿವಾಜಿ ಜಗತ್ತಿಗೆ ಶಾಂತಿಯನ್ನು ಸಾರಿದ ಬಸವಣ್ಣ ಗುರು ಸಾರ್ವಭೌಮ ರಾಘವೇಂದ್ರ ಶ್ರೀ ಶಿವಕುಮಾರ ಸ್ವಾಮೀಜಿ ಬಾಲಗಂಗಾಧರನಾಥ ಸ್ವಾಮೀಜಿ ಅಂಬೇಡ್ಕರ್‍ರವರ ಶಿಲ್ಪ ಹೀಗೆ ಒಂದೇ ಎರಡೇ ಒಂದು ಕ್ಷಣ.

ಅಲ್ಲಿ ತೆರಳಿದರೆ ಸಾಕು ಭಾವಪರವಶರಾಗಿ ಇದಂತೂ ಸತ್ಯ ಇಲ್ಲಿಯ ವಿಭಿನ್ನ ಶಿಲ್ಪಗಳು ನಿಜವಾಗಿಯೂ ಪ್ರತಿ ಸಾಧು ಸಂತರು ಮಹಾನ್ ವ್ಯಕ್ತಿಗಳ ಇರುವಿಕೆಯನ್ನು ಸೂಚಿಸುವಂತಿದೆ. ಇಂತಹ ವಿಭಿನ್ನ ಕಲಾಕೃತಿ, ಶಿಲ್ಪ ಕಲಾಕೃತಿಗಳನ್ನು ರಚಿಸಿ ಜನಮಾನಸದಲ್ಲಿ ಇದ್ದವರು. ಕಲಾವಿದರಾದ ಶ್ರೀ ಕೃಷ್ಣ ನಾಯಕ್ ಇವರು ಉತ್ತರ ಕನ್ನಡ ಜಿಲ್ಲಾಯ ಹೊನ್ನಾವರದ ಇಡಗುಂಜಿಯವರು ಇವರಿಗೆ ಬಾಲ್ಯದಲ್ಲಿಯೇ ಕಲೆಯ ಬಗ್ಗೆ ಅಪಾರ ಆಸಕ್ತಿ ಪ್ರಕೃತಿಯ ಮಡಿಲು ಮನೆಯ ಮುಂದಿನ ಶರಾವತಿ ನದಿ ಅಲ್ಲಿಯ ಬೆಟ್ಟಗುಡ್ಡಗಳೆಲ್ಲ ಇವರಿಗೆ ಪರಿಚಿತ.

ಇವೆಲ್ಲವೂ ಕಲಾ ವಸ್ತುವನ್ನಾಗಿಸಿಕೊಂಡ ಇವರು ತಮ್ಮ ಯೋಚನೆಯಲ್ಲಿ ವಿಭಿನ್ನ ಶಿಲ್ಪಕಲಾಕೃತಿಗಳನ್ನು ತಯಾರಿಸಿ ಇಂದು ನಾಡಿನ ಪ್ರಸಿದ್ಧ ಕಲಾವಿದರ ಸಾಲಿನಲ್ಲಿದ್ದಾರೆ. ಇಡಗುಂಜಿಯಲ್ಲಿರುವಾಗ ಇವರ ತಂದೆಯಿಂದ ಪ್ರೇರೇಪಿತರಾದ ಇವರು ರಚಿಸಿದ ಸಿಮೆಂಟ್ ಡಿಸೈನ್ ಇನ್ನಿತರ ಮಾದರಿಗಳಿಂದ ಆಕರ್ಷಿತರಾಗಿ ತಾವು ಕೂಡ ಇಂತಹ ಕಲಾಕೃತಿಗಳನ್ನು ರಚಿಸುವ ಆಸಕ್ತಿ ಹೊಂದಿದ್ದರು.

