ಲಂಕಾದಲ್ಲಿ ಮುಂದುವರಿದ ಉಗ್ರರ ಅಟ್ಟಹಾಸ : ಮತ್ತೊಂದು ಬಾಂಬ್ ಸ್ಫೋಟ

ಈ ಸುದ್ದಿಯನ್ನು ಶೇರ್ ಮಾಡಿ

ಕೊಲಂಬೋ, ಏ.25- ಕೊಲಂಬೋದಲ್ಲಿ 360ಕ್ಕೂ ಹೆಚ್ಚು ಮಂದಿ ಹತರಾದ ಸರಣಿ ಬಾಂಬ್ ಸ್ಫೋಟಗಳ ಭೀಭತ್ಸ್ ಹತ್ಯಾಕಾಂಡದಿಂದ ಶ್ರೀಲಂಕನ್ನರು ಹೆದರಿ ಕಂಗಲಾಗಿರುವುದಲ್ಲದೆ, ಉಗ್ರಗಾಮಿಗಳ ಅಟ್ಟಹಾಸ ಮುಂದುವರಿದಿದೆ. ಇಂದು ಬೆಳಗ್ಗೆ ಮತ್ತೊಂದು ಬಾಂಬ್ ಸ್ಫೋಟಗೊಂಡಿದ್ದು, ಜನರು ಬೆಚ್ಚಿಬಿದ್ಧಿದ್ಧಾರೆ.

ಮುಂದೇನಾಗುತ್ತದೆಯೇ ಎಂಬ ಆತಂಕದಲ್ಲಿ ಶ್ರೀಲಂಕನ್ನರು ದಿನದೂಡುವಂತಾಗಿದೆ. ಒಂದೆಡೆ ದ್ವೀಪರಾಷ್ಟ್ರ ಸಹಜ ಸ್ಥಿತಿಯತ್ತ ಮರಳುತ್ತಿದ್ದರೂ, ಮತ್ತೊಂದೆಡೆ ಬೂದಿ ಮುಚ್ಚಿದ ಕೆಂಡದಂಥ ಸ್ಥಿತಿ ನಿರ್ಮಾಣವಾಗಿದೆ.

ಕೊಲಂಬೋದಿಂದ 40 ಕಿ.ುೀ. ದೂರದ ಪಗೋಡ ಪ್ರದೇಶದ ಮ್ಯಾಜಿಸ್ಟ್ರೇಟ್ ಕಚೇರಿ ಬಳಿ ಈ ಸ್ಫೋಟ ಸಂಭವಿಸಿದೆ. ಸಾವು-ನೋವು ಉಂಟಾಗಿಲ್ಲ ಎಂದು ಪ್ರಾಥಮಿಕ ವರದಿ ತಿಳಿಸಿವೆ.

ದ್ವೀಪರಾಷ್ಟ್ರದಲ್ಲಿ ಮತ್ತೆ ಬಾಂಬ್ ಸ್ಫೋಟಗಳು ನಡೆಯುವ ಸಾಧ್ಯತೆ ಬಗ್ಗೆ ಲಭಿಸಿರುವ ಖಚಿತ ಮಾಹಿತಿ ಹಿನ್ನಲೆಯಲ್ಲಿ ಸೇನಾಪಡೆ ಸಹಾಯದೊಂದಿಗ ಶ್ರೀಲಂಕಾದ ಪೊಲೀಸರು ತೀವ್ರ ಶೋಧ ಮುಂದುವರಿಸಿದ್ಧಾರೆ. ಈಸ್ಟರ್ ಸಂಡೆಯಂದು ನಡೆದ ಭೀಕರ ನರಮೇಧಕ್ಕೆ ಸಂಬಂಧಿಸಿದಂತೆ ಇಂದು ಇನ್ನೂ 16 ಶಂಕಿತರನ್ನು ಬಂಧಿಸಲಾಗಿದೆ.

