ನಮ್ಮವರನ್ನು ಕಳೆದುಕೊಂಡು ತಬ್ಬಲಿಗಳಾಗಿದ್ದೇವೆ

ಈ ಸುದ್ದಿಯನ್ನು ಶೇರ್ ಮಾಡಿ

ನೆಲಮಂಗಲ,ಏ.24- ಶ್ರೀಲಂಕಾದ ಕೊಲಂಬೊದಲ್ಲಿ ನಡೆದ ಆತ್ಮಾಹುತಿ ದಾಳಿ ಪ್ರಕರಣದಲ್ಲಿ ಮೃತಪಟ್ಟಿರುವ ಗೋವೇನಹಳ್ಳಿ ಶಿವಣ್ಣ, ಹನುಮಂತರಾಯಪ್ಪ ಹಾಗೂ ಲಕ್ಷ್ಮಿನಾರಾಯಣ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದ್ದು ನೆಲಮಂಗಲದಲ್ಲಿ ನೀರವ ಮೌನ ಆವರಿಸಿದೆ.

ಮೂವರ ಮೃತದೇಹಗಳು ಪಟ್ಟಣಕ್ಕೆ ಆಗಮಿಸುತ್ತಿದ್ದಂತೆ ಕುಟುಂಬ ಸದಸ್ಯರಲ್ಲಿ ಮಡುಗಟ್ಟಿದ ದುಃಖದ ಕಟ್ಟೆ ಒಡೆದು ನಮ್ಮವರನ್ನು ಕಳೆದುಕೊಂಡು ತಬ್ಬಲಿಗಳಾಗಿದ್ದೇವೆ ಎಂದು ಗೋಳಾಡುತ್ತಿದ್ದದು ನೆರೆದವರ ಕಣ್ನಾಲೆಗಳು ತುಂಬಿಬಂದವು.

ಗೋವೇನಹಳ್ಳಿ ಶಿವಣ್ಣ ಅವರ ತಮ್ಮ ಪ್ರಕಾಶ್ ಅವರು ಅಣ್ಣ ಸಾವಿಗೆ ತೀವ್ರ ಸಂತಾಪ ವ್ಯಕ್ತಪಡಿಸಿ ನಮ್ಮೆಲ್ಲರ ಕುಟುಂಬಕ್ಕೆ ಶಿವಣ್ಣ ಅವರೇ ಆಧಾರವಾಗಿದ್ದರು. ಅಲ್ಲದೆ ರಾಜಕೀಯವಾಗಿ ಬೆನ್ನೆಲುಬಾಗಿದ್ದರು.

ಅವರ ಅಗಲಿಕೆಯಿಂದ ತಮ್ಮ ಕುಟುಂಬಕ್ಕೆ ತೀವ್ರ ಆಘಾತವಾಗಿದೆ ಎಂದು ಕಣ್ಣೀರಿಟ್ಟರು. ಹನುಮಂತರಾಯಪ್ಪ ಅವರ ಸಹೋದರ ಬೂದಿಹಾಳ್ ಗ್ರಾಪಂ ಸದಸ್ಯ ವೆಂಕಟೇಶ್ ಅವರು ಪತ್ರಿಕೆಯೊಂದಿಗೆ ಮಾತನಾಡಿ, ಇಡೀ ಕುಟುಂಬಕ್ಕೆ ಆಧಾರಸ್ತಂಭ ವಾಗಿದ್ದವರನ್ನು ಕಳೆದುಕೊಂಡು ನೋವು ಅನುಭವಿಸುವಂತಾಗಿದೆ.

ಅವರು ನಮಗೆ ರಾಜಕೀಯ ಗುರುವಾಗಿದ್ದರು. ಅವರ ಮಾರ್ಗದರ್ಶನದಲ್ಲಿ ನಾವು ಮುನ್ನಡೆಯುತ್ತಿದ್ದೆವು. ಇದೀಗ ಅವರ ಸಾವಿನಿಂದ ದಿಕ್ಕೇ ತೋಚದಂತಾಗಿದೆ ಎಂದು ನೋವು ತೋಡಿಕೊಂಡಿದ್ದಾರೆ.

ರಾಜಕಾರಣದಲ್ಲಿ ಅವರಿಗೆ ತುಂಬಾ ಆಸಕ್ತಿಯಿತ್ತು. ಅವರ ಅಗಲಿಕೆಯಿಂದ ಕುಟುಂಬದ ಯಜಮಾನನನ್ನು ಕಳೆದುಕೊಂಡಂತಾಗಿದೆ ಎಂದು ವೆಂಕಟೇಶ್ ಕಣ್ಣೀರು ಹಾಕಿದರು. ಆತ್ಮಾಹುತಿ ಬಾಂಬ್ ದಾಳಿಯಲ್ಲಿ ತಮ್ಮ ಕುಟುಂಬದ ಲಕ್ಷ್ಮಿನಾರಾಯಣ್ ಅವರು ಮೃತ¥ಟ್ಟಿರುವ ವಿಷಯ ತಿಳಿದು ಆಘಾತವಾಯಿತು.

ಒಂದು ಕ್ಷಣ ದಿಕ್ಕೇ ತೋಚದಂತಾಗಿದೆ. ಮುಂದೇನು ಮಾಡೋದು ಎಂಬ ಚಿಂತೆಯಲ್ಲಿದ್ದೇವೆ ಎಂದು ಕುಟುಂಬ ಸದಸ್ಯರು ತೀವ್ರ ಶೋಕ ವ್ಯಕ್ತಪಡಿಸಿದರು. ರಾಜಕೀಯವಾಗಿ ಅವರು ಬೆಳೆಯುತ್ತಾ ನಮಗೂ ಸಹ ಆಧಾರವಾಗಿದ್ದರು. ಮನೆಯ ಹಿರಿಯರನ್ನು ಕಳೆದುಕೊಂಡಿರುವುದು ತೀವ್ರ ನೋವುಂಟಾಗಿದೆ ಎಂದು ಸದಸ್ಯರು ಮೌನವಾದರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