ಕೃಷ್ಣ ನಾಯ್ಕ, ಜಿ.ಎಲ್.ಭಟ್ಟರವರ ಹತ್ತಿರ ಕೆನರಾ ಬ್ಯಾಂಕ್ ಆಫ್ಹಾ ಕರಕುಶಲ ಕೇಂದ್ರದಲ್ಲಿ ಎರಡು ವರ್ಷಗಳ ಕಾಲ ತರಬೇತಿ ಪಡೆದರು. ಕಲಾಕೃತಿಗಳ ಅಲ್ಲಿ ಕಲ್ಲು ಮತ್ತು ಮರದ ಕೆತ್ತನೆಯ ತರಬೇತಿ ಪಡೆದದ್ದು ನಂತರ ಕುವೆಂಪು ಕಲಾಶಾಲೆಯಲ್ಲಿ ಐದು ವರ್ಷಗಳ ಕಾಲ ಅಧ್ಯಯನ ಮಾಡಿದ್ದು ಬಹಳ ಸಹಾಯವಾಯಿತು
ಕಲಾ ಪಯಣ ಆರಂಭವಾಗಿದ್ದು ಹೀಗೆ ಕಲಾವಿದ ಕೃಷ್ಣ ನಾಯಕ್‍ರವರು ಮೊದಲು ಮರ ಮತ್ತು ಕಲ್ಲಿನ ಕೆತ್ತನೆಯಲ್ಲಿ ಕಾರ್ಯ ಆರಂಭಿಸಿದರೂ ಕೂಡ ಅವರನ್ನು ಆಕರ್ಷಿಸಿದ್ದು ಶಿಲ್ಪಕಲೆ. ಅವರಿಗೆ ತಾವು ವಿದ್ಯಾರ್ಥಿ ದೆಸೆಯಲ್ಲಿ ನೋಡಿದ ಕುದುರೆ ಲಕ್ಷ್ಮಿ ಗಣೇಶ ಇತ್ಯಾದಿ ಶಿಲ್ಪಗಳ ಆಕರ್ಷಣೆಗೆ ಒಳಗಾಗಿ ಅದೇ ಮಾದರಿಯ ಶಿಲ್ಪಗಳನ್ನು ರಚಿಸಲು ಆರಂಭಿಸಿದರು.

ಕೃಷ್ಣ ನಾಯಕ್ ರವರ ಕ್ರಿಶ್ ಆರ್ಟ್ ವಲ್ರ್ಡ್
ಕೃಷ್ಣ ನಾಯಕ್‍ರವರು ಬೆಂಗಳೂರಿನ ನಾಗರಭಾವಿಯಲ್ಲಿ ಕ್ರಿಶ್ ಪಾರ್ಟ್ ವಲ್ಡರ್ï ಎಂಬ ಕಲಾ ಗ್ಯಾಲರಿ ಆರಂಭಿಸಿ ಇಲ್ಲಿ ತಾವು ರಚಿಸಿದ ಮಹಾನ್ ವ್ಯಕ್ತಿಗಳ ಶಿಲ್ಪಗಳನ್ನು ಅಲ್ಲಿ ಪ್ರದರ್ಶನಕ್ಕೆ ಇಟ್ಟಿದ್ದಾರೆ. ಒಂದು ವೇಳೆ ಅಲ್ಲಿ ಪ್ರವೇಶಿಸಿದವರು ಯಾವುದೋ ಒಂದು ಕಲಾ ಲೋಕಕ್ಕೆ ಪ್ರವೇಶಿಸಿದ ಅನುಭವ ಆಗುತ್ತದೆ.
ರಾಜ್ಯದ ಮೂಲೆ ಮೂಲೆಗಳಲಿಲ್ಲ ಶಿಲ್ಪ ಕಲಾಕೃತಿಗಳು ಕೃಷ್ಣ ನಾಯಕ್ ರವರು ರಾಜ್ಯದ ವಿಭಿನ್ನ ಭಾಗಗಳಲ್ಲಿ ತಮ್ಮ ಕೈಚಳಕದಲ್ಲಿ ಅನೇಕ ಶಿಲ್ಪಗಳನ್ನು ರಚಿಸಿ ಎಲ್ಲರ ಜನಮಾನಸದಲ್ಲಿ ಚಿರಸ್ಥಾಯಿಯಾಗಿದ್ದಾರೆ.