ಇದರೊಂದಿಗೆ ಈವರೆಗೆ ಬಂಧಿಸಲ್ಪಟ್ಟವರ ಸಂಖ್ಯೆ 76ಕ್ಕೇರಿದೆ. ಬಂಧಿತರನ್ನು ತೀವ್ರ ಚಾರಣೆಗೆ ಒಳಪಡಿಸಲಾಗಿದ್ದು, ಮತ್ತಷ್ಟು ಮಹತ್ವದ ಮಾಹಿತಿಗಳನ್ನು ಕಲೆ ಹಾಕಲಾಗಿದೆ.

ಓರ್ವ ಮಳೆ ಸೇರಿದಂತೆ ಒಂಭತ್ತು ಮಾನವ ಬಾಂಬರ್‍ಗಳು ಕಳೆದ ಭಾನುವಾರ ಕೊಲಂಬೋದ ಐದು ಚರ್ಚ್‍ಗಳು ಮತ್ತು ಮೂರು ಐಷಾರಾಮಿ ಹೋಟೆಲ್‍ಗಳ ಮೇಲೆ ದಾಳಿ ನಡೆಸಿ 360ಕ್ಕೂ ಹೆಚ್ಚು ಜನರನ್ನು ಹತ್ಯೆ ಮಾಡಿದ್ದರು.

ಈ ಕೃತ್ಯ ನಡೆಸಿದವರು ಮತ್ತು ಇದಕ್ಕೆ ಕುಮ್ಮಕ್ಕು ನೀಡಿದವರೆಲ್ಲರೂ ಸ್ಥಳೀಯ ಇಸ್ಲಾಮಿಕ್ ಉಗ್ರಗಾಮಿ ಸಂಘಟನೆ ನ್ಯಾಷನಲ್ ಥೋಡ್ ಜಮಾತ್(ಎನ್‍ಟಿಜೆ)ಗೆ ಸೇರಿದವರು ಇವರು ಐಸಿಸ್ ಭಯೋತ್ಪಾದನೆ ಸಂಘಟನೆ ಜೊತೆ ನಿಕಟ ಸಂಪರ್ಕ ಹೊಂದಿದೆ.

ಈ ಭೀಕರ ವಿಧ್ವಂಸಕ ಕೃತ್ಯದ ಹಿಂದೆ ಶ್ರೀಲಂಕಾದ ಶ್ರೀಮಂತ ಕುಟುಂಬವೊಂದರ ಕೈವಾಡ ಇರುವುದೂ ದೃಢಪಟ್ಟಿದ್ದು ತನಿಖೆ ಮತ್ತಷ್ಟು ತೀವ್ರಗೊಂಡಿದೆ.
ರಾಜಧಾನಿ ಕೊಲಂಬೋ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳು ಹಾಗೂ ಸೂಕ್ಷ್ಮ ಸ್ಥಳಗಳಲ್ಲಿ ತೀವ್ರ ಶೋಧ ನಡೆಸಲು ಲಂಕಾ ಪೊಲೀಸರಿಗೆ ಸಹಸ್ರಾರು ಯೋಧರು ನೆರವಾಗುತ್ತಿದ್ದಾರೆ.

ದೇಶಾದ್ಯಂತ ಭದ್ರತೆ ಮತ್ತು ರಕ್ಷಣಾ ಕಾರ್ಯಾಚರಣೆಗಾಗಿ 5,000ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಮೊನ್ನೆ ಕೊಲಂಬೊ ವಿಮಾನ ನಿಲ್ದಾಣ ಸೇರಿದಂತೆ ಕೆಲವಡೆ ಸ್ಫೋಟಕಗಳು ಪತ್ತೆಯಾಗಿದ್ದು ಮತ್ತಷ್ಟು ಭಯ-ಭೀತಿಯ ವಾತಾವರಣ ಸೃಷ್ಟಿಯಾಗಿತ್ತು.

Facebook Comments