ಇವರು ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ಮುಂಭಾಗ ಬುದ್ಧ ಬಸವಣ್ಣ ಅಂಬೇಡ್ಕರ್ ಶಿಲ್ಪಗಳು ರವೀಂದ್ರ ಕಲಾಕ್ಷೇತ್ರದ ಮುಂಭಾಗದಲ್ಲಿ ಇರುವ ಬುದ್ಧನ ಶಿಲ್ಪ ಮಲ್ನಾಡ್ ಇಂಜಿನಿಯರಿಂಗ್ ಕಾಲೇಜು ಮುಂಭಾಗದ ಗಣೇಶನ ಶಿಲ್ಪ ಹಾಸನ ಮೈಸೂರಿನ ಭೋಗಾದಿಯಲ್ಲಿ ಇರುವ ಶಿಲ್ಪಗಳು ಇದರ ಜೊತೆಗೆ ಕರ್ನಾಟಕದ ಸಂಸ್ಕøತಿ ಬಿಂಬಿಸುವ ಉಬ್ಬು ಶಿಲ್ಪಗಳು ತುಮಕೂರಿನ ಸಿದ್ದಗಂಗಾ ಮಠದಲ್ಲಿ ಶ್ರೀ ಶಿವಕುಮಾರ ಸ್ವಾಮೀಜಿಯವರ ಶಿಲ್ಪ ಮತ್ತು ಬಾಲಗಂಗಾಧರ ಸ್ವಾಮೀಜಿಯವರ 9 ಅಡಿ ಎತ್ತರದ ಶಿಲ್ಪ ರಚಿಸಿ ಮನೆ ಮಾತಾಗಿದ್ದಾರೆ.

ಸುಮಾರು 25 ವರ್ಷಗಳಿಂದ ಕಲಾ ಸೇವೆ ಮಾಡುತ್ತಿರುವ ಅವರು ಬಹಳಷ್ಟು ಶಿಲ್ಪಗಳನ್ನು ರಚಿಸಿದ್ದಾರೆ ಯಾವುದೇ ಶಿಲ್ಪಗಳನ್ನು ರಚಿಸುವುದು ಸುಲಭದ ಮಾತಲ್ಲ ಮೊದಲು ಮಣ್ಣಿನಲ್ಲಿ ಕಲಾಕೃತಿ ಮಾಡಿ ಸಿಲಿಕಾನ್ ಅಲ್ಲಿ ಮಾದರಿ ಮಾಡಿದನಂತರ ಫೈಬರ್‍ನಲ್ಲಿ ತಯಾರಿಸಿ ಕಂಚಿನಲ್ಲಿ ಸರಿಯಾಗಿ ಮಾಡಬೇಕಾದರೆ ಸುಮಾರು ಆರರಿಂದ ಎಂಟು ತಿಂಗಳ ಪರಿಶ್ರಮದ ಅಗತ್ಯವಿದೆ ಎಂದು ಕಲಾವಿದ ಕೃಷ್ಣ ನಾಯಕ್ ಹೇಳುತ್ತಾರೆ.

ಬೆಂಗಳೂರಿನಲ್ಲಿ ಕ್ರಿಶ್ ಆರ್ಟ್ ವಲ್ಡರ್ï ಎಂಬ ಕಲಾ ಗ್ಯಾಲರಿಯನ್ನು ಸ್ಥಾಪಿಸಿ ಇಲ್ಲಿ ವಿಭಿನ್ನ ಶಿಲ್ಪ ಕಲಾಕೃತಿಗಳನ್ನು ಪ್ರದರ್ಶನಕ್ಕೆ ಇಟ್ಟಿರುವುದು ವಿಶೇಷ . ಇಂತಹ ಅದ್ಭುತ ಕಲಾವಿದರ ಸಾಧನೆಗೆ ವಂದಿಸಬೇಕು ಇವರ ಕೈಯಿಂದ ಹಲವಾರು ಶಿಲ್ಪಕಲಾಕೃತಿಗಳು ಮೂಡಲಿ ಎಂದು ಹಾರೈಸೋಣ
#ಬಳಕೂರು ವಿ ಎಸ್ ನಾಯಕ

Facebook Comments